More

    ಕಾಂಗ್ರೆಸ್ ಮುಖಂಡ ಅಹಮ್ಮದ್​ ಪಟೇಲ್ ಸ್ಥಿತಿ ಗಂಭೀರ: ಐಸಿಯುಗೆ ಶಿಫ್ಟ್​

    ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಸೋನಿಯಾ ಗಾಂಧಿ ಆಪ್ತ ಅಹಮ್ಮದ್​ ಪಟೇಲ್​ ಅವರ ಸ್ಥಿತಿ ಗಂಭೀರವಾಗಿದೆ. ಕಳೆದೊಂದು ತಿಂಗಳಿನಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಇದೀಗ ಪರಿಸ್ಥಿತಿ ಗಂಭೀರವಾಗಿರುವುದಾಗಿ ವರದಿ ಬಂದಿದೆ.

    ಪಟೇಲ್​ ಅವರನ್ನು ಸದ್ಯ ಗುರುಗ್ರಾಮದ ಮೇದೆಂಟಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಅವರ ಮಗ ಫೈಸೆಲ್​ ಟ್ವೀಟ್​ ಮಾಡುವ ಮೂಲಕ ತಂದೆಯವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಅವರು ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕರೊನಾಕ್ಕೆ ಬಲಿಯಾದ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಸೌಮಿತ್ರ ಚಟರ್ಜಿ

    71 ವರ್ಷ ವಯಸ್ಸಿನ ಅಹ್ಮದ್ ಪಟೇಲ್​ಗೆ ಅಕ್ಟೋಬರ್ 1ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಅವರನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್​ ಮಾಡಲಾಗಿದೆ.

    ಇನ್ನೊಂದೆಡೆ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್​ ಅವರಿಗೂ ಕರೊನಾ ಸೋಂಕು ದೃಢಪಟ್ಟಿದೆ. ಟ್ವೀಟ್​ ಮಾಡುವ ಮೂಲಕ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ತಮಗೆ ಕರೊನಾ ಪಾಸಿಟಿವ್​ ಬಂದಿದ್ದು ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವಿಟರ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ಲೀಸ್​​ ಬಟ್ಟೆ ಕೊಡಿಸಿ… ಸ್ವೀಟ್​ ಆದ್ರೂ ತರ್ಸಿಯಪ್ಪ… ಹೋಗ್ಲಿ ಬಿಡಿ… ಈ ಗ್ರೀಟಿಂಗ್ಸ್​ ಆದ್ರೂ ತಗೋಳಿ!

    ಅಮೆರಿಕದ 231 ವರ್ಷಗಳಲ್ಲೇ ಹೊಸ ದಾಖಲೆ ಬರೆದ ಜಿಲ್ ಬೈಡೆನ್​

    ಐದು ಸಲ ಶಾಸಕನಾದ್ರೂ ಎಂಥ ಬಡತನ, ಎಷ್ಟು ಸರಳತನ ಎಂದವರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts