More

    2ನೇ ದಿನವೂ ಮುಂದುವರಿದ ಆನೆ ಗಣತಿ

    ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ 3 ದಿನಗಳ ಆನೆ ಗಣತಿಯ 2ನೇ ದಿನವಾದ ಶುಕ್ರವಾರ ಕಾಡಿನಲ್ಲಿ ನಿಗದಿತ ಹಾದಿಯಲ್ಲಿ ಆನೆಗಳ ಲದ್ದಿಯನ್ನು ಗುರುತಿಸಿ, ಗಣತಿಯನ್ನು ಮಾಡುವ ಕಾರ್ಯ ನಡೆಯಿತು.


    ದಕ್ಷಿಣ ಭಾರತದ ರಾಜ್ಯಗಳ ಗಡಿಗಳಲ್ಲಿ ಆನೆ ಗಣತಿ ನಡೆಯುತ್ತಿದೆ. ಇದರ ಭಾಗವಾಗಿ ಬಿಆರ್‌ಟಿಯಲ್ಲೂ ಆನೆ ಗಣತಿ ನಡೆಯುತ್ತಿದೆ. ಮೊದಲನೇ ದಿನವಾದ ಗುರುವಾರ ನೇರವಾಗಿ ಆನೆಗಳನ್ನು ಗುರುತಿಸುವ ಮೂಲಕ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. 2ನೇ ದಿನ ಆನೆ ಲದ್ದಿಯನ್ನು ಗುರುತಿಸಿ ಇದು ಹಾಕಿರುವ ದಿನಗಳನ್ನು ಗಣನೆಗೆ ತೆಗೆದುಕೊಂಡು ಗಣತಿ ಮಾಡಲಾಗುವುದು. 2 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಇದನ್ನು ಮಾಡಲಾಗುತ್ತಿದೆ.
    ಈಗಾಗಲೇ ಇದಕ್ಕೆ ಬಿಆರ್‌ಟಿ ವ್ಯಾಪ್ತಿಯಲ್ಲಿ 270 ಅರಣ್ಯ ಸಿಬ್ಬಂದಿ ಭಾಗವಹಿಸಿದ್ದಾರೆ. ಈ ಕಾರ್ಯದಲ್ಲಿ ಯಾವುದೇ ಎನ್‌ಜಿಒ ಸದಸ್ಯರು ಭಾಗಹಿಸಿಲ್ಲ. ಕೊನೆಯ ದಿನವಾದ ಶನಿವಾರ ಕೆರೆಕಟ್ಟೆಗಳು, ಆನೆಗಳು ನೀರು ಕುಡಿಯುವ ಸ್ಥಳಕ್ಕೆ ಸಿಬ್ಬಂದಿ ತೆರಳಿ ಅಲ್ಲಿ ಬರುವ ಆನೆಗಳ ಗಣತಿ ಮಾಡಲಿದ್ದಾರೆ.


    ಕೆ. ಗುಡಿ ವ್ಯಾಪ್ತಿಯಲ್ಲಿ 12 ತಂಡಗಳು ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯದಲ್ಲಿ ಬಿಆರ್‌ಟಿ ಹುಲಿ ಯೋಜನೆಯ ನಿರ್ದೇಶಕಿ ದೀಪಾ ಜೆ. ಸೇರಿದಂತೆ ಬಿಆರ್‌ಟಿ ವ್ಯಾಪ್ತಿಯ ಎಸಿಎಫ್, ಆರ್‌ಎಫ್‌ಒ, ಡಿಆರ್‌ಆರ್‌ಎಫ್‌ಒ, ಅರಣ್ಯ ಸಿಬ್ಬಂದಿ ಭಾಗವಹಿಸಿದ್ದಾರೆ ಎಂದು ಕೆ.ಗುಡಿ ಆರ್‌ಎಫ್‌ಒ ವಿನೋದ್‌ಗೌಡ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts