More

    ಭಾರಿ ಸಂಚಲನ ಸೃಷ್ಟಿಸಿದ್ದ ಉ.ಪ್ರದೇಶದ ಹಾಥರಾಸ್​, ಲಖೀಂಪುರ ಕ್ಷೇತ್ರಗಳಲ್ಲಿ ಅಚ್ಚರಿಯ ಬೆಳವಣಿಗೆ…

    ಲಖನೌ: ಉತ್ತರ ಪ್ರದೇಶ ಎಂದಾಕ್ಷಣ ನೆನಪಾಗುವುದು ಹಾಥರಾಸ್​ ಮತ್ತು ಲಖೀಂಪುರ. ಗ್ಯಾಂಗ್​ರೇಪ್​ ಪ್ರಕರಣದಲ್ಲಿ ಕಳೆದ ವರ್ಷ ಹಾಥರಾಸ್​ ಬಿಜೆಪಿ ಸರ್ಕಾರವನ್ನು ಭಾರಿ ಮುಜುಗರಕ್ಕೆ ಈಡು ಮಾಡಿದ್ದರೆ, ಕೃಷಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರ ಪ್ರಕರಣದಿಂದ ಲಖೀಂಪುರ ವಿದೇಶಗಳಲ್ಲಿಯೂ ಸಂಚಲನ ಸೃಷ್ಟಿಸಿತ್ತು. ವಿರೋಧ ಪಕ್ಷಗಳು ಈ ಎರಡು ಪ್ರದೇಶಗಳನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಮೇಲೆ ಹರಿಹಾಯ್ದಿದ್ದವು. ಮಾತ್ರವಲ್ಲದೇ ಚುನಾವಣೆ ವೇಳೆಯೂ ಈ ಪ್ರಕರಣಗಳನ್ನೇ ಬಂಡವಾಳ ಮಾಡಿಕೊಂಡು ಪ್ರಚಾರ ನಡೆಸಿದ್ದವು.

    ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ವಿಷಯಗಳು ಚರ್ಚೆ ಆಗಿತ್ತು. ಈ ಎರಡು ಪ್ರಕರಣಗಳಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದ್ದವು.

    ಆದರೆ ಇದೀಗ ವಿರೋಧ ಪಕ್ಷಗಳೂ ತಲೆತಗ್ಗಿಸುವಂಥ ಫಲಿತಾಂಶ ಸದ್ಯ ಈ ಎರಡೂ ಪ್ರದೇಶಗಳಲ್ಲಿ ಕಂಡುಬಂದಿದೆ. ಏಕೆಂದರೆ ಹಾಥರಾಸ್​ ಮತ್ತು ಲಖೀಂಪುರ ಜಿಲ್ಲೆಯ ಎಲ್ಲ ಕೇತ್ರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಇದರಿಂದಾಗಿ, ಮತದಾರರು ಈ ಪ್ರಕಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬಿಜೆಪಿಗೆ ಭರ್ಜರಿ ಗೆಲುವು ತರಿಸಿಕೊಡುವಲ್ಲಿ ಮುಂದಾಗಿದ್ದಾರೆ.

    ಒಟ್ಟು 403 ಕ್ಷೇತ್ರಗಳ ಪೈಕಿ ಬಹುಮತಕ್ಕೆ 203 ಸ್ಥಾನಗಳ ಅಗತ್ಯವಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು 18 ಸ್ಥಾನವನ್ನು ಗೆದ್ದಿದ್ದರು.
    ಬೆಳಗ್ಗೆ 10 ಗಂಟೆಯ ವೇಳೆಗೆ, ಬಿಜೆಪಿ 270, ಎಸ್‌ಪಿ 106, ಬಿಸ್‌ಪಿ 3, ಕಾಂಗ್ರೆಸ್‌ 4, ಇತರರು 5 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ: ಮತ್ತೆ ಅಧಿಕಾರದ ಗದ್ದುಗೆ ಏರುವತ್ತ ಸಿಎಂ ಯೋಗಿ ಹೆಜ್ಜೆ

    ಪಂಜಾಬ್​ ಸಿಎಂ ಚನ್ನಿ ಸ್ಪರ್ಧಿಸಿದ್ದ 2 ಕ್ಷೇತ್ರದಲ್ಲೂ ಹಿನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts