More

    ಬಿಜೆಪಿಗೆ ಭರ್ಜರಿ ಜಯ: ಸುಪ್ರೀಂಕೋರ್ಟ್​ ಮೆಟ್ಟಿಲೇರಿತು ಇವಿಎಂ- ವಕೀಲರಿಂದ ಅರ್ಜಿ

    ನವದೆಹಲಿ: ಉಪ ಚುನಾವಣೆ ಸೇರಿದಂತೆ ಬಿಹಾರ ವಿಧಾನಸಭಾ ಚುನಾವಣೆ ಎಲ್ಲೆಡೆಯೂ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಾನಿಕ್​ ಮತ ಯಂತ್ರ (ಇವಿಎಂ) ಸರಿಯಾಗಿಲ್ಲ ಎಂಬ ಗಲಾಟೆ ಶುರುವಾಗಿದೆ. ಇದು ಪ್ರತಿ ಚುನಾವಣೆಯಲ್ಲಿ ನಡೆಯುತ್ತಿರುವ ವಿಷಯವೇ.

    ಆದರೆ ಇದೇ ವಿಷಯವೀಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಇವಿಎಂ ವಿರುದ್ಧ ವಕೀಲ ಸಿ.ಆರ್. ಜಯ ಸುಕಿನ್ ಎಂಬವವರು ಅರ್ಜಿ ಸಲ್ಲಿಸಿದ್ದಾರೆ.

    ಅರ್ಜಿಯಲ್ಲಿ ಅವರು ಹೇಳಿರುವುದು ಏನೆಂದರೆ, ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್​ ಪೇಪರ್​ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.

    ಇವಿಎಂಗಳು ದೋಷಪೂರಿತವಾಗಿವೆ. ಅವುಗಳನ್ನು ತಿರುಚುವ ಸಾಧ್ಯತೆ ಹೆಚ್ಚಿದೆ. ಆ ಹಿನ್ನೆಲೆಯಲ್ಲಿಯೇ ಜಗತ್ತಿನ ವಿವಿಧ ರಾಷ್ಟ್ರಗಳು ಅವುಗಳ ಬಳಕೆಯನ್ನು ಕೈಬಿಟ್ಟಿವೆ. ಆದ್ದರಿಂದ ಭಾರತದಲ್ಲಿ ಕೂಡ ಇವಿಎಂ ಬಳಕೆ ಕೈಬಿಡಲು ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ.

    ಇದನ್ನೂ ಓದಿ: ಕೋಮುವಾದಿ ಪಕ್ಷದಲ್ಲಿ ಇರಲಾರೆವು: ಮೆಹಬೂಬಾ ಮುಫ್ತಿಗೆ ಮತ್ತೊಮ್ಮೆ ಆಘಾತ

    ಭಾರತದಲ್ಲಿ ಸಾಂಪ್ರದಾಯಿಕ ಮತಪತ್ರ ಬಳಕೆ ಜಾರಿಗೆ ಬಂದರೆ ಮತಗಳನ್ನು ತಿರುಚುವ ಮತ್ತು ದುರುಪಯೋಗಪಡಿಸಿಕೊಳ್ಳುವ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವದ ಮೂಲ ಪ್ರಕ್ರಿಯೆಯಾದ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಮತಪತ್ರಗಳೇ ವಿಶ್ವಾಸಾರ್ಹ ಮಾನದಂಡಗಳು ಎಂದು ಅರ್ಜಿಯಲ್ಲಿ ವಕೀಲರು ತಿಳಿಸಿದ್ದಾರೆ.

    ಇವಿಎಂಗಳನ್ನು ಅವುಗಳ ತಯಾರಿಕೆಯ ಹಂತದಲ್ಲೆ ತಂತ್ರಾಂಶ ಹ್ಯಾಕ್ ಅವಕಾಶವಿದೆ. ಹಾಗಾಗಿ ಯಾವುದೇ ಹ್ಯಾಕರ್ ಅಥವಾ ಮಾಲ್​ವೇರ್ ನೆರವು ಅಗತ್ಯವೂ ಇಲ್ಲದೆ ಫಲಿತಾಂಶ ತಿರುಚಬಹುದು. ಈವರೆಗೆ ಜಗತ್ತಿನಲ್ಲಿ ಹೀಗೆ ಹ್ಯಾಕ್ ಮಾಡಲು ಸಾಧ್ಯವಿಲ್ಲದ ಇವಿಎಂ ಯಂತ್ರಗಳೇ ಇಲ್ಲ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

    ನಕಲಿ ಆ್ಯಪ್​ನಿಂದ ಪ್ರಯಾಣಿಕರಿಗೆ ಟೋಪಿ! ಪೊಲೀಸರ ಎಚ್ಚರಿಕೆ ಇಲ್ಲಿದೆ ನೋಡಿ…

    VIDEO: ಉಗ್ರ ಸ್ವರೂಪ ಪಡೀತಿದೆ ದೆಹಲಿ ಚಲೋ: ಪೊಲೀಸರಿಂದ ಅಶ್ರುವಾಯು ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts