More

    ಶೈಕ್ಷಣಿಕ ಕ್ಷೇತ್ರದ ಕೇಸರೀಕರಣಕ್ಕೆ ಯತ್ನ: ಆಂಧ್ರದ ಪ್ರಗತಿಪರ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಭಾಸ್ಕರ್ ಟೀಕೆ

    ಗಂಗಾವತಿ: ಶೈಕ್ಷಣಿಕ ಕ್ಷೇತ್ರದ ಕೇಸರೀಕರಣಕ್ಕೆ ರಾಜ್ಯ ಸರ್ಕಾರ ಹುನ್ನಾರ ನಡೆಸಿದ್ದು, ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ ಎಂದು ಆಂಧ್ರದ ಪ್ರಗತಿಪರ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಭಾಸ್ಕರ್ ಹೇಳಿದರು.

    ನಗರದ ಶ್ರೀ ಚನ್ನಬಸವೇಶ್ವರ ಕಲಾ ಮಂದಿರದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮಂಗಳವಾರ ಆಯೋಜಿಸಿದ್ದ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಕ್ಷೇತ್ರದ ಸಬಲೀಕರಣಕ್ಕಿಂತ ಕೋಮುವಾದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹತ್ವ ನೀಡುತ್ತಿದ್ದು, ಸುಳ್ಳು ಭರವಸೆಗಳ ಮೇಲೆ ಆಡಳಿತ ನಿರ್ವಹಿಸಲಾಗುತ್ತಿದೆ. ಉದ್ಯೋಗ ಕಲ್ಪಿಸುವುದನ್ನು ಬಿಟ್ಟು ಎಲ್ಲ ಹುದ್ದೆಗಳ ಆಯ್ಕೆಯಲ್ಲೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ದೂರಿದರು.

    ಸಮಾವೇಶದಲ್ಲಿ ವಿದ್ಯಾರ್ಥಿ ಸಂಘಟನೆ ಸಮೀಕ್ಷೆ ವರದಿ ಪ್ರಣಾಳಿಕೆ ಮಂಡನೆ, ವಿದ್ಯಾರ್ಥಿಗಳ ಭವಿಷ್ಯ ಮುನ್ನಡೆ ಇತರ ವಿಷಯ ಕುರಿತು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ವಿವಿಧ ಜಿಲ್ಲೆಯ ಪದಾಧಿಕಾರಿಗಳಾದ ಧಾರವಾಡದ ವೈಶಾಲಿ, ಮಹ್ಮದ್ ಸಿರಾಜ್, ಕುಮಾರ ಸಮತಳ, ಶರವಣ್ ಬೆಂಕಿಕೇರೆ, ರಜಾಕ್ ಉಸ್ತಾದ್, ಪೀರ್‌ಬಾಷಾ, ಮಲ್ಲಿಗೆ ಶಿರೇಮನಿ, ಪೂರ್ಣಿಮಾ, ಭಾರದ್ವಾಜ್, ಹೇಮಂತ, ದುರುಗೇಶ, ಗುರುಬಸವ, ಶರಣಬಸವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts