More

    VIDEO: ನಿರ್ಮಾಣಹಂತದಲ್ಲಿ ಕಟ್ಟಡದ ಕಂಬ ಯುವಕನ ಮೇಲೆ ಬಿದ್ದ ಭಯಾನಕ ವಿಡಿಯೋ

    ನವದೆಹಲಿ: ರಾಜಸ್ಥಾನದ ಭಾರತ್ಪುರದ ಮಾರುಕಟ್ಟೆಯೊಂದರಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕಂಬವೊಂದು ಕೆಳಗಿನಿಂದ ಹಾದುಹೋಗುವ ವ್ಯಕ್ತಿಯೊಬ್ಬನ ಮೇಲೆ ಬಿದ್ದಿದೆ.

    ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅದೇ ವೇಳೆ ಒಬ್ಬನ ತಲೆಯ ಮೇಲೆ ಕಂಬ ಮುರಿದು ಬಿದ್ದಿದೆ. ಸ್ಥಳದಲ್ಲಿಯೇ ಆತ ಕುಸಿದು ಬಿದ್ದಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಘಟನೆಯ ಭಯಾನಕ ವಿಡಿಯೋ ಇದೀಗ ವೈರಲ್​ ಆಗಿದೆ. ಯುವಕನಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇಲ್ಲಿ ಮಳಿಗೆ ನಿರ್ಮಾಣವಾಗುತ್ತಿದೆ. ಆ ಸಮಯದಲ್ಲಿ ಮೂರನೇ ಮಹಡಿಯ ಕಂಬವು ಜಾರಿ ಬಿದ್ದಿದೆ. ಇದು ಯುವಕನ ತಲೆಯ ಮೇಲೆಯೇ ಬಿದ್ದಿದ್ದು, ಆತನಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಸ್ನೇಹಿತರು ಹೆಗಲ ಮೇಲೆ ಕೈಹಾಕಿಕೊಂಡು ಹೋಗುತ್ತಿದ್ದಾರೆ. ಆ ಸಂದರ್ಭದಲ್ಲಿ ಕಂಬ ಕುಸಿದು ಬಿದ್ದು ಪುಡಿಪುಡಿಯಾಗಿದೆ. ಒಬ್ಬಾತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಇನ್ನೊಬ್ಬ ಯುವಕ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.

    ಇದನ್ನೂ ಓದಿ: ಕಾಲಿಗೆ ಸುತ್ತಿಗೊಂಡ ಬೃಹದಾಕಾರದ ಹಾವು- ಭಯಾನಕ ವಿಡಿಯೋ ವೈರಲ್​

    ಸಿಸಿಟಿವಿಯಲ್ಲಿ ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಯುವಕ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದದ್ದು, ಕೆಲ ಕ್ಷಣ ಯಾರೂ ಸ್ಥಳಕ್ಕೆ ಹೋಗದೇ ಇರುವುದು ಹಾಗೂ ನಂತರ ಎಲ್ಲರೂ ಬಂದು ಜಮಾಯಿಸಿರುವ ದೃಶ್ಯ ಈ ವಿಡಿಯೋದಲ್ಲಿ ಕಾಣಬಹುದು.

    ರೈಲು ಹತ್ತಿ ಸೆಲ್ಫಿ ತೆಗೆಯುವಷ್ಟರಲ್ಲಿಯೇ ಸಜೀವ ದಹನವಾದ ಬಾಲಕ!

    ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!

    ಸರ್ಕಾರಿ ಬಸ್​, ಗ್ಯಾಸ್ ಟ್ಯಾಂಕರ್​ ನಡುವೆ ಭೀಕರ ಅಪಘಾತ- 12 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts