More

    ಪ್ರಧಾನಿ ಹತ್ಯೆಗೆ ನಿಜವಾಗ್ಲೂ ನಡೆದಿತ್ತಾ ಸಂಚು? ಪಂಜಾಬ್‌ನ ಭದ್ರತಾಲೋಪ ಜಾಗದಲ್ಲಿ ಸಿಕ್ತು ಪಾಕ್‌ ದೋಣಿ!

    ನವದೆಹಲಿ: ಪಂಜಾಬ್‌ನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಿರುವ ಭದ್ರತಾ ಲೋಪದ ಬಗ್ಗೆ ಭಾರಿ ವಿವಾದಗಳು ಎದ್ದಿರುವ ನಡುವೆಯೇ, ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪಗಳು ಕೇಳಿಬರುತ್ತವೆ. ಇದಕ್ಕೆ ಪುರಾವೆ ಎಂಬಂತೆ ಅದೇ ಜಾಗದಲ್ಲಿ ಪಾಕಿಸ್ತಾನದ ದೋಣಿಯೊಂದು ಪತ್ತೆಯಾಗಿದ್ದು, ಭಾರಿ ಅನುಮಾನಕ್ಕೆ ಕಾರಣವಾಗಿದೆ.

    ಪಾಕಿಸ್ತಾನದ ಗಡಿಯನ್ನು ಹಂಚಿಕೊಂಡಿರುವ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಈ ಭದ್ರತಾ ಲೋಪವಾಗಿತ್ತು. ಅಲ್ಲಿ ನಡೆದಿರುವ ಸಂಪೂರ್ಣ ಘಟನೆಯನ್ನು ಕಂಡವರು ಇದು ನಿಜವಾಗಿಯೂ ಪ್ರಧಾನಿಯವರ ಹತ್ಯೆಗೆ ನಡೆಸಿದ್ದ ಸಂಚೇ ಎಂದು ಬಣ್ಣಿಸುತ್ತಿದ್ದಾರೆ. ಈ ವಿವಾದ ಇದೀಗ ಸುಪ್ರೀಂಕೋರ್ಟ್‌ ಅಂಗಳಕ್ಕೂ ಹೋಗಿದೆ.

    ಅದೇ ಇನ್ನೊಂದೆಡೆ ಇದರ ಸತ್ಯಾಸತ್ಯತೆಯ ಪರೀಕ್ಷೆಗೆ ತನಿಖೆಯನ್ನೂ ಕೈಗೊಳ್ಳಲಾಗುತ್ತಿದೆ. ಇದೇ ಜಾಗದಲ್ಲಿ ಬಿಎಸ್‌ಎಫ್ ಯೋಧರು, ಪಾಕಿಸ್ತಾನದ ದೋಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಬಿಎಸ್‌ಎಫ್‌ ಅಧಿಕಾರಿ, ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಈ ಗಡಿಯು ಭದ್ರತೆಯ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿದೆ. ಇದೇ ಜಾಗದಲ್ಲಿ ಈ ಹಿಂದೆ ಹಲವು ಪಾಕಿಸ್ತಾನದ ಡ್ರೋನ್‌ಗಳು ಹಾರಾಡುತ್ತಿದ್ದುದು ಕಂಡುಬಂದಿದೆ. ಅವುಗಳನ್ನು ನಮ್ಮ ಯೋಧರು ಹೊಡೆದುರುಳಿಸಿದ್ದಾರೆ. ಗಡಿಯಲ್ಲಿರುವ ಡಿಟಿ ಮಾಲ್ ಔಟ್‌ಪೋಸ್ಟ್ ಬಳಿ ಬಿಎಸ್​ಎಫ್​ನ 136ನೇ ಬೆಟಾಲಿಯನ್‌ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮರದ ದೋಣಿಯನ್ನು ಗಮನಿಸಿದ್ದು, ಪ್ರಧಾನಿ ಮೋದಿಯವರು ಬರುವ ದಿನವೇ ಅದು ಇಲ್ಲಿ ಕಂಡುಬಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.

    ಸಾಮಾನ್ಯವಾಗಿ ಶಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಇಂತಹ ಬೋಟ್​ಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    VIDEO: ‘ಏನ್‌ ಕಥೇರಿ ನಿಮ್ದು.. ಅವ್ನು ನನ್ನ ಮಗ ಕಣ್ರೀ…’ ಬಿಜೆಪಿ ಮುಖಂಡನ ಕೆನ್ನೆಗೆ ಹೊಡೆದು ಬೇಸ್ತು ಬಿದ್ದ ರೈತ

    VIDEO: ಆಹಾರಗಳ ಮೇಲಾಯ್ತು- ತಲೆಯ ಮೇಲೂ ಉಗುಳಿದ ಸುಪ್ರಸಿದ್ಧ ಕೇಶ ವಿನ್ಯಾಸಕಾರ! ಎಲ್ಲೆಡೆ ಭಾರಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts