More

    10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್​ಪೆಕ್ಟರ್: ಹಿಂದಿನ ಇನ್ಸ್​ಪೆಕ್ಟರ್​ ಕತೆಯೂ ಇದೆ​

    ಬೆಂಗಳೂರು: ಜಮೀನು ತಕರಾರು ವಿಚಾರಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್​ಪೆಕ್ಟರ್​ ಒಬ್ಬರು ಲಂಚ ಸ್ವೀಕರಿಸುವ ವೇಳೆ ರೆಡ್​ಹ್ಯಾಂಡ್​ ಆಗಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಚಿಕ್ಕಜಾಲ ಇನ್ಸ್​ಪೆಕ್ಟರ್​ ರಾಘವೇಂದ್ರ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಎರಡು ಕಂತಿನಲ್ಲಿ ನಾಲ್ಕು, ನಾಲ್ಕು ಲಕ್ಷ ರೂಪಾಯಿ ಹಣವನ್ನು ಜಮೀನುದಾರ ನೀಡಿದ್ದ. ಇನ್ನುಳಿದ 2 ಲಕ್ಷ ರೂ. ಕೊಡುವ ಸಂದರ್ಭದಲ್ಲಿ ಇನ್ಸ್​ಪೆಕ್ಟರ್​ ರಾಘವೇಂದ್ರ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

    ಈ ಹಿಂದೆ ಇದೇ ಠಾಣೆಯ ಇನ್ಸ್​ಪೆಕ್ಟರ್​ ಯಶವಂತ್​ ಕೂಡ ಎಸಿಬಿ ಬಲೆಗೆ ಬಿದ್ದಿದ್ದರು. ಅವರಿಂದ ತೆರವಾಗಿದ್ದ ಜಾಗಕ್ಕೆ, ರಾಘವೇಂದ್ರರನ್ನು ಠಾಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈಗ ಅದೇ ಠಾಣೆಯ ಮತ್ತೊಬ್ಬ ಇನ್ಸ್​ಪೆಕ್ಟರ್​ ಮತ್ತೆ ಲಂಚ ಕೇಳಿ ಸಿಕ್ಕಿಬಿದ್ದಿದ್ದಾರೆ. ಸದ್ಯ ರಾಘವೇಂದ್ರರನ್ನು ವಶಕ್ಕೆ ಪಡೆಸಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ತಲೆಗೆ ಕೈಕೊಟ್ಟು ಥೇಟ್​ ರಂಗನಾಥನಂತೆ ವಿಶ್ರಾಂತಿ: ಊಸರವಳ್ಳಿಯ ಲಕ್ಷುರಿ ಲೈಫ್​ ಬಗ್ಗೆ ತಿಳಿದ್ರೆ ಅಚ್ಚರಿ ಖಂಡಿತ!

    ಒಂದೇ ಕುಟುಂಬದ ಐವರು ಸಾವು ಪ್ರಕರಣ: ಭಾನುವಾರ ನಡೆದ ಇಂಚಿಂಚು ಘಟನೆ ಬಿಚ್ಚಿಟ್ಟ ಕುಟುಂಬದ ಯಜಮಾನ!

    ಸೇನೆಗೆ ರಾಕೆಟ್​ಫೋರ್ಸ್!; ಭವಿಷ್ಯದ ಯುದ್ಧಕ್ಕೆ ಭಾರತ ಸಿದ್ಧತೆ, ಜನರಲ್ ಬಿಪಿನ್ ರಾವತ್ ಪ್ರತಿಪಾದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts