More

    ಕಳ್ಳತನಕ್ಕಿಳಿದು ಸಿಕ್ಕಿಬಿದ್ದ ಇಂಜಿನಿಯರ್‌: ಸಂಬಳದಿಂದ ಗರ್ಲ್‌ಫ್ರೆಂಡ್‌ ಇಟ್ಕೊಳೋಕಾಗತ್ತಾ? ಈಗ್ನೋಡಿ ಮನೆ ಕಟ್ಟಿಸಿದೆ ಎಂದ!

    ನಾಗ್ಪುರ: ತನಗೆ ಬರುತ್ತಿರುವ ಸಂಬಳದಿಂದ ಗರ್ಲ್‌ಫ್ರೆಂಡ್‌ ಖುಷಿಯಾಗಿಲ್ಲ, ಆಕೆ ತನ್ನ ಕೈತಪ್ಪಿಹೋಗುತ್ತಾಳೆ ಎಂದು ಸಿವಿಲ್‌ ಇಂಜಿನಿಯರ್‌ನೊಬ್ಬ ಸರಗಳ್ಳತನಕ್ಕೆ ಇಳಿದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ವಿಚಿತ್ರ ಎಂದರೆ ಇದೇ ರೀತಿ ಕಳ್ಳತನ ಮಾಡಿ ಸ್ನೇಹಿತೆಗಾಗಿ ಮನೆಯನ್ನೂ ಕಟ್ಟಿಸಿದ್ದಾನೆ ಈ ಖದೀಮ. ಹೀಗೆ ಹಲವಾರು ಕಡೆ ಕಳ್ಳತನ ಮಾಡಿ ಸಿಕ್ಕಿಹಾಕಿಕೊಳ್ಳದಿದ್ದ ಈತ ಕೊನೆಗೂ ಈಗ ಪೊಲೀಸರ ಅತಿಥಿಯಾಗಿದ್ದಾನೆ. 27ರ ವರ್ಷ ವಯಸ್ಸಿನ ಉಮೇಶ್ ಪಾಟೀಲ್ ಈ ಖದೀಮ.

    2015ರಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿರುವ ಈತ ಕಾಂಟ್ರಾಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವನಿಗೆ ಚೆನ್ನಾಗಿ ಸಂಬಳ ಬರುತ್ತಿತ್ತು. ಅಷ್ಟೊತ್ತಿಗೆ ಪ್ರೀತಿಯ ಬಲೆಯಲ್ಲಿ ಬಿದ್ದ. ಐಷಾರಾಮಿ ಜೀವನ ಬಯಸುವ ಸ್ನೇಹಿತೆಯ ಆಸೆ ಪೂರೈಸಲು ಇವನಿಗೆ ಸಂಬಳ ಸಾಲುತ್ತಿರಲಿಲ್ಲ. ಆದ್ದರಿಂದ ಚಿಕ್ಕ‍ಪುಟ್ಟ ಕಳ್ಳತನ ಮಾಡತೊಡಗಿದ. ಇದರಿಂದ ದುಡ್ಡು ಬಂದು ತಾನೂ ಐಷಾರಾಮಿ ಜೀವನ ಶುರು ಮಾಡಿದ. ಸಿಕ್ಕಿಬೀಳುವುದಿಲ್ಲ ಎಂದು ದೃಢವಾಗುತ್ತಲೇ ಕಳ್ಳತನದ ಕೆಲಸ ಮುಂದುವರೆಸಿದ. ನಂತರ ಚಿನ್ನದ ಸರ ಕದಿಯುವ ಕೆಲಸ ಶುರುವಿಟ್ಟುಕೊಂಡ.

    ಇದಕ್ಕಾಗಿ ಕಳ್ಳತನದಲ್ಲಿ ನುರಿತ ತುಷಾರ್ ಎಂಬ ವ್ಯಕ್ತಿಯಿಂದ ತರಬೇತಿಯನ್ನೂ ಪಡೆದ. ಅವನ ಜತೆಗೂಡಿ 20ಕ್ಕೂ ಹೆಚ್ಚು ಚಿನ್ನದ ಸರ ಎಗರಿಸಿದ. ಹಣ ಹಂಚಿಕೆ ವಿಚಾರದಲ್ಲಿ ತುಷಾರ್ ಹಾಗೂ ಉಮೇಶ್ ನಡುವೆ ಬಿರುಕು ಉಂಟಾಯಿತು. ಹೀಗಾಗಿ ಉಮೇಶ್ ಏಕಾಂಗಿಯಾಗಿ ಕಳ್ಳತನಕ್ಕಿಳಿದ. ನಂತರ 36 ಸರಗಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸಿದ್ದ. ಕೆಲ ಭಾಗಗಳಲ್ಲಿ ಸರಗಳ್ಳತನ ಹೆಚ್ಚುತ್ತಿರುವ ಬಗ್ಗೆ ಪೊಲೀಸರು ಕೆಲ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದರು. ಈತನ ಮೇಲೂ ಕಣ್ಣು ಇತ್ತು.

    ಮೊನ್ನೆ ಈತ ಇನ್ನೇನು ಮಹಿಳೆಯೊಬ್ಬರ ಸರ ಕದಿಯಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ. ‍ಪೊಲೀಸರು ಈತನ ಬಳಿಯಿಂದ 2.5 ಲಕ್ಷ ರೂಪಾಯಿ ನಗದು ಹಾಗೂ 27 ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಈತನ ಖಾತೆಯಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್ ಕೂಡ ಪತ್ತೆಯಾಗಿದೆ.

    ಈತನ ಬಾಯಿ ಬಿಡಿಸಿದಾಗ ಸರಗಳ್ಳತನ ಮಾಡಿದ ಹಣದಿಂದ 45 ಲಕ್ಷ ರೂಪಾಯಿ ನೀಡಿ ಸ್ನೇಹಿತೆಗೆ ಫ್ಲ್ಯಾಟ್‌ ಖರೀದಿಸಿರುವುದಾಗಿ ಹೇಳಿದ್ದಾನೆ. ಜತೆಗೆ ಆಕೆಗಾಗಿ ಸರಗಳ್ಳತನಕ್ಕೆ ಇಳಿದಿರುವುದಾಗಿಯೂ ಹೇಳಿಕೊಂಡಿದ್ದಾನೆ. ಸಂಬಳ ನೆಚ್ಚಿಕೊಂಡರೆ ಆಕೆ ಜತೆಯಲ್ಲಿ ಇರುತ್ತಿರಲಿಲ್ಲ ಎಂದಿದ್ದಾನೆ. ಕದ್ದ ಚಿನ್ನದ ಸರಗಳನ್ನು ಈತ ಪರಿಚಯಸ್ಥ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ . ಚಿನ್ನದ ಅಂಗಡಿ ಮಾಲೀಕನನ್ನೂ ಬಂಧಿಸಲಾಗಿದೆ.

    ಮೊದಲ ರಾತ್ರಿಯೇ ಪತ್ನಿಯ ಮುನಿಸು: ಕಾರಣ ಕೇಳಿ ಬೆಚ್ಚಿಬಿದ್ದ ಗಂಡ ತೆಗೆದುಕೊಂಡ ದಿಟ್ಟ ನಿರ್ಧಾರ- ಶ್ಲಾಘನೆಗಳ ಮಹಾಪೂರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts