More

    ಪದೇ ಪದೇ ಕಿಡ್ನಿಸ್ಟೋನ್​ ಆಗುತ್ತಿದೆ- ಯಾವ್ಯಾವ ಆಹಾರಗಳಿಂದ ಈ ಸಮಸ್ಯೆ ಬರುತ್ತದೆ?

    ಪದೇ ಪದೇ ಕಿಡ್ನಿಸ್ಟೋನ್​ ಆಗುತ್ತಿದೆ- ಯಾವ್ಯಾವ ಆಹಾರಗಳಿಂದ ಈ ಸಮಸ್ಯೆ ಬರುತ್ತದೆ?ಪ್ರಶ್ನೆ: ನನಗೆ ಪದೇ ಪದೆ ಮೂತ್ರಕೋಶದಲ್ಲಿ ಕಲ್ಲು ಆಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಒಮ್ಮೆ ಕಲ್ಲು ಆಗಿತ್ತು, ಆಗ ಅಲೋಪಥಿ ಚಿಕಿತ್ಸೆಯಿಂದ ಕಡಿಮೆಯಾಗಿತ್ತು. ಅದಾದ ಬಳಿಕ, ಪುನಃ ಒಂದು ವರ್ಷದಿಂದ ಆಗಾಗ ನೋವು ಬರುತ್ತದೆ. ಚಿಕ್ಕ ಕಲ್ಲುಗಳಾಗಿವೆ ಎಂದಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ?

    ಉತ್ತರ: ನಿಮ್ಮ ದೇಹದಲ್ಲಿ ಬಹಳ ಬೇಗ ಹರಳುಗಳಾಗುವ (ಕಲ್ಲು) ಪ್ರಕ್ರಿಯೆ ನಡೆಯುತ್ತಿದೆ. ನೀವು ಚಿಕಿತ್ಸೆ ಪಡೆದ ಬಳಿಕವೂ ಪಥ್ಯ ಮುಂದುವರಿಸಬೇಕಾಗುತ್ತದೆ.

    ಸುಣ್ಣಾಂಶ ಅಧಿಕವಿರುವ ಹಾಲು, ರಾಗಿ, ಮೊಟ್ಟೆ ಹೆಚ್ಚು ಸೇವಿಸಬಾರದು. ಅಲ್ಲದೆ, ಟೊಮ್ಯಾಟೊ, ಸೀಬೆಹಣ್ಣು, ಕ್ಯಾಬೇಜ್, ಹೂಕೋಸು ಸೇವನೆ ಬೇಡ. ಆಯುರ್ವೇದದಲ್ಲಿ ಮೂತ್ರಕೋಶದ ಕಲ್ಲುಗಳಿಗೆ ಉತ್ತಮ ಚಿಕಿತ್ಸೆ ಲಭ್ಯ. ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು.

    ದಿನಕ್ಕೆ ಒಂದು ಗಂಟೆ ನಡಿಗೆ ಇಲ್ಲವೇ ಅರ್ಧಗಂಟೆ ವ್ಯಾಯಾಮ ಮಾಡಬೇಕು. ಒಮ್ಮೆ ನಿಮ್ಮ ವೈದ್ಯಕೀಯ ವರದಿಗಳನ್ನು (ಹಿಂದಿನ ಹಾಗೂ ಇತ್ತೀಚಿನ) ತೆಗೆದುಕೊಂಡು ಹತ್ತಿರದ ಆಯುರ್ವೇದ ಆಸ್ಪತ್ರೆಗೆ ಭೇಟಿಯಿತ್ತಲ್ಲಿ ನಿಮ್ಮ ಪ್ರಕೃತಿ, ದೇಹಬಲ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ.

    ಅನಿಯಮಿತ ಮೂತ್ರ ಸಮಸ್ಯೆಯೆ?ಆಯುರ್ವೇದ ವೈದ್ಯರ ಪರಿಹಾರ ಇಲ್ಲಿದೆ…

    ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

     

    ಅಧಿಕ ಬೊಜ್ಜಿನಿಂದ ಕೊರಗುತ್ತಿದ್ದೇನೆ- ಆಯುರ್ವೇದ ಪರಿಹಾರವೇನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts