More

    ಸಿಪಿಎಂ ‘ಗೂಂಡಾ’ನಿಂದ ಮಗು ಕಳೆದುಕೊಂಡಾಕೆ ಈಗ ಬಿಜೆಪಿ ನಾಯಕಿ

    ತಿರುನಂತಪುರ: ಇದು 2018ರ ವೇಳೆ. ಜ್ಯೋತ್ಸ್ನಾ ಜೋಸ್‌ ಎಂಬ ಕೇರಳದ ಕಲ್ಲಿಕೋಟೆಯ ಬಾಲುಸ್ಸೆರಿ ಯುವತಿ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದರು.

    ಇವರ ಪತಿ ಮತ್ತು ಪಕ್ಕದ ಮನೆಯ ವ್ಯಕ್ತಿಯ ನಡುವೆ ಅದೇನೋ ಗಲಾಟೆಯಲ್ಲಿ ಮಾತಿನ ಚಕಮಕಿ ಶುರುವಾಗಿತ್ತು. ಅದೇ ಸಂದರ್ಭದಲ್ಲಿ ಪಕ್ಕದ ಮನೆಯ ವ್ಯಕ್ತಿಯ ಬೆಂಬಲಿಗರಿಬ್ಬರು ಬಂದು ಜ್ಯೋತ್ಸ್ನ್ಯಾ ಅವರ ಪತಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು. ಅವರಲ್ಲಿ ಒಬ್ಬ ಸಿಪಿಎಂ ನಾಯಕ ಥಾಂಬೆ.

    ಪತಿಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತಡೆಯಲು ಜ್ಯೋತ್ಸ್ನಾ ಮಧ್ಯೆ ಪ್ರವೇಶಿಸಿದರು. ಆಗ ಥಾಂಬೆ ಉದ್ದೇಶಪೂರ್ವಕವಾಗಿ ಜ್ಯೋತ್ಸ್ನಾ ಅವರ ಹೊಟ್ಟೆಗೆ ಗುದ್ದಿದ. ಜ್ಯೋತ್ಸ್ನಾರಿಗೆ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಆರಂಭವಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ಗಂಭೀರವಾಗಿದ್ದ ಕಾರಣ ವೈದ್ಯರು ಅನಿವಾರ್ಯವಾಗಿ ಗರ್ಭಪಾತ ಮಾಡಿದ್ದರು.

    ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಜ್ಯೋತ್ಸ್ನಾ ಕುಟುಂಬದವರು ಅಂದು ಆರೋಪಿಸಿದ್ದರು.

    ಇದೇ ಜ್ಯೋತ್ಸ್ನ್ಯಾ ಇಂದು ಸಿಪಿಎಂ ವಿರುದ್ಧ ಸಿಡಿದೆದ್ದು ಬಿಜೆಪಿಯಿಂದ ಕೇರಳದ ಬಲುಸ್ಸೆರಿ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

    ಈ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಟ್ವೀಟ್​ ಮಾಡಿದ್ದು, ‘ಇವರು ಜ್ಯೋತ್ಸ್ನಾ ಜೋಸ್‌. ಒಮ್ಮೆ ಸಿಪಿಎಂ ಗೂಂಡಾನಿಂದ ಹೊಟ್ಟೆಗೆ ಒದೆಸಿಕೊಂಡು ಗರ್ಭಪಾತದಿಂದ ನಾಲ್ಕೂವರೆ ತಿಂಗಳ ಮಗುವನ್ನು ಕಳೆದುಕೊಂಡಿದ್ದಾರೆ. ಸಿಪಿಎಂ ಆಡಳಿತಕ್ಕೆ ಕೊನೆ ಹಾಡಲು ಜ್ಯೋತ್ಸ್ನಾ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ ಎಂದಿದ್ದಾರೆ.

    ಸ್ಟ್ರೈಕ್​ ಬಗ್ಗೆ ಮಾತಾಡೋಕೆ ಅವರ್ಯಾರ್ರಿ… ಅವ್ರನ್ನ ನಾನು ನಾಯಿ ಅಂತೀನಿ ಎಂದ ವಾಟಾಳ್​!

    ಇಂದು ಇದ್ದೇನೆ… ನಾಳೆ ಗೊತ್ತಿಲ್ಲ… ಹುತಾತ್ಮ ಯೋಧನ ಕೊನೆ ಸಂದೇಶ ಸತ್ಯವಾಗಿಯೇ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts