More

    ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಕಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

    ನವದೆಹಲಿ: ಈಗ ಎಲ್ಲೆಲ್ಲೂ ಮಾಸ್ಕ್​ಗಳದ್ದೇ ಕಾರುಬಾರು. ಬೈಕ್​ನಲ್ಲಿ, ಕಾರಿನಲ್ಲಿ ಹೋಗುವಾಗಲೂ ಮಾಸ್ಕ್​ ಕಡ್ಡಾಯ ಮಾಡಲಾಗಿದೆ. ಮಾಸ್ಕ್​ ಧರಿಸದೇ ಹೋದರೆ ಆಯಾ ರಾಜ್ಯಗಳಿಗೆ ಅನುಗುಣವಾಗಿ ಭಾರಿ ಪ್ರಮಾಣದ ದಂಡ ವಿಧಿಸಲಾಗುತ್ತಿದೆ.

    ಕಾರಿನಲ್ಲಿ ಒಂಟಿಯಾಗಿ ಹೋಗುವಾಗ ಮಾಸ್ಕ್​ ಏಕೆ ಎಂದು ಕೆಲವರು ಅಂದುಕೊಳ್ಳುವುದುಂಟು. ಆದ್ದರಿಂದಲೇ ಈ ವಿವಾದ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ದೆಹಲಿ ಹೈಕೋರ್ಟ್​ ತೀರ್ಪು ನೀಡಿದ್ದು, ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದೆ.

    ಸಾರ್ವಜನಿಕವಾಗಿ ಸಂಚರಿಸುವಾಗ ಮಾಸ್ಕ್​ ಕಡ್ಡಾಯ ಎಂದು ನಿಯಮ ಇರುವ ಹಿನ್ನೆಲೆಯಲ್ಲಿ, ಕಾರು ಕೂಡ ಸಾರ್ವಜನಿಕ ಸ್ಥಳವೆಂದು ಹೇಳಿರುವ ದೆಹಲಿ ಹೈಕೋರ್ಟ್, ಪ್ರತಿಯೊಬ್ಬ ವ್ಯಕ್ತಿಯು ಮಾಸ್ಕ್ ಧರಿಸಬೇಕು ಎಂದು ಹೇಳಿದೆ.

    ಕರೊನಾ ಎಲ್ಲೆಡೆ ಈಗ ಹರಡುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಹಾಟ್​ಸ್ಪಾಟ್​ ಆಗಿರುವ ಕಾರಣದಿಂದ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್​ ಕಡ್ಡಾಯ ಎಂದು ಹೇಳಿದೆ. ಕರೊನಾ ತಡೆಗಟ್ಟಲು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಒಂಟಿಯಾಗಿ ಪ್ರಯಾಣಿಸುತ್ತಿದ್ದರೂ ಮಾಸ್ಕ್​ ಧರಿಸಲೇಬೇಕು ಎಂದು ಹೇಳಿದೆ.

    ಅಂದಹಾಗೆ ದೆಹಲಿಯಲ್ಲಿ ಮಾತ್ರವಲ್ಲದೇ, ಕರ್ನಾಟಕ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಕಾರಿನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್​ ಕಡ್ಡಾಯ ಮಾಡಿದೆ.
    ದೆಹಲಿಯಲ್ಲಿ ನಿನ್ನೆ (ಮಂಗಳವಾರ) 5100 ಹೊಸ ಪ್ರಕರಣಗಳು ವರದಿಯಾಗಿವೆ. 17 ಜನರು ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1 ಲಕ್ಷ 15 ಸಾವಿರ 736 ಜನರು ಕರೊನಾ ಸೋಂಕಿಗೆ ಒಳಗಾಗಿದ್ದು, 630 ಜನರು ಪ್ರಾಣ ಕಳೆದುಕೊಂಡಿದ್ದಾರೆ.

    ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ?ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಇವೆ ಹುದ್ದೆಗಳು…

    ಮೊದಲೇ ಗಂಡ ಇದ್ರೂ ಹೇಳ್ದೇ ನನ್ನ ಮದ್ವೆಯಾಗಿಬಿಟ್ಟಿದ್ದಾಳೆ- ಪ್ಲೀಸ್ ಕಾನೂನು ಸಲಹೆ ಕೊಡಿ…

    ಮಷಿನ್ ಟೂಲ್ಸ್ ಇಂಡಸ್ಟ್ರಿಯ ಅನುಭವಸ್ಥರಿಗೆ ಎಚ್‌ಎಂಟಿಯಲ್ಲಿದೆ ದೊಡ್ಡ ಅವಕಾಶ: ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts