More

    ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಹತ್ತೇ ದಿನದಲ್ಲಿ ರೈತರ ಸಾಲ, ವಿದ್ಯುತ್‌ ಬಿಲ್‌ ಮನ್ನಾ, ಪತ್ರಕರ್ತರ ಕೇಸ್‌ ವಾಪಸ್‌!

    ಲಖನೌ: ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಒಟ್ಟು ಮೂರು ಪ್ರತ್ಯೇಕ ಪ್ರಣಾಳಿಕೆಗಳನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಒಂದು ಮಹಿಳೆಯರಿಗೆ, ಒಂದು ಯುವಕರಿಗೆ ಮತ್ತು ಇನ್ನೊಂದು ಸಾರ್ವಜನಿಕರಿಗೆ. ಇದಾಗಲೇ ಎರಡು ಪ್ರಣಾಳಿಕೆ ಬಿಡುಗಡೆಯಾಗಿತ್ತು. ಬುಧವಾರ ಮೂರನೆಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಪ್ರಿಯಾಂಕಾ.

    ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಸರ್ಕಾರ ರಚನೆಯಾದ 10 ದಿನಗಳೊಳಗೆ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಲಾಗುವುದು ಹಾಗೂ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು ಎಂಬ ಪ್ರಮುಖ ಅಂಶ ಈ ಪ್ರಣಾಳಿಕೆಯಲ್ಲಿ ಇದೆ.

    ಇದರ ಜತೆಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪತ್ರಕರ್ತರ ಮೇಲಿನ ಸುಳ್ಳು ಪ್ರಕರಣಗಳನ್ನೂ ಹಿಂಪಡೆಯಲಾಗುವುದು ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಇದರ ಜತೆಗೆ, ಭತ್ತ ಮತ್ತು ಗೋಧಿಯನ್ನು ಕ್ವಿಂಟಲ್‌ಗೆ 2500ರೂ , ಕಬ್ಬಿಗೆ 400 ರೂ ರಂತೆ ಖರೀದಿಸಲಾಗುವುದು. ವಿದ್ಯುತ್ ಬಿಲ್ ಅರ್ಧಕ್ಕೆ ಇಳಿಸಲಾಗುವುದು. ಕೋವಿಡ ಬಾಧಿತ ಬಿಲ್​​ ಮೊತ್ತ ಮನ್ನಾ ಮಾಡಲಾಗುವುದು, ಕೋವಿಡ್ ಪೀಡಿತ ಕುಟುಂಬಗಳಿಗೆ 25,000 ರೂ. ನೀಡಲಾಗುವುದು ಎಂದಿದ್ದಾರೆ.

    ಕಾಂಗ್ರೆಸ್‌ ಕೈಗೆ ಅಧಿಕಾರ ಸಿಕ್ಕರೆ, 20 ಲಕ್ಷ ಸರ್ಕಾರಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಯಾವುದೇ ಕಾಯಿಲೆಗೆ 10 ಲಕ್ಷ ರೂ.ವರೆಗೆ ನೆರವು ನೀಡಲಾಗುತ್ತದೆ. ಸೆಗಣಿಯನ್ನು ಕೆಜಿಗೆ 2 ರೂನಂತೆ ಖರೀದಿಸಲಾಗುವುದು, ಗೋಧನ್ ನ್ಯಾಯ್ ಯೋಜನೆ, ಶಾಲಾ ಅಡುಗೆಯವರಿಗೆ 5,000 ರೂ ವೇತನ ನೀಡಲಾಗುವುದು, ಮಹಿಳಾ ಪೊಲೀಸರಿಗೆ ಹತ್ತಿರದ ಪೋಸ್ಟಿಂಗ್ ನೀಡಲಾಗುವುದು, ಕೋವಿಡ್ ಯೋಧರಿಗೆ 50 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

    ಮಂಗಳವಾರಷ್ಟೇ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಗೃಹ ಸಚಿವ ಅಮಿತ್‌ ಷಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮುಂಬರುವ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ಲವ್‌ ಜಿಹಾದ್‌ನಲ್ಲಿ ತಪ್ಪಿತಸ್ಥರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಗಳ ದಂಡ ಹೇರಲಾಗುತ್ತದೆ ಎಂದು ತಿಳಿಸಿದ್ದರು.

    ಉಜ್ವಲ ಯೋಜನೆ ಅಡಿಯಲ್ಲಿ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್ (ಹೋಳಿ ಮತ್ತು ದೀಪಾವಳಿಯಲ್ಲಿ ತಲಾ ಒಂದೊಂದರಂತೆ), 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆ ಪ್ರಯಾಣ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದರು.

    ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ಮೂರು ಕೋಟಿ ಹೊಸ ಉದ್ಯೋಗ ಸೃಷ್ಟಿಸುವುದು, ತಲಾ ಆದಾಯವನ್ನು ದ್ವಿಗುಣಗೊಳಿಸುವ ಮೂಲಕ ಉತ್ತರ ಪ್ರದೇಶವನ್ನು ರಾಜ್ಯದ ನಂಬರ್ ಒನ್ ಆರ್ಥಿಕ ಕೇಂದ್ರವಾಗಿ ಮಾಡುವುದು, ಲತಾ ಮಂಗೇಶ್ಕರ್ ಇನ್‌ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅನ್ನು ಸ್ಥಾಪಿಸುವುದಾಗಿ ಪಕ್ಷ ಹೇಳಿದೆ.

    ಪಕ್ಕದ ಮನೆಯ ಮಹಿಳೆಯನ್ನು ಎಳೆದೊಯ್ದ ಪತಿ- ರೇಪ್‌ ಮಾಡುವಾಗ ವಿಡಿಯೋ ಮಾಡಿದ ಪತ್ನಿ!

    VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts