More

    ಕಷ್ಟದಲ್ಲಿರುವವರಿಗೆ ಸಹಾಯ ಶ್ರೇಷ್ಠ ಧರ್ಮ

    ಶೃಂಗೇರಿ: ಜೀವನ ಸಾರ್ಥಕ್ಯವಾಗಬೇಕಾದರೆ ಸಮುದಾಯದಲ್ಲಿ ನಿಸ್ವಾರ್ಥ ಮನೋಭಾವದಿಂದ ಅವಿರತವಾಗಿ ಶ್ರಮಿಸಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಶ್ರೇಷ್ಠ ಧರ್ಮ ಎಂದು ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಜಿ.ಎಂ.ಸತೀಶ್ ಹೇಳಿದರು.

    ಅವರು ರಾಜನಗರದ ವಿದ್ಯಾಭಾರತೀ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೃತ ಚಾಲಕ ಕುಮಾರ್ ಅವರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿ ಮಾತನಾಡಿದರು.
    ಸಂಸ್ಥೆಯಲ್ಲಿ ಸೇವೆ ಎಂಬುದು ಪ್ರಮುಖ ಅಂಶವಾಗಿರಬೇಕು. ಬ್ರಾಹ್ಮಣ ಮಹಾಸಭಾವು ಈ ಧ್ಯೇಯದೊಂದಿಗೆ ನಿರಂತರವಾಗಿ ಸಮುದಾಯದವರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಮೃತ ಕುಮಾರ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 50 ಸಾವಿರ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಅರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು ಎಂದರು.
    ಕಾರ್ಯಕ್ರಮದಲ್ಲಿ ಮಹಾಸಭಾದ ಉಪಾಧ್ಯಕ್ಷ ಮಹಾಬಲಭೀಡೆ, ಕಾರ್ಯದರ್ಶಿ ಬಿ.ಎಲ್.ರವಿಕುಮಾರ್, ಸಹಕಾರ್ಯದರ್ಶಿ ಎಂ.ಎಲ್.ಪ್ರಕಾಶ್, ಮುರಳೀಕೃಷ್ಣ, ಕೋಶಾಧ್ಯಕ್ಷ ಸುಧೀಂದ್ರ ಬೆಟ್ಟಗದ್ದೆ, ಮಹಿಳಾ ಘಟಕದ ಅಧ್ಯಕ್ಷೆ ಕವನಾ, ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಸಂಚಾಲಕಿ ನಾಗಮಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts