More

    ಸತ್ತ ಮೇಲೂ ವೈರಸ್‌ ಜೀವಂತ ಎಂದು ಹತ್ತಿರ ಬಿಟ್ಟುಕೊಳ್ಳದ ಜನ; ಶವಸಂಸ್ಕಾರಕ್ಕೆ ಪರದಾಡಿದ ಬೆಳಗಾವಿ ಕುಟುಂಬ

    ಬೆಳಗಾವಿ: ಕರೊನಾ ಸೋಂಕಿನಿಂದ ಜನರು ಮೃತಪಟ್ಟರೆ ಅವರ ಶವಗಳ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡದೇ ಇರುವುದು ಹೊಸ ವಿಷಯವೇನಲ್ಲ. ಕರೊನಾದ ಮೊದಲ ಅಲೆಯಿಂದಲೂ ಇಂಥ ಘಟನೆಗಳು ನಡೆಯುತ್ತಲೇ ಇವೆ.

    ಇದರಿಂದಾಗಿ ಸೋಂಕಿನಿಂದ ಮೃತಪಟ್ಟ ಕುಟುಂದವರ ಸ್ಥಿತಿಯಂತೂ ಹೇಳತೀರಲಾಗಿದೆ. ಅಂಥದ್ದೇ ಒಂದು ಭಯಾನಕತೆ ಸಾಕ್ಷಿಯಾಯಿತು ಬೆಳಗಾವಿ ತಾಲೂಕಿನ ಕಮಕಾರಟ್ಟಿ ಗ್ರಾಮ. ಇಲ್ಲಿನ ಮಹಿಳೆಯೊಬ್ಬರಿಗೆ ಸೋಂಕು ತಗುಲಿತ್ತು. ಮೊದಲಿನಿಂದಲೂ ಈ ಕುಟುಂಬವನ್ನು ಕಂಡರೆ ಎಲ್ಲರೂ ದೂರ ಸರಿಯುತ್ತಿದ್ದರು.

    ಆದರೆ ಇದೀಗ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ. 60 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ ಗ್ರಾಮಸ್ಥರು ಅಂತ್ಯಕ್ರಿಯೆಗೂ ಅನುಮತಿ ನೀಡುತ್ತಿಲ್ಲ. ತಮ್ಮ ತಮ್ಮ ಏರಿಯಾದ ಸ್ಮಶಾನದಲ್ಲಿ ಕೋವಿಡ್ ಸೋಂಕಿತರ ಶವ ಸಂಸ್ಕಾರಕ್ಕೆ ಬಿಡದೇ ಅಡ್ಡಿ ಪಡಿಸುವುದು ಇಲ್ಲಿ ಮಾಮೂಲಾಗಿದೆ.

    ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದರೆ ಕರೊನಾ ಸೋಂಕು ಗ್ರಾಮಕ್ಕೆ ಹರಡುತ್ತೆ ಎನ್ನುವ ಆತಂಕದಿಂದ

    ವಿರೋಧ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯನ್ನೂ ಲೆಕ್ಕಿಸದೆ ಮಳೆಯಲ್ಲಿ ತಡರಾತ್ರಿಯಲ್ಲಿ ಸೋಂಕಿತ ಮಹಿಳೆ ಅಂತ್ಯಕ್ರಿಯೆಯನ್ನು ಬೆಳಗಾವಿ ನಗರದ ಶಹಾಪೂರ ಸ್ಮಶಾನದಲ್ಲಿ ನಡೆಸಬೇಕಾಗಿ ಬಂತು.

    ಕೋವಿಡ್ ಸೋಂಕಿತ ವ್ಯಕ್ತಿ ಸತ್ತರೂ ವೈರಸ್ ಇನ್ನೂ ಜೀವಂತ ಇರ್ತಾವೆ ಎನ್ನೋ ಭ್ರಮೆಯಲ್ಲಿ ಜನರು‌ ಇರುವ ಕಾರಣ ಹೀಗೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅಂತ್ಯಕ್ರಿಯೆ ನೆರವೇರಿಸಲು ಸಹಾಯಮಾಡಿದ ಸಮಾಜಸೇವಕ ಸುರೇಂದ್ರ ಅನಗೋಳಕರ್ ಹೇಳಿದ್ದಾರೆ.

    ಅಣ್ಣನ ಚಿತೆಗೆ ಬೆಂಕಿ ಇಟ್ಟಳು- ನಾಲ್ಕೇ ದಿನದಲ್ಲಿ ಅಪ್ಪನ ಚಿತೆ ಸಿದ್ಧವಾಯ್ತು! ಕಣ್ಣೀರಲ್ಲಿ ಗ್ರಾಮ

    ಕರೊನಾದಿಂದ ಅಪ್ಪನ ಸಾವು- ದುಃಖ ತಡೆಯಲಾರದೇ ಚಿತೆಗೆ ಹಾರಿದ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts