More

    ಕೇಂದ್ರವನ್ನು ಹೀಗಳೆಯುವ ಭರದಲ್ಲಿ ಗುಂಡೇಟಿನಿಂದ ರೈತ ಬಲಿ ಎಂದ ಪತ್ರಕರ್ತ ಸರ್ದೇಸಾಯಿಗೆ ಏನಾಯ್ತು ನೋಡಿ…

    ನವದೆಹಲಿ: ಇಂಡಿಯಾ ಟುಡೆ ಪತ್ರಿಕೆಯಲ್ಲಿ ಸಲಹಾ ಸಂಪಾದಕರಾಗಿರುವ ರಜ್​ದೀಪ್​ ಸರ್ದೇಸಾಯಿ ಬ್ರೇಕಿಂಗ್​ ಸುದ್ದಿ ಕೊಡುವಲ್ಲಿ ನಿಸ್ಸೀಮರು. ಅದೇ ವೇಳೆ ಇವರು ಕೂಡ ಅಷ್ಟೇ ಸುದ್ದಿಯಲ್ಲಿ ಇರುವಂಥ ಪತ್ರಕರ್ತ.

    ಸದಾ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ವಿರುದ್ಧ ಹೇಳಿಕೆ ನೀಡುತ್ತಾ, ಸದಾ ಯಾವ್ಯಾವುದೋ ಆರೋಪಗಳನ್ನು ಮಾಡುತ್ತಾ ಟ್ವೀಟ್​ ಮಾಡುವುದು ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ಕೆಲವು ಬಾರಿ ತಪ್ಪು ಸುದ್ದಿಗಳನ್ನು ನೀಡಿ ಟೀಕೆಗೆ ಒಳಗಾಗಿರುವುದೂ ಇದೆ.
    ಆದರೆ ಇದೀಗ ಬ್ರೇಕಿಂಗ್​ ಕೊಡುವ, ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಸಂಬಂಧ ಕೊಟ್ಟಂಥ ಸುದ್ದಿಯೊಂದರಿಂದ ಪೇಚಿಗೆ ಸಿಲುಕಿದ್ದಾರೆ. ಇವರನ್ನು ಎರಡು ವಾರಗಳ ಕಾಲ ಇವರು ಕೆಲಸ ನಿರ್ವಹಿಸುವ ಇಂಡಿಯಾ ಟುಡೆ ಪತ್ರಿಕೆ ಹೊರಕ್ಕೆ ಹಾಕುವುದೂ ಅಲ್ಲದೇ, ಇವರ ತಿಂಗಳ ಸಂಬಳವನ್ನು ನೀಡುವುದಿಲ್ಲ ಎಂದು ಆದೇಶ ಹೊರಡಿಸಿದೆ.

    ಅಷ್ಟಕ್ಕೂ ಸರ್ದೇಸಾಯಿಯವರು ಎಡವಟ್ಟು ಮಾಡಿರುವುದು ಮೊನ್ನೆ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದ ಘಟನೆಯ ಕುರಿತು ವರದಿ ಮಾಡುವ ಸಂದರ್ಭದಲ್ಲಿ. ರೈತರು ನಡೆಸಿದ್ದ ಟ್ರ್ಯಾಕ್ಟರ್​ ರ್ಯಾಲಿಯ ಸಂದರ್ಭದಲ್ಲಿ ಓರ್ವ ಯುವ ರೈತ ಟ್ರ್ಯಾಕ್ಟರ್​ ಚಲಾಯಿಸುವಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದ. ನಂತರದಲ್ಲಿ ಇದರ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿದೆ.

    ಆದರೆ ಆ ಕ್ಷಣದಲ್ಲಿ ಸಿಕ್ಕಿದ್ದೇ ಛಾನ್ಸ್​ ಎಂದುಕೊಂಡ ಸರ್ದೇಸಾಯಿಯವರು, ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ, ಗುಂಡು ತಗುಲಿ ಓರ್ವ ರೈತ ಮೃತಪಟ್ಟ ಎಂದು ಬ್ರೇಕಿಂಗ್​ ಕೊಟ್ಟರು. ಇವರು ಅತ್ಯಂತ ಹಿರಿಯ ಪತ್ರಕರ್ತರೂ ಆಗಿರುವ ಕಾರಣ, ಇದೇ ಸುದ್ದಿ ಬ್ರೇಕಿಂಗ್​ ರೂಪದಲ್ಲಿ ಟಿ.ವಿಯಲ್ಲಿ ಪ್ರಸಾರ ಕೂಡ ಆಯಿತು. ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿಯೂ ಪ್ರಕಟಿಸಿಕೊಂಡರು ಸರ್ದೇಸಾಯಿ.

    ಇಷ್ಟೇ ಸಾಕಾಯಿತು, ಕೇಂದ್ರ ಸರ್ಕಾರದ ವಿರೋಧಿಗಳಿಗೆ. ಇದೇ ಸುದ್ದಿ ಭಾರಿ ವೈರಲ್​ ಆಗಿ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ಶುರುವಾದವು. ಇವರು ಮಾಡಿದ ಟ್ವೀಟ್​ ಅನ್ನು ಪ್ರಧಾನಿ ಮೋದಿ ವಿರೋಧಿಗಳು ಶೇರ್​ ಮಾಡಿಕೊಂಡರು.
    ಆದರೆ ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ ರೈತ ಮೃತಪಟ್ಟಿದ್ದು, ಅಪಘಾತದಲ್ಲಿಯೇ ವಿನಾ ಪೊಲೀಸರ ಗುಂಡೇಟಿನಿಂದಲೂ ಅಲ್ಲ, ಆ ಸಮಯದಲ್ಲಿ ಪೊಲೀಸರು ಗುಂಡೂ ಹಾರಿಸಿಲ್ಲ ಎನ್ನುವುದು ವಿಡಿಯೋಗಳಿಂದ ತಿಳಿದುಬಂತು. ಸತ್ಯಾಂಶ ಏನು ಎಂಬ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದರು. ನಂತರ ತಪ್ಪಿನ ಅರಿವಾಗಿ ಸರ್ದೇಸಾಯಿಯವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಂಡು ಸತ್ಯಾಂಶವನ್ನು ಹೇಳಿದರು.

    ಆದರೆ ಇದಾಗಲೇ ಸುಳ್ಳಿನ ಸುದ್ದಿ ವ್ಯಾಪಕವಾಗಿ ಹರಡಿಹೋಗಿತ್ತು. ಈ ಸುಳ್ಳು ವರದಿಯಿಂದ ಇಂಡಿಯಾ ಟುಡೆ ಪತ್ರಿಕೆ ಕೂಡ ಸಾಕಷ್ಟು ಟೀಕೆಗಳನ್ನು ಕೇಳಬೇಕಾಗಿ ಬಂದದ್ದು ಮಾತ್ರವಲ್ಲದೇ, ಛೀಮಾರಿಯನ್ನೂ ಹಾಕಿಸಿಕೊಳ್ಳಬೇಕಾಯಿತು. ಹಲವಾರು ಬಿಜೆಪಿ ನಾಯಕರು ಸರ್ದೇಸಾಯಿ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು ಹಾಗೂ ಅವರನ್ನು ಕೆಲಸದಿಂದ ತೆಗೆದುಹಾಕಲು ಒತ್ತಾಯಗಳು ಕೇಳಿಬಂದವು.

    ಇಂಥದ್ದೊಂದು ದೊಡ್ಡ ಪ್ರಮಾದ ಮಾಡಿದ ಕಾರಣ, ಈಗ ಸಂಸ್ಥೆ ಸರ್ದೇಸಾಯಿಯವರ ತಿಂಗಳ ಸಂಬಳವನ್ನು ಕಟ್​ ಮಾಡಿದೆ, ಮಾತ್ರವಲ್ಲದೇ ಎರಡು ವಾರಗಳವರೆಗೆ ಅಮಾನತು ಮಾಡಿದೆ.

    ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​

    VIDEO: ದೆಹಲಿ ಹಿಂಸಾಚಾರ: ನಟ ದೀಪ್​ ಸಿಧು ಎಸ್ಕೇಪ್​, ಎಫ್​ಐಆರ್​ ದಾಖಲು

    ‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’

    ರೈತರ ಹೆಸರಲ್ಲಿ ಹಿಂಸೆಗಿಳಿದರು, ತಮ್ಮ ಧ್ವಜ ಹಾರಿಸಿದರು, ಹಲ್ಲೆ ಮಾಡಿದರು- ಏಳು ಮಂದಿ ವಿರುದ್ಧ ಎಫ್‌ಐಆರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts