More

    3ನೇ ಬಾರಿ ಮೈಸೂರು ಮೇಯರ್ ಚುನಾವಣೆ- ಓರೆಗಿತ್ತಿ ಗೆಲ್ಲಿಸಿ ಎಂದು ಗಳಗಳನೆ ಅತ್ತ ಮಾಜಿ ಮೇಯರ್‌

    ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮತ್ತೆ ದಿನಾಂಕ ನಿಗದಿಯಾಗಿದೆ. ಈ ಹಿಂದೆ ಫೆ.24ರಂದು ಮೇಯರ್ ಚುನಾವಣೆ ನಡೆದಿತ್ತು. ರುಕ್ಮಿಣಿ ಮಾದೇಗೌಡ ಮೇಯರ್‌ ಆಗಿ ಆಯ್ಕೆಯಾಗಿದ್ದರು.

    ಆದರೆ ಮೂರು ತಿಂಗಳ ಬಳಿಕ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾಗಿತ್ತು. 36ನೇ ವಾರ್ಡ್‌ನ ಕಾರ್ಪೋರೇಟ್‌ ಆಗಿದ್ದ ರುಕ್ಮಿಣಿ ಅವರು ತಪ್ಪು ಆದಾಯ ಪತ್ರ ಸಲ್ಲಿಸಿದಕ್ಕೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರನ್ನು ಮೇಯರ್‌ ಸ್ಥಾನದಿಂದ ತೆಗೆದುಹಾಕಲಾಗಿದ್ದು, ಆ ಸ್ಥಾನಕ್ಕೀಗ ಚುನಾವಣೆ ನಡೆಯಲಿದೆ.

    ಹಂಗಾಮಿ ಮೇಯರ್ ಆಗಿ ಅನ್ವರ್ ಬೇಗ್ ಅಧಿಕಾರ ವಹಿಸಿಕೊಂಡಿದ್ದಾರೆ. ಮೇಯರ್‌ ಸ್ಥಾನಕ್ಕೆ ಚುನಾವಣೆ ಜೂನ್‌ ತಿಂಗಳಿನಲ್ಲಿ ನಡೆಸಲು ಸಿದ್ಧತೆ ನಡೆದಿತ್ತು. ಆದರೆ ಕೋರ್ಟ್‌ ಆದೇಶದ ಮೇರೆಗೆ ಚುನಾವಣೆ ಮುಂದೂಡಿಕೆಯಾಗಿದೆ. ಇದೀಗ ಆಗಸ್ಟ್ 25ಕ್ಕೆ ಚುನಾವಣೆ ನಿಗದಿಯಾಗಿದ್ದು, ಮೂರು ಪಕ್ಷಗಳ ನಡುವೆ ಭಾರಿ ಪೈಪೋಟಿ ಶುರುವಾಗಿದೆ.

    ಇದೇ ವೇಳೆ ರುಕ್ಮಿಣಿ ಅವರ ವಾರ್ಡ್‌ ಆಗಿರುವ 36ರಲ್ಲಿ ಅವರ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್‌ನಿಂದ ರುಕ್ಮಿಣಿ ಅವರ ಓರಗತ್ತಿ ಲೀಲಾವತಿ ಮಹೇಶ್ ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಅವರ ಪರವಾಗಿ ರುಕ್ಮಿಣಿ ಅವರು ಕಣ್ಣೀರಿನಿಂದ ಮತಯಾಚನೆ ಮಾಡಿದ್ದಾರೆ. ಇದೇ ವೇಳೆ ತಮ್ಮ ವಿರುದ್ಧ ಕೋರ್ಟ್‌ಗೆ ಹೋದವರಿಗೆ ಹಿಡಿ ಶಾಪ ಹಾಕಿ ಕಣ್ಣೀರು ಸುರಿಸಿದ ರುಕ್ಮಿಣಿ, ಓರೆಗಿತ್ತಿಗೆ ಮತ ನೀಡುವಂತೆ ಕೋರಿಕೊಂಡಿದ್ದಾರೆ.

    ಈ ಬಾರಿ ಶತಾಯಗತಾಯ ಗದ್ದುಗೆಗೇರಲು ಬಿಜೆಪಿ ಕಸರತ್ತು ನಡೆಸಿದೆ. ಮಾಜಿ ಸಿಎಂ ಯಡಿಯೂರಪ್ಪ ಸಂಬಂಧಿ ಸುನಂದಾ ಪಾಲನೇತ್ರಾ ಅವರನ್ನು ಮೇಯರ್ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಕಳೆದ ಬಾರಿಯಂತೆ ಈ ಬಾರಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಆಗುವ ಸಂದೇಹವಿದೆ. ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ರಜನಿ ಅಣ್ಣಯ್ಯ ಸ್ಪರ್ಧಾ ಕಣದಲ್ಲಿದ್ದಾರೆ. ಒಟ್ಟಿನಲ್ಲಿ ಮೇಯರ್‌ ಯಾರಾಗುತ್ತಾರೆ ಎನ್ನುವುದೇ ಕುತೂಹಲ.

    VIDEO: ರಾಹುಲ್‌ಗಾಂಧಿಗೆ ಸಪೋರ್ಟ್‌ ಮಾಡಲು “ಟ್ವಿಟರ್‌ ಬರ್ಡ್‌” ಫ್ರೈ ಮಾಡಿದ ಕಾರ್ಯಕರ್ತರು!

    ಅವರು ಕೊಂದರೆ ದೇವಿಯ ಮಡಿಲಲ್ಲಿ ಖುಷಿಯಿಂದ ಪ್ರಾಣ ಬಿಡುವೆ, ಅನ್ನ ಕೊಟ್ಟ ಅಫ್ಘಾನ್‌ ಬಿಟ್ಟು ಬರಲ್ಲ ಎಂದ ಅರ್ಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts