More

    ಮೂರು ಬಾರಿ ಶಾಸಕಿಯಾಗಿದ್ದ ಬಿಜೆಪಿಯ ಕಿರಣ್​ ಕರೊನಾಕ್ಕೆ ಬಲಿ

    ಜೈಪುರ: ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕರೊನಾ ಸೋಂಕಿನಿಂದಾಗಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

    ಕಳೆದ ತಿಂಗಳು ಕರೊನಾ ಪಾಸಿಟಿವ್ ವರದಿ ಬಂದಿದ್ದ ನಂತರದಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರು ಮೆಡಂತ ಆಸ್ಪತ್ರೆಯಲ್ಲಿ ಕೋವಿಡ್‌ಗೆ‌ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿರುವುದಾಗಿ ಮೂಲಗಳು ಹೇಳಿವೆ.

    ಮಹೇಶ್ವರಿ ಅವರು ರಾಜ್ಸಾಮಂದ್‌ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ರಾಜಸ್ಥಾನದ ಉದಯಪುರ ಕ್ಷೇತ್ರದಿಂದ 2006 ರಿಂದ 2009 ರವರೆಗೆ 14ನೇ ಲೋಕಸಭೆ ಸದಸ್ಯರಾಗಿದ್ದರು.

    ಕೋಟಾ ಉತ್ತರ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಉಸ್ತುವಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.
    ಕಿರಣ್ ಮಹೇಶ್ವರಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಪ್ರಗತಿಗೆ, ಬಡವರ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ ಎಂದು ಸ್ಮರಿಸಿದ್ದಾರೆ.

    ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ವಿಧಾನಸಭೆ ಸ್ಪೀಕರ್ ಸಿ.ಪಿ ಜೋಶಿ, ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ಇತರ ನಾಯಕರು ಮಹೇಶ್ವರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಕಿರಣ್ ಮಹೇಶ್ವರಿ ಅವರ ಅಕಾಲಿಕ ನಿಧನದಿಂದ ಬಹಳ ಬೇಸರವಾಗಿದೆ. ಅವರ ಕುಟುಂಬ, ಸ್ನೇಹಿತರಿಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ಅಶೋಕ್‌ ಗೆಹ್ಲೋಟ್‌ ಅವರು ಟ್ವೀಟ್‌ ಮಾಡಿದ್ದಾರೆ. ಸ್ಪೀಕರ್ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸಿಪಿಎಂ ‘ಗೂಂಡಾ’ನಿಂದ ಮಗು ಕಳೆದುಕೊಂಡಾಕೆ ಈಗ ಬಿಜೆಪಿ ನಾಯಕಿ

    ಕಾಲೇಜ್​ವರೆಗೂ ಹುಡುಗಿಯಾಗೇ ಇದ್ದೆ… ಆದ್ರೆ… ರಹಸ್ಯ ಬಿಚ್ಚಿಟ್ಟ ಗಾಯಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts