More

    ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ

    ಲಖನೌ: ಮದುವೆಯ ದಿನವೇ ಇಂಥದ್ದೊಂದು ಸುದ್ದಿ ಕೇಳಲು ಸಿಗುತ್ತದೆ ಎಂದು ಈ ಮದುಮಗಳು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ವರನಿಗೆ ಹಾರ ಹಾಕುವವರೆಗೂ ಈಕೆಯ ತಲೆಯೆಲ್ಲಾ ಅದೇ ಸುದ್ದಿಯ ಮೇಲಿತ್ತು. ಇನ್ನೇನು ಹಾರ ಹಾರಬೇಕು ಎನ್ನುವಷ್ಟರಲ್ಲಿ ಈಕೆಗೆ ಆ ಸುದ್ದಿಯನ್ನು ಯಾರೋ ತಲುಪಿಸಿಯೇ ಬಿಟ್ಟರು.

    ಮದುವೆಯನ್ನೂ ಮರೆತು, ಮದುಮಗಳು ಕುಣಿಯುತ್ತಾ ಹೊರಟೇ ಹೋದಳು. ಅಲ್ಲಿ ನೆರೆದಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದರು.

    ಇಂಥದ್ದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಹೀಗೆ ಅರ್ಧಕ್ಕೆ ಮದುವೆ ಬಿಟ್ಟು ಹೋದಾಕೆ 28 ವರ್ಷದ ಪೂನಂ ಶರ್ಮಾ. ಅಷ್ಟಕ್ಕೂ ಈಕೆ ಹೀಗೆ ಮಾಡಲು ಕಾರಣ, ಪಂಚಾಯತ್ ಚುನಾವಣೆಯಲ್ಲಿ ಬ್ಲಾಕ್ ಡೆವಲಪ್‍ಮೆಂಟ್ ಕೌನ್ಸಿಲ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಈಕೆ ಅಲ್ಲಿ ಗೆದ್ದಿರುವ ಸುದ್ದಿ ತಿಳಿದದ್ದು!

    ವರನಿಗೆ ಹಾರ ಹಾಕುವಾಗ ಸುದ್ದಿಯೊಂದು ಕೇಳಿ ಕುಣಿದು ಕುಣಿದು ಹೋಗೇ ಬಿಟ್ಟಳು! ಇದ್ದವರು ಕಕ್ಕಾಬಿಕ್ಕಿ

    ಪೂನಂ ಅವರ ವಿವಾಹವನ್ನು ಮೇ 2ರಂದು ನಿಗದಿ ಪಡಿಸಲಾಗಿತ್ತು ಮತ್ತು ಪಂಚಾಯತ್ ಚುನಾಣೆಯ ಎಣಿಕೆಯನ್ನೂ ಕೂಡ ಮೇ 2 ರಂದೇ ನಿಗದಿ ಪಡಿಸಲಾಗಿತ್ತು. ಹೂವಿನ ಹಾರವನ್ನು ಹಾಕುತ್ತಿದ್ದ ವೇಳೆ ಸುದ್ದಿ ತಿಳಿದು, ಪ್ರಮಾಣ ಪತ್ರವನ್ನು ಸ್ವೀಕರಿಸುವಂತೆ ಬಂದಿರುವ ಸಂದೇಶ ಕೇಳಿ ಮಧ್ಯೆಯೇ ಓಡಿಹೋದಳು. ಮದುವೆ ಮಂಟಪದಿಂದ 20 ಕಿ.ಮೀ ದೂರದಲ್ಲಿರುವ ಎಣಿಕೆ ಕೇಂದ್ರಕ್ಕೆ ಹೋಗಿ ಪ್ರಮಾಣ ಪತ್ರ ಸ್ವೀಕರಿಸಿದಳು.

    ಈ ವಿಷಯ ಮದುಮಗ ಸೇರಿದಂತೆ ಕೆಲವರಿಗೆ ಗೊತ್ತಿತ್ತು. ಆದರೆ ಅತಿಥಿಗಳ ಪೈಕಿ ಕೆಲವರು ಕಕ್ಕಾಬಿಕ್ಕಿಯಾದರು. ವಧುವಿನ ಉಡುಪು ಗುಲಾಬಿ ಬಣ್ಣದ ಮಾಸ್ಕ್ ಧರಿಸಿ ಹೋಗಿ ಪ್ರಮಾಣ ಪತ್ರ ಸ್ವೀಕರಿಸಿರುವುದನ್ನು ಕಂಡು ಅಲ್ಲಿಯ ಜನ ಕೂಡ ಅಚ್ಚರಿಗೊಂಡರು. ನನಗೆ ಮದುವೆಗೆ ಇದಕ್ಕಿಂತ ದೊಡ್ಡ ಉಡುಗೊರೆ ಇಲ್ಲ ಎಂದ ಮದುಮಗಳು ವಾಪಸ್‌ ಬಂದು ಮದುವೆ ಪ್ರಕ್ರಿಯೆ ಮುಂದುವರೆಸಿದಳು.

    ಸಿಡಿ ಕೇಸ್‌ಗೆ ಮರುಜೀವ: ಕೋಟಿ ಆಫರ್‌- ಜಾರಕಿಹೊಳಿ ವಿರುದ್ಧ ಯುವತಿ ಬರೆದ್ರು ಕಮಿಷನರ್‌ಗೆ ಪತ್ರ

    ಆಸ್ಪತ್ರೆಗಳ ಹಾಸಿಗೆ ಮಾರಾಟ ದಂಧೆಗೆ ಬೀಳಲಿದೆ ಕಡಿವಾಣ- ಸಿದ್ಧವಾಗಲಿದೆ ಹೊಸ ಸಾಫ್ಟ್‌ವೇರ್

    ಮೂರನೇ ಬಾರಿ ಸಿಎಂ ಆಗಿ ಗದ್ದುಗೆಗೇರಿದ ಮಮತಾ- ಆರು ತಿಂಗಳ ಒಳಗೆ ಗೆದ್ದರೆ ಖುರ್ಚಿ ಭದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts