More

    ಕ್ಯಾಸಂಬಳ್ಳಿ ಗ್ರಾಪಂನಲ್ಲಿ ಲಂಚಾವತಾರ

    ಕೋಲಾರ: ಜಿಲ್ಲೆಯ ಕೆಜಿಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರತಿ ಕೆಲಸಕ್ಕೆ ಲಂಚ ಕೇಳುತ್ತಾರೆ ಎಂಬ ವ್ಯಾಪಕ ಆರೋಪದ ನಡುವೆ ಲಾನುಭವಿಯೊಬ್ಬರಿಂದ ತನ್ನ ಅಧೀನದಲ್ಲಿನ ಬಿಲ್​ ಕಲೆಕ್ಟರ್​ ಮೂಲಕ ಲಂಚ ಪಡೆಯುತ್ತಿರುವರೆನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಗ್ರಾಪಂ ವ್ಯಾಪ್ತಿಯ ನಾಗಲಪಲ್ಲಿ ಗ್ರಾಮದ ಅನುಕುಮಾರ್​ ಎಂಬ ಯುವಕನ ಮನೆಯ ಸ್ವತ್ತಿನ ಮರು ಮುದ್ರಣದ ದಾಖಲೆ ಪತ್ರ ನೀಡುವುದಕ್ಕಾಗಿ ಲಂಚ ಪಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಅನುಕುಮಾರ್​ ಎರಡು, ಮೂರು ದಿನ ಪಂಚಾಯಿತಿಗೆ ಹೋದರೆ ಸರ್ವರ್​ ಇಲ್ಲ ಅಥವಾ ನಿಮ್ಮ ಹೆಸರಿನ ದಾಖಲೆ ಸಿಗುತ್ತಿಲ್ಲ ಎಂದು ಸತಾಯಿಸಿ ಕಳುಹಿಸಿದ್ದಾರೆ. ಬಳಿಕ ಕೆಲಸ ಆಗಬೇಕಾದರೆ 2 ಸಾವಿರ ರೂ. ನೀಡುವಂತೆ ಪಿಡಿಒ ಮತ್ತು ಬಿಲ್​ ಕಲೆಕ್ಟರ್​ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಯುವಕ ಲಂಚ ನೀಡುವಾಗ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.
    50 ರೂ. ಕೆಲಸಕ್ಕೆ 2000 ಡಿಮ್ಯಾಂಡ್​:
    ಮನೆಯ ಸ್ವತ್ತಿನ ಮರುಮುದ್ರಣದ ಪತ್ರದ ದಾಖಲೆ ಪಡೆಯಲು ಸರ್ಕಾರಕ್ಕೆ 50 ರೂ. ರಸೀದಿ ಹಣ ನೀಡಬೇಕು. ಆದರೆ ಪಿಡಿಒ ಹಾಗೂ ಬಿಲ್​ಕಲೆಕ್ಟರ್​ ಯುವಕನ ಬಳಿ 3 ಸಾವಿರ ರೂಪಾಯಿ ಕೇಳಿದ್ದಾರೆ. ಕೊನೆಗೆ 2 ಸಾವಿರಕ್ಕೆ ಮಾತುಕತೆ ಮಾಡಿ ಒಂದು ಸಾವಿರ ರೂ. ಅನ್ನು ೋನ್​ ಪೇ ಮೂಲಕ ಬಿಲ್​ಕಲೆಕ್ಟರ್​ ಸುಬ್ರಮಣಿ ಖಾತೆಗೆ ಕಳಿಸಲಾಗಿದೆ. ಇನ್ನೊಂದು ಸಾವಿರ ನೀಡಿದರೆ ಮಾತ್ರ ಪತ್ರ ನೀಡಲಾಗುವುದು ಎಂದು ಪಿಡಿಒ ಹೇಳಿದ್ದಾರೆ ಎಂದು ಬಿಲ್​ಕಲೆಕ್ಟರ್​ ಸುಬ್ರಮಣಿ ಅನುಕುಮಾರ್​ ಜತೆ ೋನ್​ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. “ಮೇಡಂ ಅವರು ನಿನ್ನೆನೇ ಹೇಳಿದ್ರು, ಅವರ ಹತ್ರ ದುಡ್ಡು ಕೇಳಿ ತಗೊಳ್ಳಿ ಅಂತಾ, ಬೇಕಾದ್ರೆ ಒಂದು ಸಾವಿರ ಹಣ ತಗೊಂಡು ಬಂದು ಬಿಡು, ಹಾಗೇ ಪತ್ರ ಕೂಡ ಕೊಡ್ತಾರೆ’ ಎಂಬ ಸಂಭಾಷಣೆ ರೆಕಾರ್ಡ್​ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

    ವಿಡಿಯೋದಲ್ಲಿ ಏನಿದೆ ?:
    ಸಾವಿರ ರೂಪಾಯಿ ಹಣವನ್ನು ತೆಗೆದುಕೊಂಡು ಪಂಚಾಯಿತಿ ಕಚೇರಿ ಬಳಿ ಬರುವ ಫಲಾನುಭವಿ ಅನುಕುಮಾರ್​ ಬಿಲ್​ಕಲೆಕ್ಟರ್​ ಸುಬ್ರಮಣಿಯನ್ನು ಭೇಟಿ ಮಾಡಿ 800 ರೂ. ಕೊಡಲು ಹೋದಾಗ ಅದನ್ನು ನಿರಾಕರಿಸಿದ್ದಾರೆ. ಬಳಿಕ 200 ಸೇರಿಸಿ ಕೊಟ್ಟಾಗ ಅದನ್ನು ತೆಗೆದುಕೊಂಡು ನೇರವಾಗಿ ಪಿಡಿಒ ರಶ್ಮಿ ಅವರ ಟೇಬಲ್​ ಕೆಳಗೆ ಹಣ ಹಾಕಿ, ತಮ್ಮ ಪಾಲು ತೆಗೆದುಕೊಂಡು ಬರುವುದು ವಿಡಿಯೋದಲ್ಲಿ ದಾಖಲಾಗಿದೆ.

    ಅಮಾನತಿಗೆ ಆಗ್ರಹ:
    ಲಂಚ ಪಡೆದಿರುವ ಪಿಡಿಒ ರಶ್ಮಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ. ಡಾ.ಬಿ.ಆರ್​.ಅಂಬೇಡ್ಕರ್​ ಯುವ ವೇದಿಕೆ ಅಧ್ಯ ಶ್ರೀನಿವಾಸ್​ ಮಾತನಾಡಿ, ಪಿಡಿಒ ರಶ್ಮಿ ಕಳೆದ ಹದಿನೈದು ವರ್ಷಗಳಿಂದ ಇಲ್ಲೆ ಇದ್ದಾರೆ. ಅವರ ವಿರುದ್ಧ ಸಾಕಷ್ಟು ಆರೋಪಗಳಿವೆ. ಇದೀಗ ಸಾ ಸಮೇತ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಮತ್ತು ಬಿಲ್​ ಕಲೆಕ್ಟರ್​ ಸುಬ್ರಮಣಿ ಅವರನ್ನು ಅಮಾನತುಪಡಿಸಬೇಕು. ಇಲ್ಲದಿದ್ದಲ್ಲಿ ನಾವು ಲೋಕಾಯುಕ್ತರಿಗೆ ಮತ್ತು ಪೊಲೀಸ್​ ಠಾಣೆಗೆ ದೂರು ನೀಡಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಚಿನ್ನದ ನಾಡು ರೈತ ಮತ್ತು ಕೆರೆಗಳ ಸಂರಕ್ಷಣೆ ಸಮಿತಿ ಅಧ್ಯ ಎನ್​.ಎಂ.ಶಿವಪ್ರಸಾದ್​ ಅಧಿಕಾರಿಯ ವಜಾಕ್ಕೆ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts