More

    ಸ್ವಪಕ್ಷದಲ್ಲಿ 15 ದುರಹಂಕಾರಿ ಸಚಿವರಿದ್ದಾರೆ- ಈಗಾಗ್ಲೇ ದೂರು ಕೊಟ್ಟಿದ್ದೇನೆ: ಬಾಂಬ್‌ ಸಿಡಿಸಿದ ರೇಣುಕಾಚಾರ್ಯ

    ದಾವಣಗೆರೆ: ಸ್ವಪಕ್ಷದ 15 ಸಚಿವರ ವಿರುದ್ಧ ಸಿಡಿದೆದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ, ದುರಹಂಕಾರಿ ಸಚಿವರ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷರಿಗೆ ಮೌಖಿಕವಾಗಿ ದೂರ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರು ಕೊಟ್ಟಿದ್ದೇನೆ. ಕೆಲ ಸಚಿವ ವಿರುದ್ಧ ಮೌಖಿಕ ದೂರು ಸಲ್ಲಿಸಿದ್ದೇನೆಯೇ ಹೊರತು ಲಿಖಿತವಾಗಿ ದೂರಿಲ್ಲ. ದುರಹಂಕಾರಿ 15 ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಹೇಳಿದರು.

    ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಕೆಲ ಸಚಿವರು ಶಾಸಕರಿಗೆ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕೆಲ ಸಚಿವರ ಬದಲಿಗೆ ಸಚಿವ ಅವರ ಆಪ್ತ ಸಹಾಯಕರು ಶರಾ ಬರೆಯುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಈ ಬಗ್ಗೆಯೂ ರಾಜ್ಯಾಧ್ಯಕ್ಷರು, ಸಿಎಂ ಬೊಮ್ಮಾಯಿಗೆ ಮೌಖಿಕ ದೂರು ಸಲ್ಲಿಸಿದ್ದೇನೆ ಎಂದು ಹೇಳಿದರು.

    ನಾನು ಎಲ್ಲ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಾರೆ. ಅಂಥವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಕೆಲವು ಸಚಿವರು ತಮ್ಮಿಂದಲೇ ಸರ್ಕಾರ ಬಂದಿದೆ. ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂನಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಒಬ್ಬ ಸಚಿವರಿಗೆ ನಾನು ಕರೆ ಮಾಡಿದ್ದೆ, ಅವರು ಕರೆ ಸ್ವೀಕರಿಸಿರಲಿಲ್ಲ. ಅವರ ಆಪ್ತಸಹಾಯಕರು ಕರೆ ಸ್ವೀಕರಿಸಿ ಸಚಿವರಿಗೆ ಕರೊನಾ ಎಂದರು. ನಾನು ಸುಮ್ಮನಾಗಿದ್ದೆ. ಆದರೆ ಮರುದಿ‌ನ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಸಚಿವರು ಈ ರೀತಿಯಾಗಿ ಮಾಡಿರುವುದು ಸರಿಯಲ್ಲ. ನಾನು ಈ ದೂರವಾಣಿ ಕರೆಯ ಬಗ್ಗೆ ಸಹ ಮಾಹಿತಿ ನೀಡಿರುವೆ. ಈ ವಿಚಾರದ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧರಿಸುತ್ತಾರೆ ಎಂದು ಹೇಳಿದರು.

    ಸಿಎಂ ಬೊಮ್ಮಾಯಿಗೆ ಅವರಿಗೆ ಕರೆ ಮಾಡಿದ್ರೂ ಸ್ಪಂದನೆ ಸಿಗುತ್ತೆ. ಆದರೆ 15 ದುರಹಂಕಾರಿ ಸಚಿವರನ್ನು ಮಾತನಾಡಿಸೊದೇ ಕಷ್ಟವಾಗಿದೆ. ಇದರಿಂದ ನನಗೆ ನೋವಾಗಿದೆ. ಶಾಸಕರಿಗೆ ಸುಳ್ಳು ಹೇಳುವ ಸಚಿವರಿಂದ ಸಂಘಟನೆಗೆ ಮುಜುಗರವಾಗುತ್ತೆ. ನಾಲ್ಕೈದು ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಸಭೆ ಕರೆದು ಸರಿ ಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೆಸರು ಹೇಳದೇ ಸಚಿವರೊಬ್ಬರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಶಾಸಕ ರೇಣುಕಾಚಾರ್ಯ. (ದಿಗ್ವಿಜಯ ನ್ಯೂಸ್‌)

    ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಖಾದರ್‌ ನೇಮಕ: ಸೋನಿಯಾಗಾಂಧಿ ಆದೇಶ

    ಬಿಜೆಪಿ ಮುಖಂಡನ ವಿರುದ್ಧ ರೇಪ್‌ಕೇಸ್‌ ದಾಖಲಿಸಿದ ಸಬ್ ಇನ್ಸ್‌ಪೆಕ್ಟರ್: ಗನ್‌ ತೋರಿಸಿ ಕೃತ್ಯ ಎಂದು ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts