More

    ಎಸ್‌ಬಿಐಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ದೋಚಿದ ದರೋಡೆಕೋರರು: ಬ್ಯಾಂಕ್‌ ಸಿಬ್ಬಂದಿ ಸಾವು

    ಮುಂಬೈ: ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ಮುಂಬೈ ಶಾಖೆಯಲ್ಲಿ ಹಗಲುಹೊತ್ತಿನಲ್ಲಿಯೇ ಭಾರಿ ದರೋಡೆ ನಡೆದಿದ್ದು, ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ.

    ಮುಂಬೈನ ಎಂಎಚ್‍ಬಿ ಕಾಲೋನಿಯ ಜಯವಂತ್ ಸಾವಂತ್ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಈ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ನೋಡಿಕೊಂಡಿದ್ದ ಯುವಕರ ಗುಂಪೊಂದು ಸಂಚುಹೂಡಿ ಈ ಕೃತ್ಯ ಎಸಗಿದೆ.

    ಬೆಳಗ್ಗೆ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದ್ದಂತೆಯೇ ಇಬ್ಬರು ಮುಸುಕುಧಾರಿಗಳು ಬ್ಯಾಂಕ್‌ ಒಳಗೆ ನುಗ್ಗಿ ಮನ ಬಂದಂತೆ ಗುಂಡು ಹಾರಿಸಿದ್ದಾರೆ. ಈ ಗುಂಡಿಗೆ ಬ್ಯಾಂಕ್‌ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಇದಾದ ಮೇಲೆ ಬ್ಯಾಂಕ್‍ನಲ್ಲಿದ್ದ 2.5 ಲಕ್ಷ ರೂ. ದೋಚಿಕೊಂಡು ಅವರು ಪರಾರಿಯಾಗಿದ್ದಾರೆ.

    ಬಂದೂಕು ಹಿಡಿದುಕೊಂಡು ಬಂದಿದ್ದ ದರೋಡೆಕೋರರು ನಮ್ಮನ್ನು ಬೆದರಿಸಿದರು. ತಕ್ಷಣ ಗುಂಡು ಹಾರಿಸಿದ್ದಾರೆ. ಗುಂಡು ತಗುಲು ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ. ನಂತರ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ದರೋಡೆಕೋರರು ಸ್ಕಾರ್ಫ್ ಮತ್ತು ಕ್ಯಾಪ್‍ನಿಂದ ಮುಖವನ್ನು ಮುಚ್ಚಿಕೊಂಡಿದ್ದರು. ಇದರಿಂದಾಗಿ ಅವರ ಮುಖವನ್ನು ನಾವು ಗುರುತಿಸಲು ಸಾಧ್ಯವಾಗಿಲ್ಲ. ಇವರೆಲ್ಲಾ ಸುಮಾರು 20 ರಿಂದ 25 ವರ್ಷ ವಯಸ್ಸಿನವರಿರಬಹುದು. ಅವರು ದಹಿಸರ್ ರೈಲ್ವೆ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ.

    ಆರೋಪಿಗಳ ಬಂಧನಕ್ಕೆ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ‍ಪೊಲೀಸ್‌ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಉತ್ತರ ವಲಯದ ಹೆಚ್ಚುವರಿ ಸಿಪಿ ಪ್ರವಿಂದ್ ಪಡವಾಲ್ ಹೇಳಿದ್ದಾರೆ.

    ಭಗವದ್ಗೀತೆಗೆ ಮನಸೋತ ಮುಸ್ಲಿಂ ರಾಷ್ಟ್ರ: ಪಾಕಿಸ್ತಾನವಷ್ಟೇ ಅಲ್ಲ… ಅರಬ್‌ ದೇಶಗಳಲ್ಲಿ 15 ಕೋಟಿ ಪ್ರತಿ ಮಾರಾಟ!

    ದೇಶವನ್ನು ಸತ್ಯನಾಶ ಮಾಡಿದ್ದು, ವಿಭಜನೆಗೆ ಕಾರಣವಾಗಿದ್ದು ಗಾಂಧಿ ಎಂದ ಸಂತ ಕಾಲಿಚರಣ್‌ ಅರೆಸ್ಟ್‌

    ಇಟಲಿಗೆ ಹಾರಿದ ರಾಹುಲ್‌ ಗಾಂಧಿ: ಪ್ಲೀಸ್‌… ಪ್ಲೀಸ್‌… ಜನರಲ್ಲಿ ಕೈಮುಗಿದು ಹೀಗೆ ಬೇಡಿಕೊಂಡ್ರು ಕಾಂಗ್ರೆಸ್‌ ವಕ್ತಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts