More

    ಅನಂತ್​ಕುಮಾರ್​ ಸೇರಿದಂತೆ 17 ಸಂಸದರಿಗೆ ಕರೊನಾ ಪಾಸಿಟಿವ್

    ನವದೆಹಲಿ: ಇಂದು ಮುಂಗಾರು ಅಧಿವೇಶನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ.

    ಈ ಹಿನ್ನೆಲೆಯಲ್ಲಿ ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್​ಕುಮಾರ್​ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

    ಸಂಸದ ಅನಂತ್​ಕುಮಾರ್​ ಅವರು ಕಳೆದ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿಗೆ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

    ತಮಗೆ ಯಾವುದೇ ರೀತಿಯಲ್ಲಿಯೂ ಸೋಂಕಿನ ಲಕ್ಷಣಗಳು ಇಲ್ಲ. ಆದರೂ ಪಾಸಿಟಿವ್​ ಬಂದಿದೆ ಎಂದು ಅನಂತ್​ಕುಮಾರ್​ ಹೇಳಿದ್ದಾರೆ. ಸದ್ಯ ಇವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

    ಇದನ್ನೂ ಓದಿ: ನಟ ಸೂರ್ಯನ ವಿರುದ್ಧ ನ್ಯಾಯಾಂಗ ನಿಂದನೆಗೆ ಕೋರಿದ ಜಡ್ಜ್!​ ಅಷ್ಟಕ್ಕೂ ಮಾಡಿರೋ ತಪ್ಪೇನು?

    ಇವರಿಗೆ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಶಿರಸಿಯ ಅವರ ನಿವಾಸಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಕುಟುಂಬದವರ ಗಂಟಲುದ್ರವ ಪರೀಕ್ಷಿಸಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗಿದೆ.

    ಈ ನಡುವೆಯೇ, ಅಧಿವೇಶನದಲ್ಲಿ ಹಾಜರು ಆಗಹೊರಟಿದ್ದ ಸಂಸದರನ್ನು ಪರೀಕ್ಷೆ ಮಾಡಿದಾಗ 16 ಮಂದಿಗೆ ಕರೊನಾ ಪಾಸಿಟಿವ್​ ಬಂದಿದೆ.
    ಇವರ ಪೈಕಿ ಅತ್ಯಧಿಕ ಕರೊನಾ ಪಾಸಿಟಿವ್​ ಬಂದಿರುವುದು ಬಿಜೆಪಿ ಸಂಸದರಿಗೆ. 12 ಮಂದಿ ಬಿಜೆಪಿ ಸಂಸದರು, ಇಬ್ಬರು ವೈಎಸ್​ಆರ್​ ಕಾಂಗ್ರೆಸ್​, ಹಾಗೂ ತಲಾ ಒಬ್ಬರು ಶಿವ ಸೇನಾ, ಡಿಎಂಕೆ ಹಾಗೂ ಆರ್​ಎಲ್​ಪಿ ಎಂದು ಮೂಲಗಳು ತಿಳಿಸಿವೆ.

    ಬಿಜೆಪಿ ಸಂಸದ ಸುಕಂಠ ಮಜುಮ್ದಾರ್​ ಅವರು ನಿನ್ನೆನೇ ತಮಗೆ ಪಾಸಿಟಿವ್​ ಬಂದಿರುವ ಕುರಿತು ಟ್ವೀಟ್​ ಮಾಡಿದ್ದರು. ತಮ್ಮ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆಗೆ ಒಳಗಾಗುವಂತೆ ಹೇಳಿದ್ದರು.

    ಬಿಬಿಎಂಪಿ 198 ವಾರ್ಡ್​ಗಳ ಮೀಸಲಾತಿ ಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ…

    ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಅಮೆರಿಕದಿಂದ ರಾಹುಲ್​ ಗಾಂಧಿ ಟ್ವೀಟ್​!

    ‘ನೆಹರೂ ಕಟ್ಟಿಸಿರೋ ‘ಏಮ್ಸ್’​ ಇರೋವಾಗ ಸೋನಿಯಾ ಪದೇ ಪದೇ ವಿದೇಶಕ್ಕೆ ಹೋಗೋದ್ಯಾಕೆ?’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts