More

    ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?

    ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ? ಮೇಡಂ, ನನಗಿನ್ನೂ 23 ವರ್ಷ. ನಾನು ಪ್ರೀತಿಸಿದ ಹುಡುಗ ಹಲವು ವರ್ಷದಿಂದ ನನ್ನ ದೇಹ ಸಂಪರ್ಕ ಹೊಂದಿದ್ದ. ಈಗ ಅವನು ಬೇರೆ ಮದುವೆಯಾಗಿ ಸುಖವಾಗಿದ್ದಾನೆ. ಇದರಿಂದ ನನಗೆ ತುಂಬ ನೋವಾಗುತ್ತಿದೆ.

    ನಾನು ಹುಚ್ಚಿ ಆಗುತ್ತೀನಾ ಎಂದೆನಿಸುತ್ತಿದೆ ಮೇಡಂ. ಏನಾದರೂ ಮಾಡಿಕೊಂಡು ಈ ಪ್ರಪಂಚದಿಂದಲೇ ದೂರ ಹೋಗೋಣ ಎಂದೂ ಅನಿಸುತ್ತದೆ. ಇದರಿಂದಲೇ ನನ್ನ ಓದಿಗೂ ತೊಂದರೆಯಾಗುತ್ತಿದೆ. ಈ ನೋವಿನಲ್ಲೇ ಊಟ-ತಿಂಡಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ತುಂಬ ಸುಸ್ತೆನಿಸುತ್ತಿದೆ. ತಲೆಯ ಕೂದಲು ಉದುರಿ ತುಂಬ ತೆಳ್ಳಗಾಗಿದೆ.

    ಮುಖದ ಮೇಲೆ ಮೊಡವೆ ಮತ್ತು ಕಲೆಗಳು, ಬ್ಲಾಕ್‍ಹೆಡ್ಸ್, ವೈಟ್ ಹೆಡ್ಸ್ ಕೂಡ ಹೆಚ್ಚಾಗಿವೆ. ಬಣ್ಣವೂ ಮಾಸಿ ಹೋಗುತ್ತಿದೆ. ಇಷ್ಟಲ್ಲದೆ ಬಿಳಿಸೆರಗು ಜಾಸ್ತಿ ಹೋಗುತ್ತದೆ. ದಯವಿಟ್ಟು ಇದಕ್ಕೆಲ್ಲ ಪರಿಹಾರ ತಿಳಿಸಿ ಮೇಡಂ.
    ಉತ್ತರ: ನೀವಿನ್ನೂ ಈಗಲೇ ಎಲ್ಲ ಕಳೆದುಕೊಂಡವರಂತೆ ಚಿಂತಿಸುತ್ತಿರುವಿರಲ್ಲ. ಏಳು ವರ್ಷಗಳವರೆಗೂ ಅವನು ದೈಹಿಕ ಸಂಪರ್ಕದಲ್ಲಿರುವಾಗ ನಿಮಗೆ ಎಚ್ಚರ ಇರಲಿಲ್ಲವೇ? ಆಗ ಮದುವೆಯ ಬಗ್ಗೆ ಪ್ರಶ್ನಿಸಲಿಲ್ಲವೇ?

    ಉತ್ತರ: ಅವನು ನಿಮ್ಮನ್ನು ಪ್ರೀತಿಸಿಲ್ಲ, ಕಾಮಿಸಿದ್ದಾನೆ. ಇರಲಿ. ಈಗ ಕೊರಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವನು ಹೇಗೆ ನಿಮ್ಮನ್ನು ಮರೆತು ಮತ್ತೊಂದು ಮದುವೆಯಾಗಿ ಸಂತೋಷವಾಗಿದ್ದಾನೋ ನೀವು ಕೂಡ ಆಗಿದ್ದೆಲ್ಲವನ್ನೂ ಕೆಟ್ಟ ಕನಸು ಎಂದು ಮರೆತುಬಿಡಿ.

    ನೀವು ಓದಿನತ್ತ ಗಮನಕೊಡಿ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಿ. ಊಟ-ತಿಂಡಿಯನ್ನು ಸರಿಯಾಗಿ ಮಾಡದಿರುವುದು ಮತ್ತು ಚಿಂತೆಯಿಂದ ಸುಸ್ತು, ತಲೆಗೂದಲು ಉದುರುವುದು, ಬಿಳಿಸೆರಗು ಇವೆಲ್ಲವೂ ಕಾಣಿಸಿಕೊಂಡಿವೆ. ದಿನಕ್ಕೆ ಮೂರು ಲೀ. ನೀರು ಕುಡಿಯಿರಿ.

    ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸಿ. ಮುಖವನ್ನು ದಿನಕ್ಕೆ 3-4 ಬಾರಿ ಬಿಸಿನೀರಿನಿಂದ ಮುಖ ತೊಳೆಯಿರಿ. ಬೇವಿನಪುಡಿ, ಮೆಂತ್ಯಪುಡಿ, ನೆಲ್ಲಿಕಾಯಿ ಪುಡಿಯನ್ನು ಸಮಭಾಗ ತೆಗೆದುಕೊಂಡು ಗುಲಾಬಿ ಜಲದಲ್ಲಿ ಬೆರೆಸಿ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ಮುಖ ತೊಳೆದಲ್ಲಿ ಮೊಡವೆ ಕಲೆಗಳು ಮಾಯವಾಗುತ್ತವೆ.

    ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?

    33ಕ್ಕೇ ಲೈಂಗಿಕಾಸಕ್ತಿ ಕುಂದುಹೋಗಿದೆ- ಪತಿ ಹತ್ತಿರ ಬಂದರೆ ಸಿಟ್ಟುಬರುತ್ತದೆ: ಏನು ಮಾಡಲಿ?

    ಪತ್ನಿಗೆ ಸುಖನೀಡಲು ಆಗುತ್ತಿಲ್ಲ- ಆಕೆಗೆ ನನ್ನ ಮೇಲೆ ಜುಗುಪ್ಸೆ ಬಂದುಬಿಟ್ಟಿದೆ; ಪರಿಹಾರ ಹೇಳಿ ಪ್ಲೀಸ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts