More

    12 ವರ್ಷಗಳ ಬಳಿಕ ಮನೆಗೆ ಮರಳಿದ ಬೆಕ್ಕು!

    ವಾಷಿಂಗ್ಟನ್‌: ಸಾಮಾನ್ಯವಾಗಿ ನಾಯಿಗಳು ತನಗೆ ಒಂದು ಹೊತ್ತು ಊಟ ಕೊಟ್ಟರೂ ಸಾಕು, ಅವರನ್ನು ಜೀವನಪರ್ಯಂತ ಮರೆಯುವುದಿಲ್ಲ, ಆದರೆ ಬೆಕ್ಕು ಹಾಗಲ್ಲ, ಅದಕ್ಕೆ ಮರೆವು ಜಾಸ್ತಿ. ಸ್ವಲ್ಪ ದಿನವಾದರೆ ಅದು ತನ್ನ ಮಾಲೀಕರನ್ನು ಗುರು ಹಿಡಿಯುವುದಿಲ್ಲ ಎನ್ನುತ್ತಾರೆ.

    ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಬೆಕ್ಕೊಂದು 12 ವರ್ಷಗಳ ನಂತರ ಮನೆಗೆ ವಾಪಸಾಗಿರುವ ಬೆಕ್ಕೊಂದು ತನ್ನ ಮಾಲೀಕರನ್ನು ಮುದ್ದಾಡಿರುವ ಘಟನೆ ನಡೆದಿದೆ.

    ಈ ಬೆಕ್ಕಿನ ಹೆಸರು ಜಿಯಾರ್ಜಿ. ಆಮಿ ಡೇವಿಸ್ ದಂಪತಿ ಬೆಕ್ಕನ್ನು ಅತಿ ಮುದ್ದಿನಿಂದ ಸಾಕಿದ್ದರು. ಬೆಕ್ಕನ್ನು ಬಿಟ್ಟು ಅರೆ ಕ್ಷಣ ಇರುತ್ತಿರಲಿಲ್ಲ, ಬೆಕ್ಕು ಕೂಡ ಅವರನ್ನು ಅಷ್ಟೇ ನೆಚ್ಚಿಕೊಂಡಿತ್ತು. ಎಲ್ಲಿ ಹೋಗುವುದಾದರೂ ಈ ದಂಪತಿ, ನಾಯಿಯಂತೆ ಬೆಕ್ಕನ್ನು ಕರೆದುಕೊಂಡು ಹೋಗುತ್ತಿದ್ದರು.

    2008ರಲ್ಲಿ ಕೂಡ ಅವರು ಬೆಕ್ಕನ್ನು ಕರೆದುಕೊಂಡು ಲೋಚ್ ಲೋಮಂಡ್ ತೀರದಲ್ಲಿ ರಜಾಕಳೆಯಲು ಹೋಗಿದ್ದರು. ಆ ಸಮಯದಲ್ಲಿ ಬೆಕ್ಕು ತಪ್ಪಿಸಿಕೊಂಡು ಬಿಟ್ಟಿತ್ತು. ಎಷ್ಟು ಹುಡುಕಿದರೂ ಬೆಕ್ಕು ಸಿಗಲೇ ಇಲ್ಲ.

    ಈ ಬೆಕ್ಕಿಗೆ ಒಂದು ಮೈಕ್ರೋಚಿಪ್‌ ಅಳವಡಿಸಲಾಗಿತ್ತು. ಅದು ಎಲ್ಲಿಯೇ ಕಳೆದುಹೋದರೂ ಈ ಚಿಪ್‌ ಮೂಲಕ ಮಾಲೀಕರನ್ನು ಗುರುತಿಸಲು ಇದು ಸಹಾಯ ಮಾಡುತ್ತಿತ್ತು. ಆದರೆ ವರ್ಷ ಕಳೆದು 2,3 ವರ್ಷಗಳಾದರೂ ಯಾರೂ ಬೆಕ್ಕಿನ ಸುಳಿವು ಕೊಟ್ಟಿರಲಿಲ್ಲ.

    ಇದನ್ನೂ ಓದಿ: ‘ಶ್ರೀರಾಮನ ಅಸ್ತಿತ್ವವನ್ನೇ ನಾಶ ಮಾಡುವ ಪ್ರಯತ್ನ ನಡೆಯಿತು…’: ಸೂಕ್ಷ್ಮವಾಗಿ ಇತಿಹಾಸ ಪ್ರಸ್ತಾಪಿಸಿದ ಪ್ರಧಾನಿ

    ತಮ್ಮ ಬೆಕ್ಕು ಸತ್ತೇ ಹೋಯಿತು ಎಂದು ಇವರು ಅಂದುಕೊಂಡಿದ್ದರು.

    ಇದೀಗ ಬೆಕ್ಕು ಕಳೆದ 12 ವರ್ಷ ಕಳೆದಿದೆ. ಮಾಲೀಕರಿಂದ ತಪ್ಪಿಸಿಕೊಂಡಿದ್ದ ಬೆಕ್ಕು ಇಷ್ಟು ವರ್ಷ ಎಲ್ಲೆಲ್ಲೋ ಅಡ್ಡಾಡಿ ನಂತರ ಕ್ವೀನ್ ಎಲಿಜಬೆತ್ ಫಾರೆಸ್ಟ್ ಪಾರ್ಕ್‌ ಒಳಗೆ ಹೊಕ್ಕಿತ್ತು. ಈ ಮುದ್ದು ಬೆಕ್ಕನ್ನು ಕಂಡ ಅಲ್ಲಿಯ ಸಿಬ್ಬಂದಿ ಇದನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅದರಲ್ಲಿರುವ ಚಿಪ್‌ ಅನ್ನು ಅನೇಕ ದಿನಗಳ ಬಳಿಕ ಗುರುತಿಸಿದ್ದರೂ, ಆ ಚಿಪ್‌ ಸ್ಕ್ಯಾನ್‌ ಮಾಡಿ ಅದರ ಮಾಲೀಕರನ್ನು ಗುರುತಿಸುವುದು ಕಷ್ಟವಾಯಿತು.

    ಏಕೆಂದರೆ ಅದಾಗಲೇ ಲಾಕ್‌ಡೌನ್‌ ಜಾರಿಯಾಗಿತ್ತು. ಅಷ್ಟೇ ಅಲ್ಲದೇ, ಲಾಕ‌ಡೌನ್‌ ಮುಗಿದ ಮೇಲೆ ಕರೊನಾವೈರಸ್‌ ಹಾವಳಿಯಿಂದ ಸಿಬ್ಬಂದಿ ಎಲ್ಲಿಯೂ ಹೋಗಿರಲಿಲ್ಲ. ಇದೀಗ ಪ್ರಾಣಿ ಸಂಘಕ್ಕೆ ಹೋಗಿ ಚಿಪ್‌ ಸ್ಕ್ಯಾನ್‌ ಮಾಡಿದ ನಂತರ ಬೆಕ್ಕಿನ ಮಾಲೀಕರನ್ನು ಪತ್ತೆ ಹಚ್ಚಲಾಗಿದೆ.

    ಬೆಕ್ಕು ತನ್ನ ಮಾಲೀಕನನ್ನು ನೋಡುತ್ತಿದ್ದಂತೆಯೇ ಮುದ್ದುಮಾಡಿದ್ದರೆ, ಈ ದಂಪತಿಗಂತೂ ಇದು ಕನಸೋ, ನನಸೋ ತಿಳಿಯದಾಗಿದೆಯಂತೆ.

    ರೈಲಿನಲ್ಲಿ ಪ್ರಯಾಣಿಸುವಿರಾ? ಹಾಗಿದ್ದರೆ ಇಲ್ಲಿದೆ ಒಂದಿಷ್ಟು ಕಡ್ಡಾಯ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts