More

    ಕರೊನಾಕ್ಕೆ ಆಯುರ್ವೇದ ಔಷಧ ಕಂಡುಹಿಡಿದಿದ್ದೇನೆಂದ ವೈದ್ಯನಿಗೆ ‘ಸುಪ್ರೀಂ’ನಿಂದ ದಂಡ

    ನವದೆಹಲಿ: ಕರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ ಇದಕ್ಕೆ ಔಷಧಿ ಕಂಡುಹಿಡಿಯುವವರ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ.

    ಇದಾಗಲೇ ಅಲೋಪಥಿಯಿಂದ ಕರೊನಾದಿಂದ ಸಂಪೂರ್ಣವಾಗಿ ಗುಣಮುಖವಾಗುವಂಥ ಔಷಧವಿನ್ನೂ ಕಂಡುಹಿಡಿಯಲಾಗುತ್ತಿದೆ. ಈ ನಡುವೆಯೇ, ರೋಗನಿರೋಧಕ ಶಕ್ತಿ ವರ್ಧಿಸಿಕೊಂಡರೆ ಕರೊನಾದಿಂದ ಸುಲಭವಲದಲಿ ಪಾರಾಗಬಹುದು ಎಂಬ ಮಾಹಿತಿಯೂ ಬರುತ್ತದೆ.

    ರೋಗನಿರೋಧಕ ಶಕ್ತಿ ವೃದ್ಧಿಗೆ ಇದಾಗಲೇ ಹಲವಾರು ಮಂದಿ ಆಯುರ್ವೇದ ಮತ್ತು ಹೋಮಿಯೋಪಥಿಯ ಮೊರೆ ಹೋಗಿದ್ದು, ಹಲವರು ಇದರಿಂದ ರೋಗನಿರೋಧಕ ಶಕ್ತಿ ವೃದ್ಧಿಸಿಕೊಂಡಿರುವುದಾಗಿ ಹೇಳಿದ್ದಾರೆ.

    ಆದರೆ ಇಲ್ಲೊಬ್ಬ ಆಯುರ್ವೇದ ವೈದ್ಯರು ತಾವು ಕರೊನಾ ಸೋಂಕಿಗೆ ಔಷಧ ಕಂಡುಹಿಡಿದಿದ್ದೇನೆ ಎಂದು ಹೇಳಿದ ಕಾರಣ, ಅವರಿಗೆ ಸುಪ್ರೀಂ ಕೋರ್ಟ್​ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಹರಿಯಾಣದ ಡಾ. ಓಂಪ್ರಕಾಶ್ ಅವರು ದಂಡಕ್ಕೆ ಒಳಗಾಗಿರುವವರು.

    ಇದನ್ನೂ ಓದಿ: ಕರೊನಾದಿಂದ ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್ ಸಹೋದರ ನಿಧನ

    ಡಾ. ಓಂಪ್ರಕಾಶ್ ತಾವು ಕಂಡುಹಿಡಿದಿರುವ ಔಷಧವನ್ನು ಕರೊನಾಗೆ ಬಳಸಬಹುದು ಎಂದಿದ್ದರು. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
    ಆಯುರ್ವೇದಿಕ್ ಮೆಡಿಸಿನ್ ಆಯಂಡ್ ಸರ್ಜರಿಯಲ್ಲಿ (ಬಿಎಎಂಎಸ್) ಪದವಿ ಪಡೆದಿರುವ ಡಾ. ಓಂ ಪ್ರಕಾಶ್ ತಾವು ಕಂಡುಹಿಡಿದಿರುವ ಔಷಧವನ್ನು ಕರೊನಾ ಚಿಕಿತ್ಸೆಗೆ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಸಿದ್ದರು. ಇದರಿಂದ ಕರೊನಾ ವಾಸಿಯಾಗುವುದು ಎಂದು ಅವರು ಹೇಳಿದ್ದರು.

    ನ್ಯಾಯಮೂರ್ತಿ ಸಂಜಯ್ ಕೆ. ಕೌಲ್ ನೇತೃತ್ವದ ಪೀಠ ಆ ಅರ್ಜಿಯನ್ನು ತಿರಸ್ಕರಿಸಿದ್ದು, ಈ ರೀತಿ ಪಿಐಎಲ್​ ಸಲ್ಲಿಸಿದ್ದಕ್ಕೆ ತರಾಟೆ ತೆಗೆದುಕೊಂಡಿದೆ. ಪ್ರಚಾರ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ಡಾ. ಓಂಪ್ರಕಾಶ್ ಈ ರೀತಿ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅರ್ಜಿಯನ್ನು ತಿರಸ್ಕರಿಸಿ ದಂಡ ವಿಧಿಸಿದೆ.

    ವೈದ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಪ್ರಕರಣ: ಸರ್ಕಾರದಿಂದ ₹50 ಲಕ್ಷ ಪರಿಹಾರ

    ಗುಡಿಸಲಲ್ಲಿ ನಾಲ್ವರಿಗೆ ಜನ್ಮ ನೀಡಿದ ‘ಅಮ್ಮ’- ವಿಡಿಯೋ ವೈರಲ್‌

    ಗಂಡ ಹೆಚ್ಚು ಪ್ರೀತಿಸ್ತಾನೆ- ಲೈಫ್‌ ಬೋರ್‌ ಆಗಿದೆ, ವಿಚ್ಛೇದನ ಬೇಕು: ಜಡ್ಜ್‌ ಕಕ್ಕಾಬಿಕ್ಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts