More

    ಅಲೋಪಥಿ ವೈದ್ಯರಿಗೆ ಬೆಣ್ಣೆ, ಆಯುಷ್‌ನವರಿಗೆ ಸುಣ್ಣ ಆರೋಪ: ನಾಳೆಯಿಂದ ಪ್ರತಿಭಟನೆ- ವಾರದ ಗಡುವು

    ಶಿವಮೊಗ್ಗ: ಕೋವಿಡ್ ಸಂದರ್ಭದಲ್ಲಿ ನೀಡುವ ವಿಶೇಷ ಭತ್ಯೆಯನ್ನು ಅಲೋಪಥಿ ವೈದ್ಯರಿಗೆ ಮಾತ್ರ ನೀಡಲಾಗುತ್ತಿದ್ದು, ಆಯುಷ್‌ ವೈದ್ಯರಿಗೆ ನೀಡುತ್ತಿಲ್ಲ ಎಂದು ಗಂಭೀರ ಆರೋಪವನ್ನು ಆಯುಷ್‌ ವೈದ್ಯರು ಮಾಡಿದ್ದಾರೆ.

    ಈ ಹಿನ್ನೆಲೆಯಲ್ಲಿ ವಿಶೇಷ ಭತ್ಯೆಯನ್ನು ತಮಗೂ ನೀಡುವಂತೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ಮಾಡಲು ಅವರು ನಿರ್ಧರಿಸಿದ್ದಾರೆ. ಸೋಮವಾರದಿಂದ (ಮೇ 31) ಈ ಪ್ರತಿಭಟನೆ ನಡೆಸಲು ಆಯುಷ್‌ ವೈದ್ಯರು ಮುಂದಾಗಿದ್ದಾರೆ.

    ಜೂನ್ 1ರಿಂದ 6ರವರೆಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ನಾವೂ ಕೋವಿಡ್ ಕೆಲಸ ಮಾಡುತ್ತಿದ್ದೇವೆ ಆದರೆ ಸರ್ಕಾರ ನಮಗೆ ಮಾತ್ರ ವಿಶೇಷ ಭತ್ಯೆ ನೀಡುತ್ತಿಲ್ಲ. ಅದಕ್ಕಾಗಿ ಈ ನಿರ್ಧಾರ ಎಂದು ವೈದ್ಯರು ಹೇಳಿದ್ದಾರೆ.

    ಕೋವಿಡ್ ಆಸ್ಪತ್ರೆ, ಕೊವಿಡ್ ಕೇರ್ ಸೆಂಟರ್ ಸೇರಿದಂತೆ ಎಲ್ಲೆಡೆಯೂ ಆಯುಷ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಆಯುಷ್ ವೈದ್ಯರಿಗೂ ವಿಶೇಷ ಭತ್ಯೆ ನೀಡುವಂತೆ ಒತ್ತಾಯಿಸಿ ನಾಳಿನಿಂದ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು. ಒಂದು ವೇಳೆ ಜೂನ್ 6ರ ಒಳಗೆ ವಿಶೇಷ ಭತ್ಯೆ ನೀಡದಿದ್ದಲ್ಲಿ ಜೂನ್ 7ರಿಂದ ಹೋರಾಟದ ಹಾದಿ ಹಿಡಿಯಲಿದ್ದೇವೆ ಎಂದಿದ್ದಾರೆ ಆಯುಷ್ ವೈದ್ಯರು.

    ‘ಆಮೀರ್‌ಖಾನ್‌ ಎದುರು ಖ್ಯಾತ ವೈದ್ಯ ಬಿಚ್ಚಿಟ್ಟಿದ್ದಾರೆ ನೋಡಿ ಮೆಡಿಕಲ್‌ ಮಾಫಿಯಾ ರಹಸ್ಯ- ಈಗೇನ್‌ ಮಾಡ್ತೀರಾ?’

    ಕರೊನಾದಿಂದ ತಬ್ಬಲಿಯಾದ ಮಕ್ಕಳ ನೆರವಿಗೆ ಧಾವಿಸಿದ ಸರ್ಕಾರ: ವಿಮಾ, ಪೆನ್ಷನ್‌ ಜತೆಗೆ ಶಿಕ್ಷಣ ವ್ಯವಸ್ಥೆ

    ‘ಮೂರ್ಖ ವಿಜ್ಞಾನ’ ವಿವಾದದಿಂದ ಕ್ರೈಸ್ತ ಧರ್ಮದ ಪ್ರಚಾರದವರೆಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts