More

    ಲಂಚ ಕೊಡ್ಲಿಕ್ಕೆ ಮನೆಗೆ ಬಾ ಎಂದ ಅಧಿಕಾರಿ ಚಡ್ಡಿ- ಬನಿಯನ್‌ನಲ್ಲೇ ತಗ್ಲಾಕ್ಕೊಂಡ!

    ಲಖನೌ: ಜಮೀನು ವಿಷಯವಾಗಿ ವರದಿ ಸಿದ್ಧಪಡಿಸಲು 10 ಸಾವಿರ ರೂಪಾಯಿ ಲಂಚ ಕೇಳುತ್ತಿದ್ದ ಉಪ ನಿರೀಕ್ಷಕನೊಬ್ಬ ಭ್ರಷ್ಟಾಚರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದಿದೆ.

    10 ಸಾವಿರ ರೂಪಾಯಿ ಲಂಚಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ರಾಮ್ ಮಿಲನ್ ಯಾದವ್ ಎಂಬಾತನನ್ನು ಬಂಧಿಸಿರುವ ಎಸಿಬಿ ಪೊಲೀಸರು ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಲಂಚ ಕೊಡಲು ಈ ಅಧಿಕಾರಿ ಅಬ್ದುಲ್‌ ಖಾನ್‌ ಎನ್ನುವವರನ್ನು ಮನೆಗೇ ಕರೆದಿದ್ದರಿಂದ ಟವೆಲ್, ಬನಿಯನ್‌ನಲ್ಲಿಯೇ ಸಿಕ್ಕಿಬಿದ್ದಿದ್ದಾರೆ.

    ಅಬ್ದುಲ್ ಖಾನ್ ಅವರ ವರದಿ ಸಿದ್ಧಪಡಿಸಲು ರಾಮ್ ಮಿಲನ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಮುಂದಿಟ್ಟದ್ದರು. ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಅಬ್ದುಲ್‌ ಅವರು ದೂರು ದಾಖಲಿಸಿದ್ದರು. ನಂತರ ಲಂಚದ ಹಣ ನೀಡುವುದಾಗಿ ಹೇಳಿದ್ದರಿಂದ ಅವರನ್ನು ಮನೆಗೆ ಕರೆಯಲಾಗಿತ್ತು.

    ಲಂಚ ನೀಡುವ ನೆಪದಲ್ಲಿ ಹೋದಾಗ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಬಿ ಅಧಿಕಾರಿ ರಾಮಧಾರಿ ಮಿಶ್ರಾ, ದೂರು ಸಲ್ಲಿಕೆಯಾಗಿದ್ದರಿಂದ ಲಂಚ ಪಡೆಯುವ ವೇಳೆ ನಮ್ಮ ತಂಡ ದಾಳಿ ನಡೆಸಿತ್ತು. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.

    VIDEO: ಇಸ್ಲಾಂಗೆ ವಿರುದ್ಧವಾಗಿ ಜನರನ್ನು ನಗಿಸುತ್ತಿಯಾ ಎಂದು ಖ್ಯಾತ ಹಾಸ್ಯನಟನನ್ನು ಗುಂಡಿಕ್ಕಿ ಕೊಂದರು!

    34 ಕೋಟಿ ರೂ. ಬ್ಲೂಫಿಲ್ಮಂ ದಂಧೆಗಿದ್ಯಾ ಶಿಲ್ಪಾ ಲಿಂಕ್‌? ನಟಿಗೆ ಕ್ಲೀನ್‌ಚಿಟ್‌ ನೀಡಲ್ಲ ಎಂದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts