More

    ನಕಲಿ ಆ್ಯಪ್​ನಿಂದ ಪ್ರಯಾಣಿಕರಿಗೆ ಟೋಪಿ! ಪೊಲೀಸರ ಎಚ್ಚರಿಕೆ ಇಲ್ಲಿದೆ ನೋಡಿ…

    ಮುಂಬೈ: ಓಲಾ ಆ್ಯಪ್​ ಹಾಕಿಸಿಕೊಂಡು ಮೋಸ ಹೋಗಿರುವ ಬಗ್ಗೆ ಇದಾಗಲೇ ಕೆಲವರು ದೂರಿದ್ದಾರೆ. ಸುಮ್ಮನೆ ಆ್ಯಪ್​ ಓಪನ್​ ಮಾಡಿ ಕ್ಲೋಸ್​ ಮಾಡಿದರೂ ಮುಂದಿನ ಟ್ರಿಪ್​ ವೇಳೆ ಕ್ಯಾನ್ಸಲೇಷನ್​ ಚಾರ್ಜ್​ ಎಂದು ಹಣವನ್ನೂ ಕಳೆದುಕೊಂಡಿರಬಹುದು.

    ಇಂಥದ್ದೇ ಮೂವರು ಖದೀಮರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ಈ ರೀತಿ ಸುಲಿಗೆಗೆ ಇಳಿದಿರುವ ಇನ್ನೂ ಚಾಲಕರ ಶೋಧಕ್ಕೆ ತೊಡಗಿದ್ದಾರೆ. ಮುಂಬೈ ನಗರದಲ್ಲಿ ಗ್ರಾಹಕರನ್ನು ಮೋಸ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಅನೇಕ ಕಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾತ್ರವಲ್ಲದೇ ಇನ್ನೆಷ್ಟು ಕ್ಯಾಬ್​ ಸರ್ವೀಸ್​ಗಳಲ್ಲಿ ಈ ರೀತಿ ಮೋಸ ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಪೊಲೀಸ್​ ಇಲಾಖೆ ವಿಚಾರಣೆ ನಡೆಸುತ್ತಿದೆ.

    ಸದ್ಯ ಬೆಂಗಳೂರು ಮೂಲದ ಒಬ್ಬ ಕ್ಯಾಬ್ ಡ್ರೈವರ್​ ಸೇರಿದಂತೆ ಮೂವರು ಓಲಾ ಕ್ಯಾಬ್​ ಚಾಲಕರು ಮುಂಬೈನಲ್ಲಿ ಸಿಕ್ಕಿಬಿದ್ದಿದ್ದಾರೆ.

    ಅಷ್ಟಕ್ಕೂ ಕೆಲ ಓಲಾ ಕ್ಯಾಬ್​ ಚಾಲಕರು ಗ್ರಾಹಕರಿಗೆ ಟೋಪಿ ಹಾಕುವುದು ಹೇಗೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇವರು ಪ್ಲೇಸ್ಟೋರ್​ನಲ್ಲಿ ಸುಲಭವಾಗಿ ಲಭ್ಯ ಇರುವ ನಕಲಿ ಲೊಕೇಶನ್ ಆ್ಯಪ್ ತಂತ್ರಜ್ಞಾನವನ್ನು ಬಳಸಿಕೊಂಡು ಮೋಸಮಾಡುತ್ತಿದ್ದಾರೆ. ಈ ಆ್ಯಪ್​ ನೋಡಿದ ಗ್ರಾಹಕರಿಗೆ ಅದು ನಕಲಿ ಎಂದು ತಿಳಿಯುವುದೇ ಇಲ್ಲ.

    ಇದನ್ನೂ ಓದಿ: 10 ತಿಂಗಳು ಪಾಕ್​ ಕೈಗೆ ಸಿಕ್ಕು​ ಪೇಚಾಡಿದ್ದ ಮಹಿಳೆ ಕೊನೆಗೂ ಭಾರತ ಸೇರಿದ್ರು!

    ನಿಜವಾಗಿಯೂ ಅಷ್ಟೇ ಹಣ ಆಗಿರಬಹುದು ಎಂದು ನಂಬಿ ತಮ್ಮ ಅರಿವೇ ಇಲ್ಲದೇ ದುಪ್ಪಟ್ಟು ಹಣ ಕೊಡುತ್ತಿದ್ದಾರೆ. ಈ ರೀತಿಯಾಗಿ ಈ ಮೂವರು ಚಾಲಕರು ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
    ನಕಲಿ ಸ್ಥಳ ಅಪ್ಲಿಕೇಶನ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ. ಚಾಲಕರು ನಕಲಿ ಓಲಾ ಕ್ಯಾಬ್ ಡೌನ್​ಲೋಡ್​ ಮಾಡಿಕೊಂಡು, ಈ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಯಾಣಿಕರಿಗೆ ತೋರಿಸುತ್ತಾರೆ. ಹೆಚ್ಚು ದೂರ ಕ್ರಮಿಸಿರುವುದಾಗಿ ಕಂಪೆನಿಗೂ ತಿಳಿಸಿ, ಕಂಪೆನಿಯಿಂದ ಹೆಚ್ಚುವರಿ ಕಮಿಷನ್​ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಹೆಚ್ಚುವರಿ ದುಡ್ಡು ಪಡೆಯುತ್ತಿರುವ ಬಗ್ಗೆ ಕೆಲವು ಪ್ರಯಾಣಿಕರಿಗೆ ಸಂಶಯ ಬಂದ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಇದರ ಬೆನ್ನಟ್ಟಿ ಹೋದ ಪೊಲೀಸರಿಗೆ ಅಸಲಿಯತ್ತು ಗೊತ್ತಾಗಿದೆ. ಸದ್ಯ ಈ ಮೂವರನ್ನು ಅರೆಸ್ಟ್​ ಮಾಡಲಾಗಿದೆ. ಅವರಿಂದ ಸವಾರಿ ವಿವರಗಳು, ಸಿಮ್ ಕಾರ್ಡ್‌ಗಳು, ಮತ್ತು ನೋಂದಾಯಿತ ಕಾರ್ಡ್‌ಗಳು ಸೇರಿದಂತೆ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಂದ 500 ಮೊಬೈಲ್ ಸಿಮ್ ಕಾರ್ಡ್‌ಗಳು ಪೊಲೀಸರಿಗೆ ಸಿಕ್ಕಿವೆ. ಜತೆಗೆ ಲ್ಯಾಪ್‌ಟಾಪ್, ಸ್ಮಾರ್ಟ್​ಪೋನ್​, ರಬ್ಬರ್ ಅಂಚೆಚೀಟಿಗಳು, ಒಂದು ಸ್ವಿಫ್ಟ್ ಕಾರು, ಟೊಯೋಟಾ ಕಾರು ಮತ್ತು ಇತರವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಅಚ್ಚರಿ ಎಂದರೆ ಈ ಬಗ್ಗೆ ಓಲಾ ಕಂಪೆನಿಗೆ ವಿಷಯ ತಿಳಿದಿದ್ದರೂ ಅವರು ತಮ್ಮ ಚಾಲಕರ ವಿರುದ್ಧ ಪೊಲೀಸರಿಗೆ ದೂರು ನೀಡಲಿಲ್ಲ ಮತ್ತು ಓಲಾ ಕಾರ್ಯನಿರ್ವಾಹಕರೊಬ್ಬರು, ಇದು ಹಳೆಯ ಪ್ರಕರಣವಾಗಿದೆ ಎಂದು ಹೇಳಿರುವುದಾಗಿ ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ.

    ಹೀಗೆ ಮಾಡುತ್ತಾರೆ ಮೋಸ:
    ಪೊಲೀಸರು ಹೇಳುವ ಪ್ರಕಾರ, ಇಂಥ ಮೋಸಕ್ಕೆ ಒಳಗಾಗುವವರು ಹೆಚ್ಚಾಗಿ ಹೊಸದಾಗಿ ಓಲಾ ಬುಕ್​ ಮಾಡುವವರು. ಇದರ ಬಗ್ಗೆ ಇಂಥ ಖದೀಮ ಚಾಲಕರು ಚೆನ್ನಾಗಿ ಪತ್ತೆ ಹಚ್ಚಬಲ್ಲರು. ಈ ನಕಲಿ ಆ್ಯಪ್​ ಬಳಸಿ ಅತ್ಯಂತ ಸಮೀಪದ ದಾರಿಯನ್ನೂ ದೂರದ ದಾರಿ ಎಂದು ತೋರಿಸುವ ಜಾಣ್ಮೆ ಈ ಚಾಲಕರಲ್ಲಿ ಇದೆ. ಇದರಿಂದಾಗಿ ಕಿಲೋಮೀಟರ್​ ಹೆಚ್ಚಿದಂತೆ ರೇಟ್​ ಹೆಚ್ಚುತ್ತಾ ಸಾಗುತ್ತದೆ.

    ಇಷ್ಟು ಮಾತ್ರವಲ್ಲದೇ ಓಲಾ ಗ್ರಾಹಕರಿಂದ ಪಾವತಿಸಬೇಕಾದ ರದ್ದತಿ ಶುಲ್ಕಗಳನ್ನು ಪರಿಚಯಿಸಿದೆ. ಯಾವುದಾದರೂ ಕಾರಣಕ್ಕೆ ಕ್ಯಾಬ್​ ಬುಕ್​ ಮಾಡಿ ನಂತರ ಬೇಡ ಎನ್ನಿಸಿದ್ದರೆ ಅದನ್ನು ರದ್ದು ಮಾಡಬಹುದು. ಆದರೆ ಇದಕ್ಕೆ ಸಮಯ ಫಿಕ್ಸ್​ ಮಾಡಲಾಗಿದೆ. ಮೊದಲೇ ರದ್ದು ಮಾಡಿದರೆ ಅದಕ್ಕೆ ಯಾವುದೇ ದಂಡ ಕಟ್ಟಬೇಕಿಲ್ಲ. ಆದರೆ ಇನ್ನೇನು ಪ್ರಯಾಣದ ಸಮಯ ಸಮೀಪವಾದಾಗ ರದ್ದು ಮಾಡಿದರೆ ದಂಡದ ರೂಪದಲ್ಲಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

    ಇದೀಗ ಈ ರದ್ದತಿ ಶುಲ್ಕಗಳನ್ನು ನೇರವಾಗಿ ಚಾಲಕರಿಗೆ ರವಾನಿಸಲಾಗುತ್ತದೆ. ಆದ್ದರಿಂದ ಓಲಾ ಚಾಲಕರು ರದ್ದತಿಯ ವಿನಂತಿಯನ್ನು ಸ್ವೀಕರಿಸುತ್ತಾರೆ. ಆದರೆ ಅದಕ್ಕೆ ಚಾಲನೆ ನೀಡಲು ಬೇಕಂತಲೇ ಲೇಟ್​ ಮಾಡುವ ಮೂಲಕ ದಂಡವನ್ನು ಪ್ರಯಾಣಿಕರ ಮೇಲೆ ಹಾಕುತ್ತಿದ್ದಾರೆ. ಮುಂದಿನ ಸಲ ನೀವೇನಾದರೂ ಮತ್ತೆ ಕ್ಯಾಬ್​ ಬುಕ್​ ಮಾಡಿದರೆ, ಆ ಶುಲ್ಕದ ಜತೆ ಹಿಂದಿನ ರದ್ದತಿಯ ಶುಲ್ಕವೂ ಸೇರುತ್ತದೆ. ಚಾಣಾಕ್ಷ ಚಾಲಕರು ತಮಗಿದು ಗೊತ್ತಿಲ್ಲ. ಕಂಪೆನಿಯಿಂದ ಬಂದದ್ದು. ನೀವು ಹಿಂದೆ ರದ್ದು ಮಾಡಿದ್ದೀರಿ ಎಂದು ಹೇಳಿಬಿಟ್ಟರೆ ಪ್ರಯಾಣಿಕರಿಗೆ ತಾವು ಮೋಸ ಹೋಗಿದ್ದು ತಿಳಿಯುವುದೇ ಇಲ್ಲ.

    ಆದ್ದರಿಂದ ಇಂಥದ್ದೆಲ್ಲಾ ನಿಮಗೆ ಕಂಡುಬಂದರೆ ಕೂಡಲೇ ಓಲಾ ಅವರಿಗೆ ವರದಿ ಮಾಡಿ ಎಂದು ಪೊಲೀಸರು ಹೇಳಿದ್ದಾರೆ.

    ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

    ಅಯೋಧ್ಯೆಯ ಏರ್​ಪೋರ್ಟ್​ ಇನ್ಮುಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನಿಲ್ದಾಣ

    ಪಾಕ್​ನಲ್ಲಿ ಇನ್ಮುಂದೆ ರೇಪ್​ ಹೆಸ್ರು ಕೇಳಿದ್ರೆ ಬೆಚ್ಚಿಬೀಳಲಿದ್ದಾರೆ ಕಾಮುಕರು- ಇದೆಂಥ ಶಿಕ್ಷೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts