More

  ಯಾಗ ಯಜ್ಞಗಳಿಂದ ಅಸಂಖ್ಯ ಫಲ ಪ್ರಾಪ್ತಿ

  ಶಿವಮೊಗ್ಗ: ಧರ್ಮದ ಹಾದಿಯಲ್ಲಿ ನಡೆಯುವಂತೆ ವೇದದಲ್ಲಿ ಹೇಳಿರುವುದು ನಮ್ಮನ್ನು ಕಟ್ಟಿಹಾಕಲಲ್ಲ. ಬದಲಿಗೆ ನಮಗೆ ಜೀವನದಲ್ಲಿ ಸುಖ-ಶಾಂತಿ ನೀಡುವ ಸಲುವಾಗಿದೆ. ಇನ್ಮುಂದೆ ಏನಾಗಬಹುದೆಂಬ ಸೂಚನೆ ಈಗಾಗಲೇ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ದೂರದೃಷ್ಟಿಯ ಯೋಚನೆ ಇಟ್ಟುಕೊಂಡು ಯಜ್ಞ ಯಾಗಾದಿಗಳನ್ನು ಸಾಂಪ್ರದಾಯಿಕವಾಗಿ ನಿರ್ವಹಿಸಬೇಕಿದೆ ಎಂದು ಕೃಷ್ಣರಾಜನಗರದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಹೇಳಿದರು.

  ನಗರದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಶಾಕಲ ಋಕ್ಸಂಹಿತಾ ಯಾಗದ ಐದನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಈಗಿನ ಯುವಕರಿಗೆ ವೇದ ಪಾರಾಯಣದ ಮಹತ್ವ ಹಾಗೂ ಇಂತಹ ಯಾಗಗಳ ಆಚರಣೆ ಬಗ್ಗೆ ತಿಳಿಸಿ ಆಚರಿಸಿದರೆ ಇದರ ಅಸಂಖ್ಯ ಲ ಸಿದ್ಧಿಸಲಿದೆ ಎಂದರು.
  ನಾವು ಅಪೇಕ್ಷೆ ಪಟ್ಟಂತಹ ಒಳ್ಳೆಯ ಲವನ್ನು ಪಡೆಯಲು ಯಾಗಾದಿಗಳ ಬಗ್ಗೆ ಯುವಕರಿಗೆ ಪೂರ್ಣ ಅರಿವು ಮೂಡಿಸಬೇಕು. ಯಾಗಗಳನ್ನು ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠ ವೇದ ಪಾರಾಯಣವನ್ನಾದರೂ ಮಾಡಬೇಕಿದೆ. ನಮ್ಮ ದುಃಖ ದುಮ್ಮಾನಗಳನ್ನು ಕಳೆದು ಸುಖ-ಶಾಂತಿ ನೆಲೆಸುವಂತಾಗಬೇಕು. ನಿಷ್ಠೆಯಿಂದ ವೇದ ಪಾರಾಯಣವನ್ನು ಮಾಡಿದ್ದಲ್ಲಿ ಕಷ್ಟ ದುಃಖಗಳನ್ನು ಎದುರಿಸಲು ಮಾನಸಿಕ ಸ್ಥೈರ್ಯ ಬರಲಿದೆ ಎಂದು ಹೇಳಿದರು.
  ಸಮಾಜದಲ್ಲಿ ವೇದಗಳನ್ನು ಉಳಿಸಿ ಬೆಳೆಸಬೇಕೆಂಬ ಆಸ್ತಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದು ಸಮಾಧಾನಕರ ಅಂಶವಾದರೆ, ಈ ಗುಂಪಿನಲ್ಲಿ ಕೇವಲ ಹಿರಿಯರು ಮಾತ್ರ ಇದ್ದಾರೆ ಎಂಬುದು ಅಸಮಾಧಾನದ ಸಂಗತಿ. ಯುವ ಸಮುದಾಯವು ನಮ್ಮ ಸಂಪ್ರದಾಯ, ಸಂಸ್ಕೃತಿ ಉಳಿಸಲು ಮುಂದೆ ಬರಬೇಕೆಂದು ತಿಳಿಸಿದರು.
  ಸಮಾಜದ ಅನೇಕ ವಿದ್ವಾಂಸರು ವೇದಗಳನ್ನು ಅನಾಧಿಕಾಲದಿಂದ ಅಧ್ಯಯನ ಹಾಗೂ ಅನುಷ್ಠಾನದಿಂದ ಕಷ್ಟಪಟ್ಟು ಮುಂದುವರಿಸಿಕೊಂಡು ಬಂದಿದ್ದಾರೆ. ಎಷ್ಟು ವರ್ಷ ಇಂತಹ ಸ್ಥಿತಿಯಲ್ಲಿ ಮುಂದುವರಿಸಬಹುದು ಎಂದು ಯೋಚಿಸಬೇಕಿದೆ. ಬದಲಾಗಿ ಮಕ್ಕಳು ಹಾಗೂ ಯುವಕರಲ್ಲಿ ವೇದದ ಬೆಳವಣಿಗೆ ಆಗಬೇಕು. ಜತೆಗೆ ವೇದ ಪಾರಾಯಣದಂತಹ ಕಾರ್ಯಕ್ರಮಗಳಲ್ಲಿ ಇಡೀ ಕುಟುಂಬವೇ ಪಾಲ್ಗೊಳ್ಳಬೇಕು. ಆದರೆ ಅದು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಏನು ಮಾಡಬೇಕೆಂದು ಚಿಂತಿಸುವ ಅಗತ್ಯವಿದೆ ಎಂದರು.
  ಅಧರ್ಮ ದುಃಖಕ್ಕೆ ಕಾರಣವಾಗುತ್ತದೆ. ಆದರೆ ಬದಲಾದ ಮನಸ್ಥಿತಿಯಲ್ಲಿ ವೇದಗಳ ಬಗ್ಗೆ ಅರಿಯದೆ ಕೇವಲ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ವೇದವನ್ನು ಹೇಗಾದರೂ ಮುಂದುವರಿಸಿಕೊಂಡು ಹೋದರಾಯಿತು. ಕಷ್ಟ ಬಂದಾಗ ದುಡ್ಡು ಖರ್ಚು ಮಾಡಿ ಪರಿಹಾರ ಪಡೆದರಾಯಿತು ಎಂಬ ಮನೋಭಾವ ಸಲ್ಲದು ಎಂದು ಅಭಿಪ್ರಾಯಪಟ್ಟರು. ವೇದಾಧ್ಯಾಯಿಗಳಿಗೆ ಪುರಸ್ಕಾರ ಹಾಗೂ ಯಾಗಕ್ಕೆ ನೆರವಾದವರಿಗೆ ಮಂತ್ರಾಕ್ಷತೆ ಲ ನೀಡಿ ಆಶೀರ್ವದಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts