More

    ಪ್ರೇಯಸಿಯ ಬೆಡ್​ರೂಮ್​ವರೆಗೆ ಗುಟ್ಟಾಗಿ ಸುರಂಗ ತೋಡಿದ ಪತಿಮಹಾಶಯ- ಮುಂದೆ..?

    ಡೆಲ್​ ಪ್ರಾಡೋ (ಮೆಕ್ಸಿಕೊ): ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸರಿಯಾದದ್ದೇ ಎಂಬ ಮಾತಿದೆ. ಹಾಗೆಂದು ಇತ್ತ ಪತ್ನಿಗೂ ಮೋಸ ಮಾಡಿ, ಅತ್ತ ಪ್ರೇಯಸಿಯ ಪತಿಯ ಕಣ್ಣಿಗೂ ಮಣ್ಣೆರೆಚಿ ಗುಟ್ಟುಗುಟ್ಟಾಗಿ ಸಂಧಿಸಲು ಭಯಾನಕ ಪ್ಲ್ಯಾನ್​ ಮಾಡೋದೆ? ಆದರೆ ಈ ಯೋಜನೆಯಿಂದ ಮುಂದೆ ಆದದ್ದೆಲ್ಲವೂ ಭಯಾನಕವೆ!

    ಇದು ಮೆಕ್ಸಿಕೊದ ಡೆಲ್​ ಪ್ರಾಡೋ ಎಂಬ ಪ್ರದೇಶದಲ್ಲಿ ನಡೆದಿರುವ ಘಟನೆ., ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಆಲ್ಬರ್ಟೊ ವಿವಾಹಿತ. ಆದರೆ ಆತನಿಗೊಬ್ಬಳು ಪಮೇಲಾ ಎಂಬ ಪ್ರೇಯಸಿ ಇದ್ದಾಳೆ. ವಿಚಿತ್ರ ಎಂದರೆ ಆ ಪಮೇಲಾಗೂ ಮದುವೆಯಾಗಿದೆ.

    ಇತ್ತ ಪತ್ನಿ, ಅತ್ತ ಪ್ರೇಯಸಿಯ ಪತಿ ಇಬ್ಬರ ಕಣ್ಣು ತಪ್ಪಿಸಿ ಗುಟ್ಟುಗುಟ್ಟಾಗಿ ಸಂಧಿಸುವುದು ಈ ಪ್ರೇಮಿಗಳಿಗೆ ಭಾರಿ ಕಷ್ಟವಾಗಿತ್ತು. ಆದ್ದರಿಂದ ಆಲ್ಬರ್ಟೊ ಭಯಾನಕ ಯೋಜನೆ ರೂಪಿಸಿದ. ಅದೇನೆಂದರೆ ತಮ್ಮ ಮನೆಯಿಂದ ಗುಟ್ಟಾಗಿ ಸುರಂಗವೊಂದನ್ನು ಕೊರೆದ. ಅದು ಹೇಗಿತ್ತು ಎಂದರೆ ನೇರವಾಗಿ ಪ್ರೇಯಸಿಯ ಬೆಡ್​ರೂಂ ತಲುವಂತಿತ್ತು.

    ಈ ಪ್ಲ್ಯಾನ್​ ಕೆಲವು ತಿಂಗಳು ನಿರಾತಂಕವಾಗಿ ನಡೆಯುತ್ತಿತ್ತು. ಇತ್ತ ಈ ಕಳ್ಳವ್ಯವಹಾರ ಆಲ್ಬರ್ಟ್​ನ ಪತ್ನಿಗೂ ತಿಳಿಯಲಿಲ್ಲ, ಅತ್ತ ಪಮೇಲಾ ಮನೆಯಲ್ಲಿಯೇ ಇರುತ್ತಿದ್ದುದರಿಂದ ಆತನ ಪತಿಗೂ ಸ್ವಲ್ಪ ಅನುಮಾನ ಬರಲೇ ಇಲ್ಲ. ಇಬ್ಬರ ಮನೆಯೂ ಅಕ್ಕ-ಪಕ್ಕವೇ ಇದ್ದುದರಿಂದ ಸುರಂಗವನ್ನು ಕೊರೆಯಲು ಈತನಿಗೆ ಹೆಚ್ಚು ಶ್ರಮವೂ ಆಗಿಲ್ಲವಂತೆ.

    ಪ್ರೇಯಸಿಯ ಬೆಡ್​ರೂಮ್​ವರೆಗೆ ಗುಟ್ಟಾಗಿ ಸುರಂಗ ತೋಡಿದ ಪತಿಮಹಾಶಯ- ಮುಂದೆ..?

    ಹೀಗೆ ಗುಟ್ಟುಗುಟ್ಟಾಗಿ ಸ್ಪಂದಿಸುತ್ತಾ ತಮ್ಮ ಕೆಲಸವನ್ನು ನಿರಾತಂಕವಾಗಿ ಮುಂದುವರೆಸಿಕೊಂಡು ಬಂದಿತ್ತು ಈ ಜೋಡಿ. ಅದೊಂದು ದಿನ ಇವರ ಗ್ರಹಚಾರ ಕೆಟ್ಟಿತ್ತು. ಪಮೇಲಾಳ ಪತಿ ಜಾರ್ಜ್​ ಅನಾರೋಗ್ಯದ ನಿಮಿತ್ತ ಕಚೇರಿಯಿಂದ ಬೇಗನೇ ಮನೆಗೆ ಬಂದ. ಮನೆಯ ಬಾಗಿಲು ಬಡಿಯುತ್ತಿದ್ದಂತೆಯೇ ಬೆಡ್​ರೂಂನಲ್ಲಿ ಏಕಾಂತದಲ್ಲಿದ್ದ ಈ ಜೋಡಿಗೆ ದಿಗಿಲು ಬಡಿದಂತಾಯಿತು. ಆದರೆ ಮನೆಗೆ ಬಂದದ್ದು ಪತಿ ಎನ್ನುವುದು ಆಕೆಗೆ ತಿಳಿಯಲಿಲ್ಲ.

    ಹಾಗೂ ಹೀಗೂ ಬಂದವರನ್ನು ಸಾಗಿಸಿದರಾಯಿತು ಎಂದುಕೊಂಡ ಆಲ್ಬರ್ಟೊ ಸೋಫಾದ ಹಿಂದೆ ಅಡಗಿ ಕುಳಿತ. ಏನೂ ಆಗಿಲ್ಲ ಎನ್ನುವಂತೆ ಪಮೇಲಾ ಬಾಗಿಲು ತೆರೆದಳು. ಪತಿಯನ್ನು ನೋಡಿ ಆಕೆಗೆ ಶಾಕ್​ ಆಯಿತು. ಪತ್ನಿಯ ಮುಖ ನೋಡಿ ಜಾರ್ಜ್​ಗೆ ಏನೋ ಎಡವಟ್ಟು ಆಗಿದೆ ಎನ್ನಿಸಿದರೂ ಸುಮ್ಮನಾದ.

    ನಂತರ ಆತನ ಕಣ್ಣು ಸೋಫಾದ ಹಿಂದೆ ಬಿತ್ತು. ಅಲ್ಲಿ ಆಲ್ಬರ್ಟೊ ಕಾಣಿಸಿದ. ಅವನನ್ನು ಹಿಡಿದಾಗ ಪಕ್ಕದಲ್ಲಿಯೇ ಆತನಿಗೆ ಸೋಫಾದ ಹಿಂದಿರುವ ರಂಧ್ರವೂ ಕಾಣಿಸಿತು. ಅದೇನೆಂದು ನೋಡಿದಾಗ ಅದು ಸುರಂಗ ಮಾರ್ಗವಾಗಿದ್ದು, ನೇರವಾಗಿ ಆಲ್ಬರ್ಟ್​ ಮನೆಗೆ ಹೋಗುವುದು ತಿಳಿಯಿತು.

    ಕೂಡಲೇ ಆಲ್ಬರ್ಟ್​ನನ್ನು ಹಿಗ್ಗಾಮುಗ್ಗ ಥಳಿಸಿದ ಆತ ಪೊಲೀಸರನ್ನು ಕರೆಸಿದ. ಸದ್ಯ ಆಲ್ಬರ್ಟ್​ ಪೊಲೀಸರ ಅತಿಥಿ. ಈ ದಂಪತಿ ಕಥೆ ಏನಾಯಿತೋ ತಿಳಿಯದು. ಆದರೆ ಈ ಸುರಂಗ ಮಾತ್ರ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಫೋಟೋ ಶೇರ್​ ಆಗುತ್ತಿದೆ.

    ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!

    ಹೀಗೂ ಆಗತ್ತಾ? ತನ್ನ ವೋಟನ್ನು ತಾನೇ ಹಾಕದ ಅಭ್ಯರ್ಥಿ!

    ಹುಡುಗನಿಗೆ ಮದುವೆ ವಯಸ್ಸು ಆಗದಿದ್ದರೂ ವಯಸ್ಕರಿಬ್ಬರು ಒಟ್ಟಿಗೇ ಇರಬಹುದು ಎಂದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts