More

    ಮದ್ಯ ಬೇಕಾ? ನಮ್‌ ರಾಜ್ಯ ಬೇಕಾ? ಒಂದನ್ನು ಆಯ್ಕೆ ಮಾಡ್ಕೊಳಿ… ಎಣ್ಣೆ ಬೇಕಾದ್ರೆ ಕಾಲಿಡ್ಲೇಬೇಡಿ ಎಂದ ಬಿಹಾರದ ಸಿಎಂ

    ಪಾಟ್ನಾ: ಮದ್ಯ ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಇದಾಗಲೇ ಕೆಲವು ರಾಜ್ಯ ಸರ್ಕಾರಗಳು ದಿಟ್ಟ ನಿಲುವು ತಾಳಿದೆ. ಈ ನಡುವೆಯೇ ಬಿಹಾರ್‌ದಲ್ಲಿ ಕೂಡ ಮದ್ಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಠಿಣವಾಗಿ ಮಾತನಾಡಿದ್ದಾರೆ.

    ಬೇರೆ ರಾಜ್ಯಗಳಿಂದ ಬರುವವರು ಮದ್ಯ ಸೇವಿಸಬೇಕು ಅಂದರೆ ಬಿಹಾರಕ್ಕೆ ಬರಲೇಬೇಡಿ ಎಂದು ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಬೇರೆ ರಾಜ್ಯಗಳಿಂದ ಬರುವವರು ಮದ್ಯ ನಿಷೇಧಿಸಿರುವುದರಿಂದ ಸಮಸ್ಯೆಯಾಗುತ್ತದೆ ಅಂದರೆ ಬಿಹಾರಕ್ಕೆ ಬರಲೇಬೇಡಿ. ನೀವು ಬಿಹಾರಕ್ಕೆ ಬರುವ ಅಗತ್ಯವಿಲ್ಲ ಎಂದಿದ್ದಾರೆ.

    ಬಿಹಾರಕ್ಕೆ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ತಮಗೆ ಮದ್ಯ ನಿಷೇಧ ಕಾನೂನನ್ನು ಸಡಿಲಗೊಳಿಸುವ ಬಗ್ಗೆ ಕೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವಾರ್ನಿಂಗ್‌ ಸಿಎಂ ನೀಡಿದ್ದಾರೆ. ಸಸಾರಂನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ, ‘ನಮ್ಮ ರಾಜ್ಯಕ್ಕೆ ಭೇಟಿ ನೀಡುವವರು ಮದ್ಯ ಸೇವನೆಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನಾವು ಅವರಿಗೆ ಮದ್ಯಪಾನ ಮಾಡಲು ಅವಕಾಶ ನೀಡಲಾಗದು. ಆದ್ದರಿಂದ ಮದ್ಯ ಕುಡಿಯಲೇಬೇಕು ಎಂದರೆ ಬಿಹಾರಕ್ಕೆ ಬರಲೇಬೇಡಿ’ ಎಂದಿದ್ದಾರೆ.

    ಎಷ್ಟೇ ವಿದ್ಯಾವಂತರು, ತಿಳಿವಳಿಕೆಯುಳ್ಳವರಾಗಿದ್ದರೂ ಮದ್ಯ ಸೇವನೆಗೆ ನಾವು ಅವಕಾಶ ಕೊಡುವುದಿಲ್ಲ. ಹೊರ ರಾಜ್ಯಗಳ ಪ್ರವಾಸಿಗರೆ ಮಾತ್ರ ಮದ್ಯಪಾನ ನಿಷೇಧ ಕಾನೂನು ಸಡಿಲಗೊಳಿಸುವ ಪ್ರಶ್ನೆಯೇ ಇಲ್ಲ. ಮದ್ಯಪಾನ ಬೇಕು ಎಂದು ಹಠ ಹಿಡಿಯುವವರು ಮಹಾತ್ಮ ಗಾಂಧಿ ಹಾಗೂ ಸಮಾಜದ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾರಲ್ಲಿ.. ಎಲ್ರೂ ಬರ್ರಪ್ಪಾ.. ಯಾವ್‌ ಪಕ್ಷ ಆದ್ರೇನು… ಎಲ್ಲರೂ ನಮ್ಮವ್ರೇ.. ಬನ್ನಿ ಫೋಟೋಗೆ ಎಂದು ಮನಗೆದ್ದ ಸಿ.ಟಿ.ರವಿ

    ನಟ ಸಿದ್ಧಾರ್ಥ್‌ನ ಅಗಲಿಕೆಯಿಂದ ಚೇತರಿಸಿಕೊಳ್ಳದ ಸ್ನೇಹಿತೆ ಶೆಹನಾಜ್‌ಗೆ ಇನ್ನೊಂದು ಶಾಕ್‌! ಅಪ್ಪ ಬಿಜೆಪಿಗೆ ಸೇರಿದ್ದೇ ತಪ್ಪಾಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts