More

    ನೈತಿಕ ಮೌಲ್ಯ ಬಿತ್ತುವ ಪುಸ್ತಕ ಓದಿ

    ಸಿಂಧನೂರು: ದಾಸ ಸಾಹಿತ್ಯ ಅಧ್ಯಯನದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಮಕ್ಕಳಿಗೆ ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಬಿತ್ತುವ ದಾಸ ಸಾಹಿತ್ಯದ ಅಧ್ಯಯನ ಮಾಡುವಂತೆ ಪ್ರೋತ್ಸಾಹ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಡಿ.ಮುರಳೀಧರ ಹೇಳಿದರು.

    ದಾಸ ಸಾಹಿತ್ಯ ಅಧ್ಯಯನದಿಂದ ಮಾನಸಿಕ ನೆಮ್ಮದಿ

    ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ದಾಸ ಸಾಹಿತ್ಯದ ಸ್ತ್ರೀರತ್ನ ವೈಭವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಮಕ್ಕಳು ಹೆಚ್ಚು ವಾಲುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ತಂದೆ-ತಾಯಿಗಳು ಮಕ್ಕಳ ಸರ್ವಾಂಗೀಣ ವಿಕಾಸದ ಕಡೆಗೆ ಗಮನ ಹರಿಸಬೇಕು. ಇತ್ತೀಚಿಗೆ ಮಕ್ಕಳು ಮೊಬೈಲ್, ಟಿವಿ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅದರ ಬದಲಾಗಿ ನೈತಿಕ ಮೌಲ್ಯಗಳನ್ನು ಬಿತ್ತುವ ಚಿಂತನೆಗಳ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಬೇಕು ಎಂದರು.

    ಇದನ್ನೂ ಓದಿ: ತೇವಾಂಶ ಕೊರತೆಯಿಂದ ಭತ್ತಕ್ಕೆ ರೋಗ

    ನಿವೃತ್ತ ಶಿಕ್ಷಕಿ ವನಮಾಲಬಾಯಿ ಆಳ್ದಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ತ್ರೀಯರಿಗೆ ಮೌಲ್ಯಗಳನ್ನು ತಿಳಿಯಪಡಿಸುವ ನಾಲ್ಕು ದಿನಗಳ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ. ಇದರ ರೂವಾರಿಯಾಗಿರುವ ರಾಘವೇಂದ್ರರಾವ್ ಕುಲಕರ್ಣಿ ಅವರ ಶ್ರಮ ಸಾರ್ಥಕವಾಗಿದೆ. ಪ್ರತಿನಿತ್ಯ ಬಿಡುವಿನ ವೇಳೆಯಲ್ಲಿ ಎಲ್ಲರೂ ದಾಸ ಸಾಹಿತ್ಯದಲ್ಲಿ ಅಡಕವಾಗಿರುವ ವಿಚಾರಗಳನ್ನು ಓದಿ ತಿಳಿದುಕೊಳ್ಳಬೇಕು ಎಂದರು.
    ನಿವೃತ್ತ ಉಪನ್ಯಾಸಕಿ ಡಾ.ರಾಜಶ್ರೀ ಕಲ್ಲೂರಕರ್, ಡಾ.ಜಯಲಕ್ಷ್ಮೀ ಉಪನ್ಯಾಸ ನೀಡಿದರು. ಬ್ರಾಹ್ಮಣ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ.ಮುರಳೀಧರ, ತಾಲೂಕು ಅಧ್ಯಕ್ಷ ಕೆ.ಗೋವಿಂದರಾವ್, ಕಾರ್ಯದರ್ಶಿ ಆನಂದ ಗೌರಕರ್, ಮುಖಂಡರಾದ ವೆಂಕಣ್ಣ ಜೋಶಿ, ಎಂ.ಕೆ.ಗೌರಕರ್, ಎಕೆಬಿಎಂಎಸ್ ರಾಜ್ಯ ಸಮಿತಿ ಸದಸ್ಯರಾದ ನರಸಿಂಹಾಚಾರ್ ಪುರೋಹಿತ್, ಪ್ರಹ್ಲಾದಗುಡಿ, ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts