More

    ಸಾಂಸ್ಕೃತಿಕ ಕಾರ್ಯಕ್ರಮದಿಂದ ಸಂವಹನ ಸಾಧ್ಯ

    ಚಿಕ್ಕಮಗಳೂರು: ಸಮಾಜದಲ್ಲಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಸಮಾನ ಆಸಕ್ತರಿಗೆ ರಂಜನೆ ಜತೆಗೆ ಪರಸ್ಪರ ಭೇಟಿಗೆ ಅವಕಾಶವಾಗುತ್ತದೆ ಎಂದು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ನಿರ್ದೇಶಕಿ ಹಾಗೂ ಸಂಜೀವಿನಿ ವಿದ್ಯಾಸಂಸ್ಥೆ ಅಧ್ಯಕ್ಷೆ ಎಸ್.ಶಾಂತಕುಮಾರಿ ತಿಳಿಸಿದರು.
    ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ನಗರದ ಬಸವನಹಳ್ಳಿಯ ಬ್ರಹ್ಮಸಮುದ್ರ ಶ್ರೀ ರಂಗಣ್ಣನ ಕಲ್ಯಾಣ ಮಂಟಪದಲ್ಲಿ ಡಾ. ಸಿ.ಅಶ್ವತ್ಥ್ ಜನ್ಮದಿನಾಚರಣೆ ಅಂಗವಾಗಿ ಸಿ.ಅಶ್ವತ್ಥ್ ಸ್ವರ ಸಂಯೋಜಿಸಿದ ಚಿತ್ರಗೀತೆಗಳ ‘ಇದು ಎಂಥಾ ಲೋಕವಯ್ಯ’ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರತಿ ತಿಂಗಳು ಕಲಾಭಿಮಾನಿಗಳ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮ ರೂಪಿಸುತ್ತಾ ಇದೀಗ 96ನೇ ಗಾನಯಾನ ಸರಣಿಯನ್ನು ನಡೆಸುತ್ತಿರುವ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಸಾಧನೆ ಅಮೋಘವಾಗಿದೆ. ಮೇನಲ್ಲಿ 100ನೇ ಸರಣಿ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಸಂಘಟಕರು ತಿಳಿಸಿದ್ದು ಹೆಮ್ಮೆಯ ಸಂಗತಿ ಎಂದರು.
    ನಿವೃತ್ತ ಪ್ರಾಚಾರ್ಯ, ಲಯನ್ಸ್ ಸಂಸ್ಥೆಯ ಎಸ್.ಆರ್.ವೈದ್ಯ ಮಾತನಾಡಿ, ಸಂಗೀತಕ್ಕೆ ಸಾಹಿತ್ಯವಿರಬೇಕು. ಸಾಹಿತ್ಯದ ಜತೆಗೆ ಗಾಯನ ಇರಬೇಕು ಎನ್ನುವುದು ಅಶ್ವತ್ಥ್ ಅವರ ಸಿದ್ಧಾಂತವಾಗಿತ್ತು. ಸಿ.ಅಶ್ವತ್ಥ್ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಮೇಲೆ ಭಾವವಿಲ್ಲದ ಸಂಗೀತ ಸಂಗೀತವೇ ಅಲ್ಲ ಎಂದಿದ್ದರು. ಹಾಗಾಗಿಯೇ ಅವರು ಭಾವಪ್ರಧಾನವಾದ ಗೀತೆಗಳನ್ನು ಕನ್ನಡ ಸಂಗೀತ ಲೋಕಕ್ಕೆ ಪರಿಚಯಿಸಿದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts