More

    ಹಣ ಗುಳುಂ ಮಾಡೋದೆಂದ್ರೆ ಇದೇನಾ? ಲಂಚದ ಡುಡ್ಡನ್ನು ತಿಂದ ಕಾನ್ಸ್​ಟೆಬಲ್​- ಆದದ್ದೇ ಬೇರೆ…

    ಕಚ್​ಭುಜ್​ (ಗುಜರಾತ್): ತನಿಖಾಧಿಕಾರಿಗಳಿ ಹೆದರಿ ಇಲ್ಲಿಯ ಕಾನ್ಸಟೆಬಲ್​ ಒಬ್ಬ ಲಂಚದ ಹಣವನ್ನು ಅಗಿದು ನುಂಗಿದ್ದಾನೆ!
    ಮಯೂರ್ ಸಿಂಗ್ ಸೋಧಾ ಎಂಬ ಕಾನ್ಸ್​ಟೆಬಲ್​ ಈ ಕೃತ್ಯ ಎಸಗಿದ್ದಾನೆ. ರೈತನೊಬ್ಬನಿಂದ ಲಂಚ ಸ್ವೀಕರಿಸಿದ್ದ ಈತ ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡ ದಿಢೀರ್​ ದಾಳಿ ನಡೆಸಿದ್ದರಿಂದ ಹೆದರಿ ಸಾಕ್ಷ್ಯ ನಾಶ ಮಾಡಲು ಈ ಕೃತ್ಯ ಎಸಗಿದ್ದಾನೆ.

    ಈ ಘಟನೆ ನಡೆದಿದ್ದು ಜುಲೈ 21 ರಂದು. ಅಲ್ಲಿಂದ ಇಲ್ಲಿಯವರೆಗೂ ತಾನು ಹಣವನ್ನು ನುಂಗಿ ತಪ್ಪಿಸಿಕೊಂಡೆ ಎಂದು ಬೀಗುತ್ತಿದ್ದ ಈ ಕಾನ್ಸ್​ಟೆಬಲ್​ ಇದೀಗ ಪೇಚಿಗೆ ಸಿಲುಕಿದ್ದಾನೆ. ಏಕೆಂದರೆ ವಿಧಿ ವಿಜ್ಱಆನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಈತ ಹಣ ಪಡೆದಿರುವುದು ತಿಳಿದುಬಂದಿದೆ. ಡಿಎನ್​ಎ ಪರೀಕ್ಷೆಗೆ ಒಳಪಡಿಸಿದಾಗ ಈತನ ಕೃತ್ಯ ಬಯಲಿಗೆ ಬಂದಿದ್ದು, ಇದೀಗ ಮುಯೂರ್​ ಪೊಲೀಸರ ಅತಿಥಿಯಾಗಿದ್ದಾನೆ.

    ರೈತರೊಬ್ಬರ ಕೆಲಸ ಮಾಡಿಕೊಡಲು ಈತ ಎಂಟು ಸಾವಿರ ರೂಪಾಯಿ ಲಂಚ ಕೇಳಿದ್ದ. ಆ ಹಣವನ್ನು ರೈತ ಕೊಟ್ಟಿದ್ದ. ಇಷ್ಟಕ್ಕೆ ತೃಪ್ತನಾಗದ ಕಾನ್ಸ್​ಟೆಬಲ್​, ಇನ್ನೂ ಹೆಚ್ಚಿನ ಹಣದ ಬೇಡಿಕೆ ಒಡ್ಡಿದ್ದ.

    ಇದನ್ನೂ ಓದಿ: ಭಾರತದ ಉಪಗ್ರಹಗಳ ಮೇಲೂ ಚೀನಾದಿಂದ ಅಟ್ಯಾಕ್​: 142 ಪುಟಗಳಲ್ಲಿದೆ ಭಯಾನಕ ಸತ್ಯ!

    ಈ ಹಿನ್ನೆಲೆಯಲ್ಲಿ ರೈತ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಈತನನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯುವ ಹಿನ್ನೆಲೆಯಲ್ಲಿ ಗುಜರಾತ್ ಭ್ರಷ್ಟಾಚಾರ ನಿಗ್ರಹ ದಳ ಯೋಜನೆ ರೂಪಿಸಿತ್ತು. ಯೋಜನೆಯಂತೆ ರೈತ ಇನ್ನಷ್ಟು ಹಣ ಕೊಡಲು ಮುಂದಾಗಿದ್ದರು. ಆ ವೇಳೆಗೆ ಹಣವನ್ನು ಕಾನ್ಸ್​ಟೆಬಲ್​ ಪಡೆಯುತ್ತಿದ್ದ. ಅಲ್ಲಿಗೆ ಎಸಿಬಿಯ ಭುಜ್ ರೇಂಜ್ ಸಹಾಯಕ ನಿರ್ದೇಶಕ ಕೆ.ಎಚ್. ​​ಗೋಹಿಲ್ ನೇತೃತ್ವದ ತಂಡ ದಾಳಿ ನಡೆಸಿದ್ದರು.

    ವಿಷಯ ತಿಳಿಯುತ್ತಲೇ ಕಾನ್ಸ್​ಟೆಬಲ್​ ಹಣವನ್ನು ನುಂಗಿಬಿಟ್ಟಿದ್ದ. ಎಸಿಬಿ ತಂಡವು ಆರೋಪಿ ಕಾನ್‌ಸ್ಟೆಬಲ್‌ನನ್ನು ಹಿಡಿದು ನೋಟುಗಳನ್ನು ನುಂಗದಂತೆ ತಡೆಯಲು ಪ್ರಯತ್ನಿಸುತ್ತಿದ್ದಾಗಲೂ ಆಗ ಬಹುತೇಕ ನುಂಗುವಲ್ಲಿ ಯಶಸ್ವಿಯಾಗಿದ್ದ. ನಂತರ ಅಧಿಕಾರಿಗಳು ಆತನ ಬಾಯಿಯಿಂದಲೇ ಕೆಲವೊಂದು ನೋಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

    ಆಗ ಈತನ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಅರೆಬರೆ ಅಗಿದ ನೋಟುಗಳಲ್ಲಿಯೇ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದ ಪೊಲೀಸರು ಇದೀಗ ಆತನ ವಿರುದ್ಧ ಕೇಸ್​ ದಾಖಲು ಮಾಡಿ ಬಂಧಿಸಿದ್ದಾರೆ. ಸದ್ಯ ಮಯೂರ್ ಸಿಂಗ್ ಸೋಧಾನನ್ನು ಅಮಾನತು ಮಾಡಲಾಗಿದೆ.

    ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ ಒದಗಿಸಿದ ಪೊಲೀಸರು

    ಪ್ರೇಮ ವಿವಾಹ ಮಾಡಿಕೊಂಡರೆ ಆಸ್ತಿಯ ಹಕ್ಕು ಕಳೆದುಕೊಳ್ಳುತ್ತೇವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts