More

    ಶಾಸಕನ ಮೇಲೆ ಗ್ಯಾಂಗ್​ರೇಪ್​ ಆರೋಪ: ಗಾಯಕಿಯಿಂದ ದಾಖಲಾಯ್ತು ದೂರು

    ಲಖನೌ: ಗಾಯಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ವಿಜಯ್ ಮಿಶ್ರಾ ಮತ್ತು ಅವರ ಮಗ ಸೇರಿದಂತೆ ಮೂವರ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ.

    ಅಕ್ರಮ ಭೂ ಒತ್ತುವರಿ ಪ್ರಕರಣದಲ್ಲಿ ವಿಜಯ್ ಮಿಶ್ರಾ ಅವರನ್ನು ಮಧ್ಯಪ್ರದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಲಾಗಿತ್ತು. ಅವರು ಸದ್ಯ ಆಗ್ರಾ ಜೈಲಿನಲ್ಲಿ ಇದ್ದಾರೆ. ಇದೀಗ ಇವರ ವಿರುದ್ಧ ಅತ್ಯಾಚಾರದ ಕೇಸ್​ ದಾಖಲಾಗಿದೆ.

    ಉತ್ತರ ಪ್ರದೇಶ ಪೊಲೀಸರು 25 ವರ್ಷದ ಗಾಯಕಿಯೊಬ್ಬಳು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಇವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ವಿಜಯ್​ ಮಿಶ್ರಾ ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಳದ (ನಿಶಾದ್) ಶಾಸಕ. ಈ ಪಕ್ಷವು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಮಿತ್ರ ಪಕ್ಷವಾಗಿದೆ.

    2014ರಲ್ಲಿ ಕಾರ್ಯಕ್ರಮವೊಂದಕ್ಕಾಗಿ ಮಿಶ್ರಾ ಅವರು ತಮ್ಮನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರು ಹಾಗೂ ಮಗ ಸೇರಿ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಗಾಯಕಿ ಆರೋಪಿಸಿದ್ದಾರೆ.

    ಇದನ್ನೂ ಓದಿ: ಹೃದಯಾಘಾತ: ವಿಧಾನ ಪರಿಷತ್​ ಸದಸ್ಯ ಪ್ರಸನ್ನಕುಮಾರ್​ ಪುತ್ರ ನಿಧನ

    ಅದರ ಮರುವರ್ಷ ಅಂದರೆ 2015ರಲ್ಲಿ ಕೂಡ ವಿಜಯ್​ ಮಿಶ್ರಾ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಾರಣಾಸಿಯ ಹೋಟೆಲ್‌ನಲ್ಲಿ ಇಬ್ಬರೂ ಈ ಕೃತ್ಯ ಎಸಗಿದ್ದಾರೆ. ಅತ್ಯಾಚಾರದ ಬಳಿಕ ತಮ್ಮನ್ನು ಮನೆಗೆ ಬಿಡುವಂತೆ ಮಗ ಹಾಗೂ ಸೋದರಳಿಯನಿಗೆ ಮಿಶ್ರಾ ಸೂಚಿಸಿದ್ದರು. ಆದರೆ ಮನೆಗೆ ವಾಪಸ್ ಬಿಡುವ ಮುನ್ನ ಅವರಿಬ್ಬರೂ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪ ಮಾಡಿದ್ದಾರೆ.

    ಮಿಶ್ರಾ ಜೈಲಿನಲ್ಲಿ ಇದ್ದಾರೆ ಎಂಬ ಮಾಹಿತಿ ಗೊತ್ತಾದ ಬಳಿಕ ಗೋಪಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಧೈರ್ಯ ಮಾಡಿದ್ದಾಗಿ ಗಾಯಕಿ ತಿಳಿಸಿದ್ದಾರೆ. ‘ವಿಜಯ್ ಮಿಶ್ರಾ ಬಳಿ ನನ್ನ ಅತ್ಯಾಚಾರದ ವಿಡಿಯೋ ದೃಶ್ಯಗಳಿವೆ. ಅಷ್ಟೇ ಅಲ್ಲದೇ ಅವರು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಹಳ ಪ್ರಭಾವಶಾಲಿಯಾಗಿರುವ ಕಾರಣ, ದೂರು ನೀಡಲು ಹೆದರಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

    ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

    ಪಾರ್ಟಿ ಕೊಡಿಸುವ ದಿನಗಳು ಮುಗಿದಿವೆ… ತನ್ನ ನಿಧನದ ಸುದ್ದಿ ತಾನೇ ಬರೆದು ಮೃತಪಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts