More

    ಬಿಪಿ, ಶುಗರ್​ ಇಲ್ಲದಿದ್ರೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ- ಇದಕ್ಕೆ ಪರಿಹಾರವಿದೆಯೆ?

    ಬಿಪಿ, ಶುಗರ್​ ಇಲ್ಲದಿದ್ರೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ- ಇದಕ್ಕೆ ಪರಿಹಾರವಿದೆಯೆ?ಪ್ರಶ್ನೆ: ವಯಸ್ಸು 42. ವಿವಾಹಿತೆ. ನನಗೆ ಬಿ.ಪಿ, ಶುಗರ್ ಯಾವುದೇ ಸಮಸ್ಯೆ ಇಲ್ಲ. ಆದರೆ ಪದೇ ಪದೇ ಮೂತ್ರಕ್ಕೆ ಹೋಗಬೇಕು ಎನ್ನಿಸುತ್ತಿರುತ್ತದೆ. ಒಮ್ಮೆ ಹೋಗಿ ಬಂದರೆ ಪುನಃ ಹೋಗಬೇಕೆನ್ನಿಸುತ್ತದೆ. ಕುಳಿತುಕೊಂಡಿದ್ದರೆ ಈ ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ. ಆದರೆ ನಿಂತುಕೊಂಡಾಗ, ಕೆಲಸ ಮಾಡುವಾಗ ಮೂತ್ರ ಮಾಡಬೇಕು ಎನ್ನಿಸುತ್ತದೆ. ಮಾಡಲು ಹೋದರೆ ಒಂದೆರಡು ಡ್ರಾಪ್‍ಗಳಷ್ಟೇ ಆಗುತ್ತದೆ. ನೀರು ಕುಡಿಯದಿದ್ದರೂ ಹೆಚ್ಚು ಮೂತ್ರ ಹೋಗುವುದೂ ಉಂಟು. ಇದು ಐದಾರು ವರ್ಷಗಳಿಂದ ಬಾಧಿಸುತ್ತಿದೆ. ಅಲೋಪಥಿಯ ಔಷಧ ತೆಗೆದುಕೊಂಡರೂ ಪ್ರಯೋಜನ ಆಗಲಿಲ್ಲ. ಇದಕ್ಕೆ ಕಾರಣ, ಪರಿಹಾರಗಳೇನು?

    ಉತ್ತರ: ಮಹಿಳೆಯರಲ್ಲಿ ಮೂತ್ರಚೀಲದ ಮೇಲಿನ ಒತ್ತಡದಿಂದಾಗಿ ಋತುಬಂಧದ ಸಮಯದಲ್ಲಿ ಮತ್ತು ಅದರ ನಂತರವೂ ಮೂತ್ರ ಸಂಗ್ರಹವಾದ ತಕ್ಷಣ ವಿಸರ್ಜಿಸಬೇಕೆಂದು ಅನ್ನಿಸುತ್ತಿರುತ್ತದೆ. ಮೂತ್ರನಾಳದ ಸೋಂಕು ಪದೇ ಪದೇ ಆಗುವುದರಿಂದಲೂ ಹೀಗಾಗುವುದುಂಟು. ಕೆಲವೊಂದು ವ್ಯಾಯಾಮಗಳನ್ನು ನೀವು ದಿನಕ್ಕೆ 20 ರಿಂದ 30 ಬಾರಿ ಮಾಡಿದ್ದಲ್ಲಿ ಮೂತ್ರಚೀಲದ ಮೇಲೆ ನಿಯಂತ್ರಣ ಹೆಚ್ಚುತ್ತದೆ. ಆಗ ಹೆಚ್ಚು ಹೊತ್ತು ಮೂತ್ರ ತಡೆಯಲು ಸಾಧ್ಯವಾಗುತ್ತದೆ.

    ಆ ವ್ಯಾಯಾಮಗಳೆದಂತೆ ಮೂತ್ರಚೀಲ ಖಾಲಿಯಾಗಿರುವ ಸಮಯದಲ್ಲಿ ಒಳಗೇ ಪೆಲ್ವಿಕ್ ಮಾಂಸಖಂಡಗಳನ್ನು ಅಂದರೆ ಜನನಾಂಗದ ಮಾಂಸಖಂಡಗಳು ಗಟ್ಟಿಯಾಗಿ ಸಂಕೋಚನ ಮಾಡುವುದು.

    ಅದು ಹೇಗೆಂದರೆ, ಎಲ್ಲಾದರೂ ಹೊರಗಡೆ ಹೋಗಿದ್ದಾಗ ಮೂತ್ರಚೀಲ ತುಂಬಿ, ಮೂತ್ರ ಮಾಡಬೇಕು ಎನ್ನಿಸಿದಾಗ ಅಲ್ಲೆಲ್ಲೂ ಶೌಚಾಲಯ ಇಲ್ಲದೇ ಹೋದರೆ, ಅಥವಾ ಮೂತ್ರ ವಿಸರ್ಜನೆಗೆ ಜಾಗ ಸಿಗದೇ ಹೋದರೆ ಅದನ್ನು ತಡೆಯುವುದಕ್ಕಾಗಿ ಒಳಗಡೆಯೇ ನಾವು ನಿಯಂತ್ರಣ ಮಾಡಲು ಪ್ರಯತ್ನಿಸುತ್ತೇವಲ್ಲವೇ, ಅದೇ ರೀತಿ ಮೂತ್ರಚೀಲ ಖಾಲಿಯಾದ ಸಂದರ್ಭಗಳಲ್ಲಿಯೂ ಮಾಡಿನೀಡಿ. ಹೀಗೆ ಕೆಲವು ಸೆಕೆಂಡುಗಳಷ್ಟೇ ಹಿಡಿದಿಟ್ಟುಕೊಳ್ಳುತ್ತಿದ್ದರೆ ತುಂಬಾ ಉಪಯೋಗವಾಗುತ್ತದೆ.

    ಸುಮ್ಮನೆ ಕುಳಿತಿರುವಾಗ, ನಿಂತಿರುವಾಗ, ಕೆಲಸ ಮಾಡುತ್ತಿರುವಾಗ ಈ ರೀತಿ ಮಾಡುತ್ತಿರಿ. ಇದೊಂದು ರೀತಿಯ ವ್ಯಾಯಾಮವಾಗಿದೆ. ಇದರ ಹೊರತಾಗಿ, ಅಲ್ಲದೇ ಚಂದ್ರಪ್ರಭಾವಟಿಯನ್ನು ದಿನಕ್ಕೆರಡು ಬಾರಿ ಒಂದೊಂದು ಮಾತ್ರೆಯಂತೆ ನಂತರ ಸೇವಿಸಿ.

    ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

    ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

    ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts