More

    ಭಾರತದಿಂದ ಕಳ್ಳತನವಾಗಿದ್ದ 1200 ವರ್ಷಗಳಷ್ಟು ಹಳೆಯ ಬುದ್ಧನ ವಿಗ್ರಹ ಇಟಲಿಯಲ್ಲಿ ಪತ್ತೆ!

    ನವದೆಹಲಿ: ಭಾರತದಿಂದ ಸುಮಾರು 20 ವರ್ಷಗಳ ಹಿಂದೆ ಕಳುವಾಗಿದ್ದ ಬುದ್ಧನ ಮೂರ್ತಿಯು ಇಟಲಿಯಲ್ಲಿ ಪತ್ತೆಯಾಗಿದೆ. ಸುಮಾರು ಸುಮಾರು 1,200 ವರ್ಷಗಳಷ್ಟು ಪುರಾತನವಾಗಿರುವ ‘ಅವಲೋಕಿತೇಶ್ವರ ಪದ್ಮಪಾಣಿ’ ವಿಗ್ರಹ ಇದಾಗಿದೆ.

    ಈ ಕುರಿತು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ. ಭಾರತದ ಅತ್ಯಂತ ಹಳೆಯ ಮತ್ತು ವಿಶೇಷವಾದ ‘ಅವಲೋಕಿತೇಶ್ವರ ಪದ್ಮಪಾಣಿ’ ವಿಗ್ರಹವನ್ನು ಮರಳಿ ಪಡೆಯಲಾಗಿದೆ ಎಂದು ಮಿಲನ್‌ನಲ್ಲಿರುವ ಭಾರತೀಯ ದೂತವಾಸ ಕೇಂದ್ರ ಟ್ವೀಟ್ ಮೂಲಕ ತಿಳಿಸಿದೆ. ವಿವಿಧ ದೇಶಗಳಿಗೆ ಕಳ್ಳಸಾಗಣೆ ಮೂಲಕ ಹೋಗಿರುವ ವಿಗ್ರಹಗಳ ಪತ್ತೆಗೆ ಕೇಂದ್ರ ಸರ್ಕಾರ ರಚಿಸಿರುವ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಜತೆಗೆ ಸಿಂಗಪುರ ಹಾಗೂ ಲಂಡನ್‌ನ ಆರ್ಟ್ ರಿಕವರಿ ಇಂಟರ್‌ನ್ಯಾಷನಲ್ ವಿಗ್ರಹವನ್ನು ಪತ್ತೆ ಹಚ್ಚಿವೆ.

    ಇದು ಕಲ್ಲಿನ ವಿಗ್ರಹವಾಗಿದ್ದು 8ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ. ಕುಂದಲಪುರ ದೇವಾಲಯದಲ್ಲಿ ಸುಮಾರು 1,200 ವರ್ಷಗಳ ಕಾಲ ವಿಗ್ರಹ ಇತ್ತು, 2000ನೇ ಇಸವಿಯಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಾಟ ಮಾಡಲಾಗಿತ್ತು.

    100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕಳೆದ ತಿಂಗಳಷ್ಟೇ ಉತ್ತರ ಪ್ರದೇಶ ಸರ್ಕಾರ ವಾಪಸ್ ಪಡೆದುಕೊಂಡಿತ್ತು.

    VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ

    VIDEO: ಎರಡನೆಯ ಪತ್ನಿಯನ್ನು ತೊರೆದು ಮಗಳ ವಯಸ್ಸಿನ ಯುವತಿಯನ್ನು ಮದುವೆಯಾದ ಸಂಸದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts