More

    ಅಮೆರಿಕ ಚುನಾವಣೆಯಲ್ಲಿ ಗೆದ್ದ ನಾಲ್ವರು ಭಾರತೀಯರು!

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಮೂಲದ ಮುಖಂಡರ ಪ್ರಾಬಲ್ಯವೂ ಮುಂದುವರೆದಿದೆ.

    ಭಾರತೀಯ ಮೂಲದ ಡೆಮಾಕ್ರಾಟಿಕ್ ಕಾಂಗ್ರೆಸ್ ನಾಯಕ ರಾಜಾ ಕೃಷ್ಣಮೂರ್ತಿ ಸತತ ಮೂರನೆ ಬಾರಿಗೆ ಅಮೆರಿಕದ ಪ್ರತಿನಿಧಿನಗಳ ಸದನಕ್ಕೆ (ಸಂಸತ್) ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಜನಿಸಿದ ರಾಜಾ ಅವರು ಈ ಮೂಲಕ ಅಮೆರಿಕದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

    ರಾಜಾ ಕೃಷ್ಣಮೂರ್ತಿ(47) ಅವರು ಇಲಿನಾಯ್ಸ್ ರಾಜ್ಯದಲ್ಲಿ ಲಿಬರಲ್ ಪಕ್ಷದ ಅಭ್ಯರ್ಥಿ ಪ್ರೆಸ್‍ಟನ್ ನೆಲ್ಸನ್ ಅವರನ್ನು ಸುಲಭವಾಗಿ ಮಣಿಸಿ ಯುಎಸ್ ಹೌಸ್ ಆಫ್ ರೆಪ್ರಸೆಂಟಿಟಿವ್‍ಗೆ ಮರು ಆಯ್ಕೆಯಾದ್ದಾರೆ.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಯಾರಾಗ್ತಾರೆ 46ನೇ ಅಧ್ಯಕ್ಷ?

    ಎಣಿಕೆ ಮಾಡಲಾದ ಒಟ್ಟು ಮತಗಳಲ್ಲಿ ರಾಜಾ ಅವರು ಶೇ.71ಕ್ಕೂ ಹೆಚ್ಚು ಮತಗಳನ್ನು ತಮ್ಮದಾಗಿಸಿಕೊಂಡು ಮೂರನೆ ಬಾರಿಗೆ ಜಯ ಸಾಧಿಸಿದ್ದಾರೆ. 2016ರಿಂದಲೂ ಅಮೆರಿಕ ಸಂಸತ್ತಿಗೆ ಸತತವಾಗಿ ಆಯ್ಕೆಯಾಗುತ್ತಿರುವ ರಾಜಾ ಕೃಷ್ಣಮೂರ್ತಿ ಅವರ ‍ಪಾಲಕರು ತಮಿಳುನಾಡಿನವರು.

    ಭಾರತೀಯ ಮೂಲದವರೇ ಆದ ಕಾಂಗ್ರೆಸ್ಸಿಗ ಅಮಿ ಬೇರಾ ಅವರು ಕ್ಯಾಲಿಫೋರ್ನಿಯಾದಿಂದ ಐದನೆ ಬಾರಿ ಗೆಲುವು ಬಯಸಿದ್ದಾರೆ. ಅಮಿ ಬೆರಾ ಅವರು ಎದುರಾಳಿ ರಿಪಬ್ಲಿಕನ್‌ ಪಕ್ಷದ ಸ್ಕಾಟ್‌ ಜೋನ್ಸ್‌ ಅವರಿಗೀಂತ ಶೇ ಎರಡರಷ್ಟು ಹೆಚ್ಚಿನ ಮತ ಗಳಿಸಿದ್ದಾರೆ. 1957-1963ರವರೆಗೆ ದಿಲೀಪ್‌ ಸಿಂಗ್‌ ಸೌದ್‌ ಎಂಬವರು ಸತತ ಮೂರು ಬಾರಿ ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿದ್ದ ಭಾರತೀಯರಾಗಿದ್ದರು. ಈಗ ಅಮಿ ಬೆರಾ ಅವರೂ ಅದೇ ದಾಖಲೆ ಮಾಡಿದ್ದಾರೆ.

    ವಾಷಿಂಗ್ಟನ್‌ ಸ್ಟೇಟ್‌ನಿಂದ ಪ್ರಮೀಳಾ ಜಯಪಾಲ್‌, ಕ್ಯಾಲಿಫೊರ್ನಿಯಾದಿಂದ ರೊ ಖನ್ನಾ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ಗೆ ಆಯ್ಕೆಯಾಗಿದ್ದಾರೆ. ರೋ ಖನ್ನಾ ಅವರು ಸತತ ಮೂರನೆ ಬಾರಿ ಪ್ರತಿನಿಧಿಗಳ ಸದನದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿದ್ದಾರೆ.
    ಭಾರತೀಯರ ಪ್ರಾಬಲ್ಯ ಇರುವ ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ ರಾಜ್ಯಗಳ ಚುನಾವಣಾ ಫಲಿತಾಂಶ ಸಂಜೆ ಲಭಿಸುವ ಸಾಧ್ಯತೆ ಇದೆ. ಭಾರತೀಯ ಮೂಲದ ಪ್ರಭಾವಿ ನಾಯಕರಾದ ಡಾ. ಹಿರಲ್ ತಿಪಿರ್‍ನೆನಿ, ಕುಲಕರ್ಣಿ, ಮಂಗ ಅನಂತಮೂಲ ಮತ್ತಿತರರ ರಾಜಕೀಯ ಭವಿಷ್ಯವೂ ಸಂಜೆ ನಿರ್ಧಾರವಾಗಲಿದೆ.

    ಇಡೀ ಗುಜರಾತ್​ ಕಾಂಗ್ರೆಸ್ಸನ್ನು 25 ಕೋಟಿಗೆ ಖರೀದಿಸಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts