More

    ವರುಣನ ಅಬ್ಬರಕ್ಕೆ ನಲುಗಿದ ಆಂಧ್ರ: ಹುಡುಕಿದಷ್ಟೂ ಸಿಗುತ್ತಿವೆ ಶವಗಳು! ಪತ್ತೆಯಾದ 44 ಮೃತದೇಹ

    ಕಡಪ (ಆಂಧ್ರಪ್ರದೇಶ): ಚಂಡಮಾರುತದಿಂದಾಗಿ ಈ ಬಾರಿ ಹಲವು ರಾಜ್ಯಗಳಲ್ಲಿ ಭಯಾನಕ ಎನಿಸುವಂತ ಮಳೆಯ ಆರ್ಭಟವಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಕೆಲವು ವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದು, ಈಗಲೂ ಅದು ನಿಂತಿಲ್ಲ. ಅಂಥದ್ದೊಂದು ಪ್ರವಾಹಪೀಡಿತ ಪ್ರದೇಶಗಳಲ್ಲಿ ಒಂದು ಆಂಧ್ರಪ್ರದೇಶದ ಕೆಲವರು ಜಿಲ್ಲೆಗಳು.

    ರಾಯಲ್​ಸೀಮಾ, ಕಡಪಾ ಮತ್ತು ಅನಂತಪುರ ಮತ್ತು ನೆಲ್ಲೋರ್​​ ಜಿಲ್ಲೆಗಳಲ್ಲಂತೂ ಆಗಿರುವ ಹಾನಿಗೆ ಲೆಕ್ಕವೇ ಇಲ್ಲ. ರಕ್ಷಣಾ ಕಾರ್ಯ ಭರದಿಂದ ಸಾಗಿರುವ ನಡುವೆಯೇ ಮೃತದೇಹಗಳು ಪತ್ತೆಯಾಗುತ್ತಲೇ ಸಾಗಿವೆ. ಇಲ್ಲಿಯವರೆಗೆ 44 ಮೃತದೇಹಗಳು ಸಿಕ್ಕರೆ, ಅದೆಷ್ಟೋ ಮಂದಿ ನಾಪತ್ತೆಯಾಗಿದ್ದು, ಅವರ ಸುಳಿವು ಇನ್ನೂ ಸಿಕ್ಕಿಲ್ಲ. ಸದ್ಯ 16 ಮಂದಿ ನಾಪತ್ತೆಯಾಗಿರುವ ವರದಿಯಾಗಿದ್ದರೂ, ಇವುಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

    ಈ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್​ ರೆಡ್ಡಿ ಮಾಹಿತಿ ನೀಡಿದ್ದು, ಸಂತ್ರಸ್ತರಿಗೆ ಸರ್ಕಾರದ ನೀಡಲಿರುವ ಪರಿಹಾರದ ಬಗ್ಗೆ ವಿವರಿಸಿದ್ದಾರೆ. ನವೆಂಬರ್​ 16ರಿಂದ ಇಲ್ಲಿಯವರೆಗೂ ಭಯಾನಕ ಮಳೆಯಾಗಿದೆ. ಹಿಂದೆಂದೂ ಕಂಡಿರದಷ್ಟು ಪ್ರವಾಹಪೀಡಿತ ಪ್ರದೇಶವಾಗಿ ಹಲವು ಜಿಲ್ಲೆಗಳು ಮಾರ್ಪಟ್ಟಿವೆ. ರಾಯಲ್​ಸೀಮಾ ಅಂತೂ ಅಕ್ಷರಶಃ ಮುಳುಗಿಯೇ ಹೋಗಿದೆ. ತಿರುಪತಿಯ ತಿರುಮಲದಲ್ಲಿಯೂ ಪ್ರವಾಹ ಉಂಟಾಗಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

    ನವೆಂಬರ್​ 19ರಂದು ಅಣ್ಣಮ್ಮಯ್ಯ ಜಲಾಶಯದ ಒಳಹರಿವು 3.2 ಕ್ಯೂಸೆಕ್ಸ್​​ಆಗಿತ್ತು. ಆಗ ಹೊರಹರಿವು ಕೇವಲ 2.17 ಕ್ಯೂಸೆಕ್ಸ್​ ಇತ್ತು. ಹೀಗಾಗಿ ಇದು ಹಲವು ಸ್ವರೂಪದ ಹಾನಿ ಮಾಡಿದೆ. ಕಳೆದ 50 ವರ್ಷದಲ್ಲಿ ಅಣ್ಣಮ್ಮಯ್ಯ ಜಲಾಶಯ ಇಷ್ಟು ದೊಡ್ಡ ಪ್ರಮಾಣದಲ್ಲಿ ಒಳಹರಿವು ಹೊಂದಿರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪೀಂಚಾ ಅಣೆಕಟ್ಟಿನಿಂದಲೂ ಸಮಸ್ಯೆಯಾಗಿದೆ.

    ಮಳೆಯಿಂದ ವಿದ್ಯುತ್​ ಸಂಪರ್ಕ ಕಳೆದುಕೊಂಡಿದ್ದ ನಾಲ್ಕು ಜಿಲ್ಲೆಗಳಿಗೆ ಇದಾಗಲೇ ಪುನಃ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಸಂತ್ರಸ್ತರಿಗೆ ಸಹಾಯವಾಣಿ 104 ಆರಂಭಿಸಲಾಗಿದೆ. 95,949ಕುಟುಂಬಗಳಿಗೆ ಅಗತ್ಯವಸ್ತುಗಳನ್ನು ಪೂರೈಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೂ ತಲಾ 2000 ರೂ.ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

    ಡ್ಯೂಟಿ ನೆಪದಲ್ಲಿ ವಿವಾಹಿತೆ ಜತೆ ಸಬ್​​​ಇನ್ಸ್​​ಪೆಕ್ಟರ್ ಲವ್ವಿಡವ್ವಿ… ಊರಿಗೆ ಹೋಗ್ತೇನೆಂದು ಬಲೆಬೀಸಿದ ಗಂಡ!

    ಮತ್ತೆ ಕೋಟ್ಯಧೀಶನಾದ ಮಲೈ ಮಹದೇಶ್ವರ: ಚಿನ್ನ, ಬೆಳ್ಳಿ, ಕಾಂಚಾಣ ಝಣಝಣ…ತಡರಾತ್ರಿಯವರೆಗೂ ಎಣಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts