More

    ದತ್ತು ತೆಗೆದುಕೊಳ್ಳಲು ಕಾನೂನಿನಡಿ ವಯಸ್ಸಿನ ಮಿತಿ ಇದೆಯೆ? ಆಸ್ತಿ ಭಾಗ ಹೇಗೆ?

    ದತ್ತು ತೆಗೆದುಕೊಳ್ಳಲು ಕಾನೂನಿನಡಿ ವಯಸ್ಸಿನ ಮಿತಿ ಇದೆಯೆ? ಆಸ್ತಿ ಭಾಗ ಹೇಗೆ?ನನ್ನ ತಂಗಿಗೆ ಮದುವೆ ಆಗಿ ಆರು ವರ್ಷಕ್ಕೆ ಅವಳ ಪತಿ ತೀರಿಕೊಂಡಿದ್ದಾರೆ. ಅವರಿಗೆ ಮಕ್ಕಳು ಇಲ್ಲ. ಅವಳ ಪತಿಯ ಸಹೋದರರಲ್ಲಿ ಪಾಲು ಆಗಿಲ್ಲ. ಈಗ ನನ್ನ ತಂಗಿಗೆ ಅನಾರೋಗ್ಯ. ಅವಳ ಆರೈಕೆಗೆ ಮತ್ತು ಮುಂದಿನ ಜೀವನದ ಆಧಾರಕ್ಕೆ ಅವಳ ಸಂಬಂಧಿಕರ ಇಪ್ಪತ್ತುವರ್ಷದ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ. ಅನಾರೋಗ್ಯ ಇರುವಾಗ ದತ್ತು ತೆಗೆದುಕೊಂಡರೆ ಕಾನೂನಿನ ಮಾನ್ಯತೆ ದೊರೆಯುತ್ತದೆಯೇ? ಆಸ್ತಿಯಲ್ಲಿ ಹೆಣ್ಣು ಮಗಳಿಗೆ ಪಾಲು ಸಿಗುತ್ತದೆಯೇ?

    ಉತ್ತರ: ವಿಧವೆಗೆ ಮಗುವನ್ನು ದತ್ತು ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ಆದರೆ, ಹಿಂದೂ ಅಡಾಪ್ಷನ್ಸ್‌ ಅಂಡ್‌ ಮೆಯಿಂಟೆನೆನ್ಸ್‌ ಆಕ್ಟ್‌ ನ ಕಲಂ ಹತ್ತರ ಪ್ರಕಾರ, 15 ವರ್ಷ ಪೂರ್ತಿ ಆಗಿರದ ಮಗುವನ್ನು ಮಾತ್ರ ದತ್ತು ತೆಗೆದುಕೊಳ್ಳುವ ಅವಕಾಶ ಇರುತ್ತದೆ. ಇಪ್ಪತ್ತು ವರ್ಷದ ಹುಡುಗಿಯನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.

    ಆದರೆ, ನಿಮ್ಮ ಜಾತಿಯ, ಕುಟುಂಬದ ಸಂಪ್ರದಾಯದಲ್ಲಿ ಹಲವಾರು ವಂಶಗಳಿಂದ , ಹಲವಾರು ದಶಕಗಳಿಂದ , ಹದಿನೈದು ವರ್ಷಕ್ಕೆ ಮೇಲ್ಪಟ್ಟವರನ್ನು ದತ್ತು ತೆಗದುಕೊಳ್ಳುವ ಪದ್ಧತಿ ಇದ್ದರೆ , ಆ ಪಧ್ಧತಿಯನ್ನು ನೀವು ಕಾನೂನಿನ ಪ್ರಕಾರ ಸಾಬೀತು ಪಡಿಸಲು ಸಾಧ್ಯ ಆಗುವುದಾದರೆ, ಮುಂದುವರೆಯಬಹುದು. ಇಲ್ಲದಿದ್ದರೆ ಇಪ್ಪತ್ತು ವರ್ಷದವರನ್ನು ದತ್ತು ತೆಗದುಕೊಂಡರೂ ಪ್ರಯೋಜನ ಆಗುವುದಿಲ್ಲ.
    ನಿಮ್ಮ ತಂಗಿಯ ಪತಿ ತೀರಿಕೊಂಡ ತಕ್ಷಣ , ಆಕೆಯ ಪತಿಯ ಪಾಲಿನಲ್ಲಿ, ನಿಮ್ಮ ತಂಗಿಗೂ ಮತ್ತು ನಿಮ್ಮ ತಂಗಿಯ ಗಂಡನ ತಾಯಿಗೂ ಸಮಭಾಗ ಇರುತ್ತದೆ. ನಿಮ್ಮ ತಂಗಿ ತನ್ನ ಭಾಗಕ್ಕೆ ಕೇಸು ಹಾಕಬಹುದು. ಅಥವಾ ತನ್ನ ಭಾಗದ ಬಗ್ಗೆ ತನಗೆ ಬೇಕಾದವರಿಗೆ ( ಉದಾಹರಣೆಗೆ: ತನ್ನನ್ನು ನೋಡಿಕೊಂಡ ಹುಡುಗಿಗೆ) ವಿಲ್‌ ಸಹ ಮಾಡಬಹುದು.

    ಪತ್ನಿಯ ಜತೆ ಮೂರೇ ತಿಂಗಳು ಇದ್ದು ಪ್ರತ್ಯೇಕ ಆದವನನ್ನು ಮದುವೆಯಾಗಬಹುದೆ?

    ತಂಗಿಯನ್ನು ತನಗೆ ಮದ್ವೆ ಮಾಡಿಸದಿದ್ರೆ ಡಿವೋರ್ಸ್‌ ಕೊಡ್ತೀನಿ ಅಂತ ಧಮ್ಕಿ ಹಾಕ್ತಿದ್ದಾರೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts