More

    ಬಹು ಕುತೂಹಲ ಕೆರಳಿಸಿದ್ದ ಬ್ರಾಹ್ಮಣ ಮಹಾಸಭಾ ಚುನಾವಣೆ: ಅಶೋಕ ಹಾರನಹಳ್ಳಿ ಜಯಭೇರಿ

    ಬೆಂಗಳೂರು: ರಾಜ್ಯಾದ್ಯಂತ ಗಮನ ಸೆಳೆದಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ್ ಹಾರನಹಳ್ಳಿ 4424 ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ತೀವ್ರ ಪೈಪೋಟಿ ನೀಡಿದ ಎಸ್. ರಘುನಾಥ್ 3969 ಮತ ಪಡೆದು 2ನೇ ಸ್ಥಾನ ಪಡೆದರೆ ಆರ್. ಲಕ್ಷ್ಮೀಕಾಂತ್ 2239 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಶಂಕರಪುರದಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಭಾನುವಾರ 2ನೇ ಹಂತದ ಮತದಾನ ನಡೆದ ಬಳಿಕ ಮತ ಎಣಿಕೆ ನಡೆಸಿ ರಾತ್ರಿ 11ಕ್ಕೆ ಫಲಿತಾಂಶ ಪ್ರಕಟಿಸಲಾಯಿತು.

    ಶ್ರೀ ಗುರು ರಾಘವೇಂದ್ರ ಸಹಕಾರಿ ಮತ್ತು ವಸಿಷ್ಠ ಬ್ಯಾಂಕ್‌ಗಳ ಅವ್ಯವಹಾರ ಪ್ರಕರಣಗಳು ಈ ಬಾರಿ ಚುನಾವಣೆ ಪ್ರಚಾರದಲ್ಲಿ ಹೆಚ್ಚು ಸದ್ದು ಮಾಡಿದ್ದರೂ ಚುನಾವಣೆಯಲ್ಲಿ ಅಷ್ಟೇನೂ ಪತಿಣಾಮ ಬೀರಲಿಲ್ಲ. ಸ್ಪರ್ಧಿಗಳ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ನಾನಾ ತಂತ್ರಗಳ ಮೊರೆ ಹೋಗಿದ್ದರು. ಆರೋಪ ಮತ್ತು ಪ್ರತ್ಯಾರೋಪಗಳ ಸುರಿಮಳೆಗೂ ಈ ಚುನಾವಣೆ ಸಾಕ್ಷಿಯಾಗಿತ್ತು.

    ಈ ಬಾರಿ ಚುನಾವಣೆಯು 2 ಹಂತದಲ್ಲಿ ನಡೆದಿತ್ತು. ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮೈಸೂರು 1221, ಶಿವಮೊಗ್ಗ 1083, ಹಾಸನ 615 ಹುಬ್ಬಳ್ಳಿ 355 ಹಾಗೂ ರಾಯಚೂರು 375 ಸೇರಿ 3649 ಮತಗಳು ಚಲಾವಣೆಯಾಗಿತ್ತು. 2ನೇ ಹಂತದಲ್ಲಿ ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಹಾಗೂ ತುಮಕೂರಿನ ಜಿಲ್ಲೆಗಳಿಂದ 7056 ಮತಗಳು ಚಲಾವಣೆಯಾಯಿತು.

    VIDEO: ‘ಈ ಕ್ಷಣಕ್ಕಾಗಿ 36 ವರ್ಷ ಕಾದೆ… ಅಂದು ಕ್ಯಾಮೆರಾ ವರ್ಕ್‌ ಆಗದೇ ಅತ್ತಿದ್ದೆ, ಇಂದು ಸಂತೋಷ ಹೇಳಲಾಗ್ತಿಲ್ಲ’ ಎಂದ ಸುದೀಪ್‌…

    ಓಟದ ರಾಣಿ ಪಿ.ಟಿ. ಉಷಾ ವಿರುದ್ಧ ಕೇರಳದಲ್ಲಿ ದಾಖಲಾಯ್ತು ವಂಚನೆ ಕೇಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts