More

    ಬಿಜೆಪಿ ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಮಾಜಿ ಸಿಎಂಗೆ ಕರೊನಾ ಪಾಸಿಟಿವ್‌- ಟ್ವೀಟ್‌ ಮೂಲಕ ಹೀಗೆ ಹೇಳಿದ್ರು…

    ಲಖನೌ: ಅದು ಬಿಜೆಪಿ ಕರೊನಾ ಲಸಿಕೆ. ನಾನು ಹಾಕಿಸಿಕೊಳ್ಳುವುದಿಲ್ಲ. ಅದನ್ನು ನಂಬುವುದು ಹೇಗೆ ಎಂದಿದ್ದರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್. ಅವರಿಗೆ ಈಗ ಕರೊನಾ ಪಾಸಿಟಿವ್‌ ಕಾಣಿಸಿಕೊಂಡಿದೆ.

    ಈ ಕುರಿತು ಟ್ವಿಟರ್‌ ಮೂಲಕ ಮಾಹಿತಿ ನೀಡಿರುವ ಅಖಿಲೇಶ್‌ ತಮಗೆ ಕರೊನಾ ಪಾಸಿಟಿವ್‌ ಬಂದಿರುವ ವಿಷಯ ತಿಳಿಸಿದ್ದಾರೆ. ನನಗೆ ಕರೊನಾ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ. ನಾನು ಐಸೋಲೇಷನ್‍ಗೆ ಒಳಗಾಗಿದ್ದೇನೆ. ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ. ನನ್ನ ಸಂಪಕಕ್ಕೆ ಬಂದಿರುವವರು ಕೆಲವು ದಿನಗಳ ಕಾಲ ಐಸೋಲೇಷನ್‍ಗೆ ಒಳಗಾಗಿ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

    ಯಾದವ್ ಅವರು ಇತ್ತೀಚೆಗಷ್ಟೇ ಕುಂಭಮೇಳ ನಡೆಯುತ್ತಿರುವ ಹರಿದ್ವಾರಕ್ಕೆ ಭೇಟಿ ನೀಡಿದ್ದು, ಇದೇ ವೇಳೆ ಅಖಾರ ಪರಿಷದ್‌ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದರು.

    ಭಾರತದಲ್ಲಿ ಕರೊನಾ ಲಸಿಕೆ ಶುರುವಾದ ಮೇಲೆ ಅನೇಕ ಗಣ್ಯರು ಲಸಿಕೆ ಹಾಕಿಸಿಕೊಳ್ಳಲು ಶುರು ಮಾಡಿದ್ದರು. ಆಗ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಖಿಲೇಶ್‌, ನಾನು ಸದ್ಯಕ್ಕೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಲಸಿಕೆಯನ್ನು ನಾನು ನಂಬೋದಾದ್ರೂ ಹೇಗೆ? ನಾನು ಬಿಜೆಪಿ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದಿದ್ದರು.

    ಕೊನೆಗೂ ಸಿಕ್ಕಿಬಿದ್ದ ಡಬಲ್ ಮರ್ಡರ್‌ ಆರೋಪಿ: ಎಸ್ಕೇಪ್‌ ಆಗಹೋಗಿ ಕಾಲಿಗೆ ಗುಂಡು ಹಾಕಿಸಿಕೊಂಡ‌

    ಸಾರಿಗೆ ನೌಕರರಿಂದ ನಟ ಯಶ್‌ಗೆ ಬಂತಂತೆ ಈ ಪತ್ರ: ನಿಜನಾ? ಸುಳ್ಳಾ…? ನೂರೆಂಟು ಪ್ರಶ್ನೆ…!

    ಕೊನೆಗೂ ಸಿಕ್ಕಿಬಿದ್ದ ಡಬಲ್ ಮರ್ಡರ್‌ ಆರೋಪಿ: ಎಸ್ಕೇಪ್‌ ಆಗಹೋಗಿ ಕಾಲಿಗೆ ಗುಂಡು ಹಾಕಿಸಿಕೊಂಡ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts