More

    ಬೆಂಗಳೂರಿನಲ್ಲಿ ಕೈ, ಕಮಲದ ಮಾರಾಮಾರಿ- ಆರೋಪ, ಪ್ರತ್ಯಾರೋಪ; ಪ್ರತಿಭಟನೆ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಕುಸುಮಾ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರು ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬೆಂಬಲಿಗರ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದ ಘಟನೆ ನಡೆದಿದೆ.

    ಲಕ್ಷ್ಮಿದೇವಿನಗರ ವಾರ್ಡ್‍ನಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಮುನಿರತ್ನ ಬೆಂಬಲಿಗ, ಪಾಲಿಕೆಯ ಮಾಜಿ ಸದಸ್ಯ ವೇಲು ನಾಯ್ಕರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿಯರು ಕೂಡ ಪ್ರತಿಭಟನೆ ನಡೆಸಿದ್ದಾರೆ.

    ಪರಸ್ಪರ ದೂರುಗಳು ದಾಖಲಾಗಿವೆ. ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ನಡೆಸಲು ಕಾಂಗ್ರೆಸ್​ ಕಾರ್ಯಕರ್ತು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕ ಕಿತ್ತು ಹರಿದು ಹಾಕಿದ್ದಾರೆ. ಅಲ್ಲದೆ ಮಾಜಿ ಸಂಸದರಾದ ನಾರಾಯಣ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಚಾರಕ್ಕೂ ವೇಲು ನಾಯ್ಕರ್ ಮತ್ತು ಸಹಚರರು ಬೆದರಿಕೆ ಹಾಕಿ ಅಡ್ಡಿಯುಂಟು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಲ್ಲೆ ಖಂಡಿಸಿ ಹಾಗೂ ವೇಲು ನಾಯ್ಕರ್ ಗಡಿಪಾರು ಮಾಡುವಂತೆ ಒತ್ತಾಯಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ನಾಯಕರ ಪ್ರತಿಭಟನೆ ನಡೆಸಿದ್ದಾರೆ.

    ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಉಳಿಯೋದು ಕಷ್ಟ ಎಂದ ಶರತ್​, ಮುಂದಿನ ನಡೆ ಬಗ್ಗೆ ಬಾಯ್ಬಿಟ್ರು

    ಪೊಲೀಸ್ ಠಾಣೆಗೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ವೇಲು ನಾಯ್ಕರ್ ಮತ್ತು ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದರೆ, ತಮ್ಮ ಮೇಲಿನ ಆರೋಪವು ನಿರಾಧಾರವಾಗಿರುವುದಾಗಿ ಮುನಿರತ್ನ ಹೇಳಿದ್ದಾರೆ. ‘ನಮ್ಮ ಕಾರ್ಯಕರ್ತರು ಯಾವುದೇ ಗೂಂಡಾಗಿರಿ ನಡೆಸಿಲ್ಲ. ಕಾಂಗ್ರೆಸ್‌ ಪರ ಪ್ರಚಾರ ಮಾಡಲು ಕ್ಷೇತ್ರಕ್ಕೆ ನಾಲ್ಕು ಸಾವಿರ ಜನ ಹೊರಗಡೆಯಿಂದ ಬಂದಿದ್ದಾರೆ. ಈ ವೇಳೆ ಮನೆ ಮನಗೆ ತೆರಳಿ ಜಾತಿ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇಂಥ ಪ್ರಶ್ನೆಗಳನ್ನು ಯಾಕೆ ಕೇಳಬೇಕು. ನ್ಯಾಯಯುತವಾಗಿ ಚುನಾವಣೆ ಎದುರಿಸಲಿ’ ಎಂದಿದ್ದಾರೆ.

    ಚುನಾವಣಾ ಆಯೋಗ ಮತದಾರರಿಗೆ ಗುರುತಿನ ಚೀಟಿ ಮತ್ತು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಿದೆ. ಯಾರೂ ಮತದಾರರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಪೊಲೀಸರು ಎರಡೂ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

    ಯೋಗಿ ರಾಜ್ಯದಲ್ಲಿ ಅಪರಾಧಿಗಳಿಗೆ ನಡುಕ- 125 ಎನ್​ಕೌಂಟರ್​, 14 ಗಲ್ಲು, 24 ಗಂಟೆಗಳಲ್ಲಿ 23 ಜೀವಾವಧಿ!

    ತ್ರಿವಳಿ ತಲಾಖ್​ ವಿರುದ್ಧದ ಹೋರಾಟಗಾರ್ತಿಯೀಗ ಮಹಿಳಾ ಆಯೋಗದ ಉಪಾಧ್ಯಕ್ಷೆ

    ಹೊಸ ಲವರ್​ಗೆ ಗ್ರಹಚಾರ ತಂದಿಟ್ಟ ಪ್ರೇಯಸಿ- ಸಾಗರದ ಡಬಲ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts