More

    ಎದೆಯ ಮೇಲೆ ಪುರುಷರಂತೆ ಕೂದಲುಬೆಳೆಯುತ್ತಿದೆ- ಮದುವೆಯಾಗಲು ಭಯವಾಗುತ್ತಿದೆ; ಪರಿಹಾರವೇನು?

    ಎದೆಯ ಮೇಲೆ ಪುರುಷರಂತೆ ಕೂದಲುಬೆಳೆಯುತ್ತಿದೆ- ಮದುವೆಯಾಗಲು ಭಯವಾಗುತ್ತಿದೆ; ಪರಿಹಾರವೇನು?

    4 ವರ್ಷಗಳಿಂದೀಚೆಗೆ ಕುತ್ತಿಗೆಯ ಮೇಲ್ಭಾಗದಲ್ಲಿ, ಎದೆಯ ಮೇಲೆ ಮತ್ತು ಸ್ತನಗಳ ಸುತ್ತಲೂ ಕೂದಲು ಬೆಳೆದಿವೆ. ಇದರಿಂದ ನನಗೆ ತುಂಬಾ ಮುಜುಗರವಾಗುತ್ತಿದೆ. ನಮ್ಮ ಮನೆಯಲ್ಲಿ ನನಗೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದಾರೆ. ನಾಳೆ ಮದುವೆಯ ನಂತರ ಹೇಗೆ ಎಂದು ಯೋಚನೆಯಾಗುತ್ತಿದೆ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

    ಕೆಲವರಲ್ಲಿ ಹಾರ್ಮೋನಿನ ತೊಂದರೆ ಮತ್ತು ಪಿಸಿಓಡಿ ಸಮಸ್ಯೆಯಿದ್ದಲ್ಲಿ ರೋಮಗಳ ಬೆಳವಣಿಗೆ ಆಗುತ್ತದೆ. ಅದರಿಂದ ದಾಂಪತ್ಯ ಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

    ನೀವು ಪ್ರತಿದಿನ ಅರಿಷಿಣವನ್ನು ರೋಮಗಳಿಗೆ ಹಚ್ಚಿ ಮಸಾಜ್ ಮಾಡಿ. ರೋಮಗಳ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು.

    ಬನ್ನಿ ಮರದ ಕಾಯಿಯನ್ನು ತೇಯ್ದು ಲೇಪಿಸಬೇಕು. ಇದರಿಂದ ಚಿಕ್ಕ ರೋಮಗಳು ಉದುರುತ್ತವೆ. ಒಮ್ಮೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಪಿಸಿಓಡಿ ಸಮಸ್ಯೆಯ ಬಗ್ಗೆ ಅರಿತುಕೊಳ್ಳಿ. ಹಾಗೆಯೇ ರಕ್ತಪರೀಕ್ಷೆಯ ಮೂಲಕ ಟೆಸ್ಟೋಸ್ಪಿರಾನ್ ಸ್ರವಿಸುವಿಕೆ ಹೆಚ್ಚಿದೆಯಾ ತಿಳಿದುಕೊಂಡು ಚಿಕಿತ್ಸೆ ಪಡೆಯಿರಿ.

    ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

    7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

    ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts