More

    VIDEO: ಸುರಂಗದ ವಾಟರ್‌ಟ್ಯಾಂಕ್‌ನಲ್ಲಿ ಕೋಟಿಕೋಟಿ ನೋಟು! ಈತನ ಆಸ್ತಿ ವಿವರ ಕೊಟ್ರೆ 10 ಸಾವಿರ ರೂ. ಬಹುಮಾನ!

    ಭೋಪಾಲ್: ಈ ಉದ್ಯಮಿಯ ಇನ್ನಷ್ಟು ಆಸ್ತಿ ವಿವರ ಬಹಿರಂಗಪಡಿಸಿದವರಿಗೆ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು…

    ಹೀಗೊಂದು ಆದೇಶವನ್ನು ಮಧ್ಯಪ್ರದೇಶ ಸರ್ಕಾರ ಹೊರಡಿಸಿದೆ. ಸುರಂಗದ ವಾಟರ್‌ಟ್ಯಾಂಕ್‌ನಲ್ಲಿ ಕೋಟಿಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಬಚ್ಚಿಟ್ಟುಕೊಂಡು ಸರ್ಕಾರಕ್ಕೆ ಟೋಪಿ ಹಾಕುತ್ತಿದ್ದ ದಾಮೋಹ್‌ ಜಿಲ್ಲೆಯ ಉದ್ಯಮಿ ಶಂಕರ್‌ ರೈ ಅವರಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.

    ಕಾಂಗ್ರೆಸ್‌ ಬೆಂಬಲದೊಂದಿಗೆ ದಾಮೋಹ್‌ ನಗರ ಪಾಲಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಈ ಉದ್ಯಮಿಯ ಮನೆಗೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದು, 8 ಕೋಟಿಯನ್ನು ವಶಪಡಿಸಿಕೊಂಡಿದ್ದಾರೆ, ಜತೆಗೆ ಕೋಟಿಗಟ್ಟಲೆ ಬೆಲೆಬಾಳುವ ಚಿನ್ನಾಭರಣಗಳೂ ಸಿಕ್ಕಿವೆ. ಇವೆಲ್ಲವೂ ಸುರಂಗದ ವಾಟರ್‌ ಟ್ಯಾಂಕ್‌ನಲ್ಲಿ ಬಚ್ಚಿಡಲಾಗಿತ್ತು. ಇದೂ ಅಲ್ಲದೇ ಮನೆಯಲ್ಲಿ 5 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

    ಉದ್ಯಮಿ ಶಂಕರ್‌ ರೈ ಮತ್ತು ಆತನ ಕುಟುಂಬದವರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ ವಶಕ್ಕೆ ಪಡೆದಿರುವ ಹಣ, ಚಿನ್ನಾಭರಣಗಳು ಅಘೋಷಿತವಾಗಿವೆ. ಅದನ್ನು ಬ್ಯಾಗ್‌ನಲ್ಲಿ ತುಂಬಿ ಸುರಂಗದ ವಾಟರ್‌ ಟ್ಯಾಂಕ್‌ನಲ್ಲಿ ಬಚ್ಚಿಡಲಾಗಿತ್ತು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ. ಸತತ 39 ಗಂಟೆಗಳ ಕಾಲ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು.
    ಶಂಕರ್‌ ಅವರ ಸಹೋದರ ಕಮಲ್‌ ರೈ ಈ ಹಿಂದೆ ಬಿಜೆಪಿಯ ಬೆಂಬಲದೊಂದಿಗೆ ಪಾಲಿಕೆ ಉಪಾಧ್ಯಕ್ಷರಾಗಿದ್ದರು.

    ಇಲ್ಲಿದೆ ನೋಟಿ ಐಟಿ ರೇಡ್‌ ವಿಡಿಯೋ:

    VIDEO: ಆಹಾರಗಳ ಮೇಲಾಯ್ತು- ತಲೆಯ ಮೇಲೂ ಉಗುಳಿದ ಸುಪ್ರಸಿದ್ಧ ಕೇಶ ವಿನ್ಯಾಸಕಾರ! ಎಲ್ಲೆಡೆ ಭಾರಿ ಆಕ್ರೋಶ

    ಪ್ರಧಾನಿ ಹತ್ಯೆಗೆ ನಿಜವಾಗ್ಲೂ ನಡೆದಿತ್ತಾ ಸಂಚು? ಪಂಜಾಬ್‌ನ ಭದ್ರತಾಲೋಪ ಜಾಗದಲ್ಲಿ ಸಿಕ್ತು ಪಾಕ್‌ ದೋಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts