More

    ಬಾಲಕಿ ಹೊಟ್ಟೆಯಲ್ಲಿತ್ತು ಅರ್ಧ ಕೆ.ಜಿಗಿಂತಲೂ ಅಧಿಕ ಕೂದಲು- ವೈದ್ಯರೇ ಕಂಗಾಲು

    ಥಾಣೆ (ಮಹಾರಾಷ್ಟ್ರ): ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆಯಾದರೆ ವಿಚಿತ್ರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಒಂದು ಕೂದಲು ತಿನ್ನುವುದು.

    ಅದೇ ರೀತಿ ಚಿಕ್ಕಂದಿನಿಂದಲೂ ಕೂದಲು ತಿನ್ನುತ್ತ ಹುಷಾರಾಗಿಯೇ ಇದ್ದ 12 ವರ್ಷದ ಬಾಲಕಿ ಶ್ರೀಲಕ್ಷ್ಮಿ ಕನೋಜಿಯಾ ಹೊಟ್ಟೆಯಿಂದ ಸುಮಾರು 650 ಗ್ರಾಂ ಕೂದಲನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. ಈ ಪರಿಯ ಕೂದಲು ಹೊಟ್ಟೆಯಲ್ಲಿ ಜೀರ್ಣವಾಗದೇ ಇರುವುದನ್ನು ಕಂಡು ವೈದ್ಯರೇ ಅಚ್ಚರಿಪಟ್ಟುಕೊಂಡಿದ್ದಾರೆ.

    ಮಹಾರಾಷ್ಟ್ರದ ಕಲ್ಯಾಣದ ನಿವಾಸಿಯಾಗಿರುವ ಬಾಲಕಿ ಎರಡು ವರ್ಷದ ಮಗುವಾಗಿದ್ದಾಗಿನಿಂದಲೂ ಕೂದಲನ್ನು ತಿನ್ನುವ ಚಟವಿತ್ತು. ಈ ಚಟವನ್ನು ಬಿಡಿಸಲು ಪಾಲಕರು ಯತ್ನಿಸಿದ್ದರು. ಆದರೆ ಆಕೆ ಕೇಳುತ್ತಿರಲಿಲ್ಲ. ಇದರಿಂದ ಯಾವುದೇ ಅನಾರೋಗ್ಯ ಸಮಸ್ಯೆ ಆಗಿಲ್ಲದ್ದನ್ನು ಗಮನಿಸಿದ್ದ ಪಾಲಕರೂ ದೊಡ್ಡವಳಾದ ಮೇಲೆ ಸರಿಯಾಗುತ್ತದೆ ಎಂದು ಸುಮ್ಮನಾಗಿದ್ದರು. ಆದರೆ ಈಚೆಗೆ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಕೂದಲು ಕಾಣಿಸಿಕೊಂಡಿದ್ದು, ಆಕೆಯ ಕರುಳಿನಲ್ಲಿ ಸಿಲುಕಿತ್ತು. ಇದೇ ಕಾರಣದಿಂದ ಆಕೆಗೆ ಎರಡು ತಿಂಗಳಿಂದ ಸರಿಯಾಗಿ ಆಹಾರ ಸೇವನೆ ಮಾಡಲು ಸಾಧ್ಯವಾಗದೇ ಸಮಸ್ಯೆ ಉಂಟಾಗಿತ್ತು. ಈ ಆಪರೇಷನ್ ಮಾಡಿ ಕೂದಲನ್ನು ಹೊರತೆಗೆದಿದ್ದಾರೆ.

    ಇವಳ ಗಂಡನೂ ಅವನೇ, ಅವಳ ಗಂಡನೂ ಇವನೇ- ಅವಳಿ ಜವಳಿ ಕಥೆ ಕಟ್ಟಿ ಇಬ್ಬರನ್ನೂ ಒಲಿಸಿಕೊಂಡ!

    3ನೇ ಬಾರಿ ಮೈಸೂರು ಮೇಯರ್ ಚುನಾವಣೆ- ಓರೆಗಿತ್ತಿ ಗೆಲ್ಲಿಸಿ ಎಂದು ಗಳಗಳನೆ ಅತ್ತ ಮಾಜಿ ಮೇಯರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts