More

    ಅಲ್ಲಿ ನಡೀತಿತ್ತು ಕೋಟ್ಯಂತರ ರೂ. ಜೂಜು: ಗೊತ್ತಿದ್ದೂ ಸುಮ್ಮನಿದ್ದ ಇನ್ಸ್‌ಪೆಕ್ಟರ್‌ಗೆ ಈಗೇನಾಯ್ತು ನೋಡಿ…

    ಬೆಂಗಳೂರು: ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಜೂಜು ನಡೆಯುತ್ತಿದ್ದುದು ಗೊತ್ತಿದ್ದೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದ ತಪ್ಪಿಗೆ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್ಸ್‌ಟೇಬಲ್ ತಲೆದಂಡವಾಗಿದೆ.

    ಮಾರತ್‌ಹಳ್ಳಿ ಪ್ರಿನ್ಸ್‌ಸಿಟಿ ರಸ್ತೆಯ ಬೃಹತ್ ಕಟ್ಟಡವೊಂದರ ಆರನೇ ಮಹಡಿಯಲ್ಲಿ ಈ ಜೂಜು ಅಡ್ಡೆ ನಡೆಯುತ್ತಿತ್ತು. ಇಲ್ಲಿಗೆ ಕರ್ನಾಟಕದ ವಿವಿಧ ಕಡೆಯಿಂದ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶದಿಂದಲೂ ಜೂಜುಕೋರರು ಪ್ರತಿದಿನ ಬಂದು ಇಸ್ಪೀಟು ಆಡುತ್ತಿದ್ದರು.

    ಪ್ರತಿದಿನ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿತ್ತು. ಇದರ ಸುಳಿವು ಗೊತ್ತಾಗುತ್ತಿದ್ದಂತೆಯೇ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ನಿನ್ನೆ ದಾಳಿ ನಡೆಸಿದ್ದರು. ಅಲ್ಲಿ ಸುಮಾರು 80 ಜನ ಜೂಜುಕೋರರು ಸಿಕ್ಕಿಬಿದ್ದಿದ್ದರು.

    ಇದನ್ನೂ ಓದಿ: ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್​ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು

    ಅವರು ಇಸ್ಪೀಟಾಟಕ್ಕೆ ಬಳಸುತ್ತಿದ್ದ ಸುಮಾರು 95 ಲಕ್ಷ ರೂ. ನಗದು ಕೂಡ ದೊರೆತಿತ್ತು. ಹಣ ಮಾತ್ರವಲ್ಲದೆ ದುಬಾರಿ ಬೆಲೆಯ ವಾಚುಗಳು, 87 ಗ್ರಾಂನಷ್ಟು ಚಿನ್ನದ ಆಭರಣಗಳು ಮುಂತಾದ ವಸ್ತುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು.

    ಇಷ್ಟು ದೊಡ್ಡ ಪ್ರಮಾಣದ ಜೂಜು ಕೇಂದ್ರ ಸ್ಥಳೀಯ ಪೊಲೀಸರ ಸಹಕಾರವಿಲ್ಲದೆ ನಡೆಯಲು ಸಾಧ್ಯವೇ ಇಲ್ಲ ಎಂಬುದು ಸಿಸಿಬಿ ಪೊಲೀಸರ ಶಂಕೆಯಾಗಿತ್ತು. ಈ ವಿಷಯವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಆಂತರಿಕ ವಿಚಾರಣೆ ನಡೆಸಲಾಯಿತು.

    ಸ್ಥಳೀಯ ಇನ್ಸ್‌ಪೆಕ್ಟರ್ ಅಶ್ವತ್ಥನಾರಾಯಣಸ್ವಾಮಿ, ಮುಖ್ಯಪೇದೆ ಜಯಕಿರಣ್ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟ ನಡೆಯಲು ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಅಮಾನತುಪಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

    ಕಡಿಮೆ ದರದಲ್ಲಿ ಚಿನ್ನ ಬೇಕಾ? ಕೇಂದ್ರ ಸರ್ಕಾರದಿಂದ ಶುರುವಾಗಿದೆ ಗೋಲ್ಡ್ ಬಾಂಡ್ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts