More

    VIDEO: ಭಾವಿ ಅಮ್ಮಂದಿರಿಗೆ ಅದ್ಧೂರಿ ಸೀಮಂತ; ಸಿಂಗಾರಗೊಂಡು ಮಿಂಚಿದ ಬೆಕ್ಕುಗಳು- ವಿಡಿಯೋ ವೈರಲ್‌

    ಕೊಯಮತ್ತೂರು (ತಮಿಳುನಾಡು): ಪ್ರತಿಯೊಬ್ಬ ಸ್ತ್ರೀಗೂ ಅಮ್ಮನಾಗುವ ಅನುಭವವೇ ರೋಮಾಂಚನ. ಮೊದಲ ಬಾರಿಗೆ ಗರ್ಭ ಧರಿಸಿದಾಗ ತುಂಬು ಗರ್ಭಿಣಿಗೆ ಸೀಮಂತ ಮಾಡುವ ಕಾರ್ಯ ಬಹುತೇಕ ಎಲ್ಲೆಡೆಯೂ ನಡೆಯುತ್ತದೆ. ಚೊಚ್ಚಲ ಗರ್ಭಿಣಿಗೆ ಬೇಕಾದ ಆಹಾರ ಪದಾರ್ಥ, ತಿನಿಸು, ಇಷ್ಟದ ವಸ್ತು ಎಲ್ಲವನ್ನೂ ಇಟ್ಟು ಆಕೆಗೆ ಶುಭಕರವಾದ ಹೆರಿಗೆಗೆ ಮುತ್ತೈದೆಯರು ಹಾರೈಸುತ್ತಾರೆ.

    ಈ ಮಾತು ಇಲ್ಯಾಕೆ ಅಂತೀರಾ? ಇವೆಲ್ಲಾ ಮನುಷ್ಯರಲ್ಲಿ ಸಾಮಾನ್ಯ. ಆದರೆ ಇಲ್ಲೊಂದು ಕುಟುಂಬ ತಮ್ಮ ಮನೆಯ ಮುದ್ದಿನ ಎರಡು ಬೆಕ್ಕುಗಳಿಗೆ ಅದ್ಧೂರಿಯ ಸೀಮಂತ ಮಾಡಿದೆ. ಮುದ್ದಿನಿಂದ ಸಾಕಿದ ಬೆಕ್ಕಿನ ಚೊಚ್ಚಲ ಹೆರಿಗೆ ಸುಸೂತ್ರವಾಗಿ ನೆರವೇರಲಿ ಎಂದು ಹಾರೈಸಿ ಬೆಕ್ಕುಗಳಿಗೆ ಸೀಮಂತ ಮಾಡಿದ್ದಾರೆ. ಕೊಯಮತ್ತೂರಿನ ಮನೆಯೊಂದರಲ್ಲಿ ನಡೆದ ಈ ಸೀಮಂತ ಕಾರ್ಯದ ಫೋಟೋ ಭಾರಿ ವೈರಲ್‌ ಆಗಿದೆ.

    ಗರ್ಭವತಿಯರ ಸೀಮಂತದ ವೇಳೆ ಮಾಡುವಂತೆ ವಿಶೇಷ ಆಹಾರ, ಸಿಹಿತಿಂಡಿಗಳು ಮತ್ತು ಇತರ ವಸ್ತುಗಳೊಂದಿಗೆ ಹೊಸ ಬಟ್ಟೆಗಳನ್ನು ಬೆಕ್ಕಿಗೆ ಹಾಕಿದ್ದಾರೆ. ಈ ವೇಷಭೂಷಣ ಬೆಕ್ಕಿಗೆ ಇರುಸುಮುರುಸಾದರೂ ಮನೆಯವರಂತೂ ಬಹಳ ಖುಷಿ ಪಟ್ಟಿದ್ದಾರೆ. ‘ಈ ಬೆಕ್ಕುಗಳು ನಮ್ಮ ಮನೆಯ ಸದಸ್ಯರು. ಎರಡೂ ಬೆಕ್ಕುಗಳು ಗರ್ಭಿಣಿಯಾಗಿದ್ದು, ಇದು ಅವುಗಳ ಚೊಚ್ಚಲ ಹೆರಿಗೆ. ಅದಕ್ಕಾಗಿ ಸೀಮಂತ ಮಾಡುತ್ತಿದ್ದೇವೆ’ ಎಂದಿದ್ದಾರೆ ಕುಟುಂಬಸ್ಥರು. ಪಶುವೈದ್ಯರು ಕೂಡ ಈ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿರುವುದು ವಿಶೇಷ.

    ಬೆಕ್ಕುಗಳ ಸೀಮಂತ ಕಾರ್ಯಕ್ರಮದ ವಿಡಿಯೋ ಇಲ್ಲಿದೆ ನೋಡಿ (ಕೃಪೆ ಎಎನ್‌ಐ)

    ವೈದ್ಯಯಾಗುವ ಕನಸು ಕಂಡೆ… ಈಗ ಯಾರಿಗೂ ಮುಖ ತೋರಿಸಲಾರೆ ಎಂದು ನೇಣಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ

    ಪ್ರಾಣಕ್ಕೆ ಕುತ್ತಾಯ್ತು ಪರೋಪಕಾರ! ಆಡಿನ ಮರಿ ರಕ್ಷಿಸಲು ಹೋಗಿ ಜೀವ ಕಳೆದುಕೊಂಡ ಮಂಗಳೂರು ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts