More

    ಇಲ್ಲಿ ಇನ್ಮುಂದೆ ಮಕ್ಕಳನ್ನು ಅಪ್ಪ- ಅಮ್ಮ ಹೊಡೆದ್ರೆ ಅಷ್ಟೇ ಕಥೆ… ನೇರ ಜೈಲಿಗೆ!

    ಸ್ಕಾಟ್​ಲ್ಯಾಂಡ್​: ಮಮ್ಮಿ… ಡ್ಯಾಡಿ ನೀವೇನಾದ್ರೂ ನನ್ನನ್ನು ಹೊಡೆದ್ರೆ ಅಷ್ಟೇ… ಜೈಲಿಗೆ ಅಟ್ಟುತ್ತೇನೆ…

    ಹೀಗೆಂದು ಇದಾಗಲೇ 57 ದೇಶಗಳ ಮಕ್ಕಳು ಹೇಳುತ್ತಿದ್ದಾರೆ ಎಂದರೆ ಅಚ್ಚರಿ ಆಗತ್ತೆ ಅಲ್ವಾ? ಅಚ್ಚರಿ ಎನಿಸಿದ್ರೂ ಇದು ನಿಜವೇ. ಇದಾಗಲೇ 57 ದೇಶಗಳಲ್ಲಿ ಈ ಕಾನೂನು ಜಾರಿಯಾಗಿದೆ.

    ಇದರ ಅರ್ಥ ಇಲ್ಲಿ ಅಪ್ಪ-ಅಮ್ಮ ಮಕ್ಕಳನ್ನು ಹೊಡೆಯುವಂತಿಲ್ಲ, ಅವರ ಮೇಲೆ ಕೈ ಮಾಡುವಂತೆಯೂ ಇಲ್ಲ… ಒಂದು ವೇಳೆ ಅವರೇನಾದ್ರೂ ಹಾಗೆ ಮಾಡಿದರೆ ಮಕ್ಕಳು ದೂರು ದಾಖಲು ಮಾಡಬಹುದು, ಹಾಗೇನಾದ್ರೂ ಮಕ್ಕಳು ದೂರು ದಾಖಲಿಸಿದರೆ ಪಾಲಕರಿಗೆ ಶಿಕ್ಷೆ ವಿಧಿಸಲಾಗುತ್ತದೆ.

    ಅಂಥದ್ದೇ ಒಂದು ಕಾನೂನು ಸ್ಕಾಟ್​ಲ್ಯಾಂಡ್​ನಲ್ಲಿ ಬಂದಿದ್ದು, ಇಂಥ ಕಾನೂನು ಜಾರಿಗೆ ತಂದಿರುವ 58ನೇ ದೇಶವಾಗಿದೆ. ಹೆತ್ತವರು ಮಕ್ಕಳ ಮೇಲೆ ಕೈ ಮಾಡುವುದನ್ನು ನಿಷೇಧಿಸಿ ಇಲ್ಲಿ ಆದೇಶ ಹೊರಡಿಸಲಾಗಿದೆ. ಇಂಥದ್ದೊಂದು ಕಾನೂನು ಜಾರಿಗೆ ತಂದಿರುವ ಯುನೈಟೆಡ್​ ಕಿಂಗ್​ಡಮ್​ನ ಮೊದಲ ದೇಶ ಎಂದು ಇದೀಗ ಎನಿಸಿಕೊಂಡಿದೆ.

    ಇದನ್ನೂ ಓದಿ: ಮಕ್ಕಳು ನೋಡಿಕೊಳ್ಳದಿದ್ರೆ ಪಿತ್ರಾರ್ಜಿತ ಆಸ್ತಿ ಮಾರಬಹುದೆ?

    ಇನ್ನುಮುಂದೆ ಯಾವುದೇ ವಿಧದ ದೈಹಿಕ ದಂಡನೆಯನ್ನು ಮಕ್ಕಳು ಅನುಭವಿಸಬಾರದು. ತನ್ಮೂಲಕ ಮಕ್ಕಳ ಹಕ್ಕುಗಳು ಸಂಪೂರ್ಣವಾಗಿ ಗೌರವಿಸಲ್ಪಡಬೇಕು ಎಂದು ಸ್ಕಾಟ್​ಲ್ಯಾಂಡ್​ ಮಕ್ಕಳ ಮೇಲಿನ ಕ್ರೌರ್ಯ ತಡೆಯ ರಾಷ್ಟ್ರೀಯ ಮಂಡಳಿ ವಕ್ತಾರ ಜೊಆನ್ ಬ್ಯಾರೆಟ್ ಹೇಳಿದ್ದಾರೆ.

    ಅಷ್ಟಕ್ಕೂ ಭಾರತದಲ್ಲಿ ಇಂಥದ್ದೊಂದು ಕಾನೂನು ಸದ್ಯ ಜಾರಿಗೆ ಬಂದಿಲ್ಲ ಎನ್ನಿ. ಆದ್ದರಿಂದ ಪಾಲಕರು ಸದ್ಯದ ಮಟ್ಟಿಗೆ ಬಚಾವ್​. ಆದರೆ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಬೈಯುವಂತಿಲ್ಲ, ಹೊಡೆಯುವಂತಿಲ್ಲ ಎಂದೆಲ್ಲಾ ನಿಯಮಗಳು ಆಗಾಗ್ಗೆ ಜಾರಿಯಾಗುತ್ತಲೇ ಇರುತ್ತದೆ.
    ನಿಯಮ ಜಾರಿ ಆಗದಿದ್ದರೂ, ಹಲವು ಪಾಲಕರು ನೇರವಾಗಿ ಶಾಲೆಗೆ ಹೋಗಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವುದು ನಡೆದೇ ಇದೆ.

    ಶಿಕ್ಷಕರು ಕೊಡುವ ಶಿಕ್ಷೆಯಿಂದಲೇ ಅದೆಷ್ಟೋ ಮಕ್ಕಳು ಉದ್ಧಾರವಾಗಿರುವ ಉದಾಹರಣೆಗಳಿವೆ. ಅತ್ಯುನ್ನತ ಹುದ್ದೆಯನ್ನೇರಿ ಹೋದ ಅದೆಷ್ಟೋ ಮಂದಿ ಶಿಕ್ಷೆಯಿಂದಲೇ ತಾವು ಇಂಥ ಉನ್ನತ ಹುದ್ದೆ ಏರಲು, ಮಹಾ ಸಾಧನೆ ಮಾಡಲು ಸಾಧ್ಯವಾಯಿತು ಎಂದದ್ದಿದೆ. ಆದರೆ ಇಂದಿನ ಸ್ಥಿತಿಯಲ್ಲಂತೂ ಶಿಕ್ಷಕರ ಪಾಡು ಕೇಳುವುದೇ ಬೇಡ. ಆದರೆ ಸದ್ಯ ಇಲ್ಲಿ ಪಾಲಕರು ಬಚಾವಾಗಿದ್ದಾರೆ ಎನ್ನುವುದಷ್ಟೇ ದಿಟ.

    1979ರಲ್ಲಿ ಮೊದಲ ಬಾರಿಗೆ ಸ್ವೀಡನ್ ಮಕ್ಕಳಿಗೆ ದೈಹಿಕ ದಂಡನೆ ನೀಡುವುದನ್ನು ನಿಷೇಧಿಸಿತ್ತು.ಯುನೈಟೆಡ್​ ಕಿಂಗ್​ಡಮ್​ನ ವೇಲ್ಸ್ ದೇಶವೂ ಈ ನಿಯಮ ಜಾರಿಗೆ ತರಲು ತಯಾರಿಯಲ್ಲಿದ್ದು, 2022ರಲ್ಲಿ ಜಾರಿಗೊಳಿಸುವ ನಿರೀಕ್ಷೆಯಲ್ಲಿದೆ.

    ಸದಾ ನಗಿಸುವ ಹಿಂದಿದೆ ಡ್ರಗ್ಸ್​ ಮುಖ! ದಂಪತಿ ಒಪ್ಪಿಕೊಂಡರು ಸತ್ಯ…

    ‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’

    ಜಾನ್​​ಸನ್​ ಪೌಡರ್​ನಿಂದ ಕ್ಯಾನ್ಸರ್​: ₹890 ಕೋಟಿ ಪರಿಹಾರಕ್ಕೆ ‘ಸುಪ್ರೀಂ’ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts